ಕಾಲುವೆಗೆ ಬಿದ್ದ ಸ್ಕಾರ್ಪಿಯೋ ಕಾರು – ನಾಲ್ವರು ಯುವಕರು ಪಾರು

Public TV
1 Min Read
car 1

ಚಿಕ್ಕಬಳ್ಳಾಪುರ: ಸ್ಕಾರ್ಪಿಯೋ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಘಟನೆ ಚಿಕ್ಕಬಳ್ಳಾಪುರದ ಗೌರಿಬಿದನೂರು ಮಾರ್ಗದ ತಿಪ್ಪೇನಹಳ್ಳಿ ಬಳಿ ನಡೆದಿದೆ.

car 2 medium

ಅದೃಷ್ಟವಶಾತ್ ಘಟನೆ ವೇಳೆ ಪವಾಡಸದೃಷ ರೀತಿಯಲ್ಲಿ ಕಾರಿನಲ್ಲಿದ್ದ ನಾಲ್ವರು ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಅವಘಡ ಚಿಕ್ಕಬಳ್ಳಾಪುರ ನಗರದ ಡಿವೈನ್ ಸಿಟಿ ಲೇಔಟ್ ನಿವಾಸಿ ಯುವಕನೊರ್ವ ತನ್ನ ನಾಲ್ವರು ಸ್ನೇಹಿತರೊಂದಿಗೆ ಗೌರಿಬಿದನೂರು ಮಾರ್ಗದ ಕಣಿವೆ ಕಡೆ ತೆರಳುತ್ತಿದ್ದರು. ಟೈರ್ ಬ್ಲಾಸ್ಟ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಕಾಲುವೆಗೆ ಜಂಪ್ ಹೊಡೆದಿದೆ ಎಂದು ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ.

car 3 medium

ಘಟನೆಯಲ್ಲಿ ಕಾರಿನಲ್ಲಿದ್ದ ಅಭಿ ಹಾಗೂ ವಿಕ್ಕಿ ಎಂಬ ಇಬ್ಬರು ಯುವಕರು ಗಾಯಗೊಂಡು ಆಸ್ಪತ್ರೆಗೆ ದಾಖಲಿಸಿದರೆ, ಇನ್ನಿಬ್ಬರು ಯುವಕರು ಪ್ರಾಥಮಿಕ ಚಿಕಿತ್ಸೆ ಪಡೆದು ತಕ್ಷಣವೇ ಚೇತರಿಸಿಕೊಂಡು ಆರಾಮಾಗಿದ್ದಾರೆ. ಗಾಯಗೊಂಡ ಮತ್ತಿಬ್ಬರು ಸಹ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಪ್ರಪಾತಕ್ಕೆ ಬಿದ್ದ ಹಸುಗಳು – ಫಲ ನೀಡದ ಯುವಕರ ಪ್ರಯತ್ನ

ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ಸ್ಕಾರ್ಪಿಯೋ ಕಾರು ಸಂಪೂರ್ಣ ನಜ್ಜುಗುಜ್ಜಾಗಿ ಹಾಳಾಗಿದೆ. ಇದನ್ನೂ ಓದಿ:  ಅಧಿಕ ದರದಲ್ಲಿ ಮದ್ಯ ಮಾರಾಟ-ಗ್ರಾಮದಲ್ಲಿ ಡಂಗುರ ಸಾರಿದ ಮದ್ಯಪ್ರಿಯರು

Share This Article