100 ಇ-ರಿಕ್ಷಾಗಳನ್ನು ಖರೀದಿಸಿ ಕೆಲಸವಿಲ್ಲದವ್ರಿಗೆ ಕೊಟ್ಟ ಸೋನು ಸೂದ್

Public TV
1 Min Read
SONU SOOD 1

ಮುಂಬೈ: ಮಹಾಮಾರಿ ಕೊರೊನಾ ಬಂದ ಬಳಿಕ ಸಂಕಷ್ಟದಲ್ಲಿದ್ದವರಿಗೆ ಸಹಾಯ ಹಸ್ತ ಚಾಚುವ ಮೂಲಕ ಮನೆ ಮಾತಾಗಿದ್ದ ಬಾಲಿವುಡ್ ನಟ ಸೋನು ಸೂದ್ ಇದೀಗ ಮತ್ತೊಮ್ಮೆ ಮಾನವೀಯ ಕಾರ್ಯ ಮಾಡಿದ್ದಾರೆ. ಈ ಮೂಲಕ ಕಷ್ಟದಲ್ಲಿದ್ದವರಿಗೆ ಈಗಲೂ ಸಹಾಯ ಮಾಡುವ ಮೂಲಕ ಬಡವರ ಬಂಧುವಾಗಿದ್ದಾರೆ.

SONU SOOD

ಹೌದು. ನಿರುದ್ಯೋಗಿಗಳು ಹೊಸ ಬದುಕು ಆರಂಭಿಸಬೇಕು ಎಂದು 100 ಇ-ರಿಕ್ಷಾಗಳನ್ನು ಖರೀದಿಸಿದ್ದಾರೆ. ಅಲ್ಲದೆ ಅವುಗಳನ್ನು ಸ್ವಾವಲಂಬಿಯಾಗಿ ಬದುಕಲು ಉದ್ಯೋಗ ಇಲ್ಲದವರಿಗೆ ನೀಡಿದ್ದಾರೆ.

ಈ ಬಗ್ಗೆ ಇ-ರಿಕ್ಷಾ ಪಡೆದುಕೊಂಡವರು ಮಾತನಾಡಿ, ಇಷ್ಟು ದಿನ ಕೆಲಸ ಇಲ್ಲದೆ ಖಾಲಿ ಕುಳಿತಿದ್ವಿ. ಇದೀಗ ಸೋನು ಸೂದ್ ಅವರು ನಮಗೆಲ್ಲ ಇ-ರಿಕ್ಷಾ ನೀಡಿದ್ದಾರೆ. ಇದು ನಮಗೆ ಹೊಸ ಬದುಕು ಕಟ್ಟಿಕೊಳ್ಳಲು ಸಹಾಯವಾಗಿದೆ. ಕೆಲಸ ಕಳೆದುಕೊಂಡ ನಮಗೆ ಇನ್ನು ಬದುಕಲ್ಲಿ ಏನೂ ಉಳೀದಿಲ್ಲ ಅಂತ ಅಂದುಕೊಂಡಿದ್ದೆವು. ಆದರೆ ಇದೀಗ ನಟ ನಮಗೆ ದೇವರ ರೂಪದಲ್ಲಿ ಬಂದು ಸಹಾಯ ಮಾಡಿದ್ದಾರೆ. ಅವರಿಗೆ ಎಷ್ಟು ಧನ್ಯವಾದ ತಿಳಿಸಿದರೂ ಸಾಲದು ಎಂದು ಆನಂದಭಾಷ್ಪ ಹರಿಸಿದ್ದಾರೆ.

SONU SOOD

ಇತ್ತ ಸೋನು ಸೂದ್ ಅವರು ತಮ್ಮ ಇನ್‍ಸ್ಟಾದಲ್ಲಿ ವೀಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಇ-ರಿಕ್ಷಾ ಪಡೆದ ಜನರು ಸಂತೋಷ ವ್ಯಕ್ತಪಡಿಸಿರುವುದನ್ನು ಕಾಣಬಹುದಾಗಿದೆ. ಅಲ್ಲದೆ ಇದು ನನ್ನ ಪ್ರಯಾಣವನ್ನು ವಿಶೇಷವಾಗಿಸಿದೆ ಎಂದು ನಟ ಬರೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಮಾತ್ರವಲ್ಲದೆ ಈಗಲೂ ಸೋನು ಸೂದ್ ಅವರು ಬಡವರ ಬೆನ್ನಿಗೆ ನಿಂತಿದ್ದಾರೆ. ಈಗಲೂ ಸಂಕಷ್ಟದಲ್ಲಿರುವ ಅದೆಷ್ಟೋ ಮಂದಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ. ಈ ಮೂಲಕ ಓರ್ವ ನಟರಾಗಿ ಇತರ ನಟರಿಗೆ ಮಾದರಿಯಾಗಿದ್ದಾರೆ.

 

View this post on Instagram

 

A post shared by Sonu Sood (@sonu_sood)

Share This Article
Leave a Comment

Leave a Reply

Your email address will not be published. Required fields are marked *