100 ಮೇಯರ್‌ಗಳ ಕಾಶಿಯಾತ್ರೆ

Public TV
1 Min Read
Kashi Vishwanath Temple Varanasi 2

ಲಕ್ನೋ: ಬಿಜೆಪಿ ಅಧಿಕಾರದಲ್ಲಿರುವ 12 ರಾಜ್ಯಗಳ ಮುಖ್ಯಮಂತ್ರಿಗಳು ವಾರಣಾಸಿಗೆ ಭೇಟಿ ನೀಡಿದ ಬೆನ್ನಲ್ಲೇ ಇದೀಗ ಭಾರತದ 100 ಮೇಯರ್‌ಗಳು  ಕಾಶಿಗೆ ಭೇಟಿ ನೀಡಿದ್ದಾರೆ.

kashi modi mayors

ಇಂದು ವಾರಣಾಸಿಯಲ್ಲಿ ಅಖಿಲ ಭಾರತ ಮೇಯರ್‌ಗಳ ಸಮ್ಮೇಳನ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ವಾರಾಣಸಿಯ ಸಂಸದರಾದ ಬಳಿಕ ಕಾಶಿ ಬದಲಾಗಿ ಅಭಿವೃದ್ಧಿಯತ್ತ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಶಿ ಮಾದರಿ ಅಭಿವೃದ್ಧಿಯ ದರ್ಶನ ಮೇಯರ್‌ಗಳಿಗೆ ಆಗಬೇಕು ಹಾಗೂ ಅವರು ಕೂಡ ತಮ್ಮ ನಗರದಗಳಲ್ಲಿ ಈ ಮಾದರಿ ಅವಳಪಡಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಕಾಶಿಯಲ್ಲಿ ಮೇಯರ್‌ಗಳ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಇದನ್ನೂ ಓದಿ: ಕಾಶಿಯಿಂದ ಕಾಶ್ಮೀರದವರೆಗೆ ಅಭಿವೃದ್ಧಿ – ಮೋದಿ ಅವಧಿಯಲ್ಲಿ ಯಾವೆಲ್ಲ ದೇವಾಲಯಗಳು ಜೀರ್ಣೋದ್ಧಾರಗೊಂಡಿದೆ?

ಕರ್ನಾಟಕದಿಂದ 5 ಮೇಯರ್: ವಾರಣಾಸಿಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಮೇಯರ್‌ಗಳ ಸಮ್ಮೇಳನದಲ್ಲಿ ರಾಜ್ಯದಿಂದ 5 ಮಂದಿ ಭಾಗವಹಿಸಲಿದ್ದಾರೆ. ಮೈಸೂರಿನ ಮೇಯರ್ ಸುನಂದಾ ಪಾಲನೇತ್ರ, ಶಿವಮೊಗ್ಗದ ಸುನೀತಾ ಅಪ್ಪಣ್ಣ, ಮಂಗಳೂರಿನ ಪ್ರೇಮಾನಂದ ಶೆಟ್ಟಿ, ದಾವಣಗೆರೆಯ ಎಸ್.ಟಿ ವೀರೇಶ, ತುಮಕೂರಿನ ಕೃಷ್ಣಪ್ಪ ಪಾಲ್ಗೊಂಡಿದ್ದಾರೆ. ಕಾಶಿ ವಿಶ್ವನಾಥನ ದರ್ಶನ ಜೊತೆಗೆ ಕಾಶಿ ಅಭಿವೃದ್ಧಿಯ ಕುರಿತು ಅರಿವು ನೀಡುವ ಕಾರ್ಯಕ್ರಮ ಇದಾಗಿದೆ.

kashi modi mayors 1

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವರ್ಚುವಲ್ ಆಗಿ ಸಮ್ಮೇಳನಕ್ಕೆ ಚಾಲನೆ ನೀಡಿ ಭಾಷಣ ಮಾಡಲಿದ್ದಾರೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ನಗರಾಭಿವೃದ್ಧಿ ಸಚಿವ ಹರ್‍ದೀಪ್ ಸಿಂಗ್ ಪುರಿ ಅವರು ಸಹ ಈ ಸಭೆಯಲ್ಲಿ ಭಾಗವಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *