ವಾಷಿಂಗ್ಟನ್: ಗರ್ಭಪಾತದ ಸಾಂವಿಧಾನಿಕ ಹಕ್ಕನ್ನು ಅಮೆರಿಕದ ಸುಪ್ರೀಂ ಕೋರ್ಟ್ ಈಚೆಗಷ್ಟೇ ರದ್ದುಗೊಳಿಸಿದೆ. ಈ ನಡುವೆ ಒಹಿಯೋ ರಾಜ್ಯದಲ್ಲಿ ಅತ್ಯಾಚಾರಕ್ಕೆ ಬಲಿಯಾಗಿ ಗರ್ಭಿಣಿಯಾಗಿದ್ದ 10 ವರ್ಷದ ಬಾಲಕಿಯನ್ನು ಗರ್ಭಪಾತ ಚಿಕಿತ್ಸೆಗಾಗಿ ಇಂಡಿಯಾನಕ್ಕೆ ಕರೆದೊಯ್ಯಲು ಒತ್ತಾಯಿಸಿದ ಘಟನೆ ಅಮೆರಿಕದಲ್ಲಿ ನಡೆದಿದೆ.
Advertisement
ಅಮರಿಕದ ಒಹಿಯೋದಲ್ಲಿ ಅತ್ಯಾಚಾರಕ್ಕೆ ಬಲಿಯಾಗಿ 6 ವಾರಗಳ ಗರ್ಭಿಣಿಯಾಗಿದ್ದ 10 ವರ್ಷದ ಬಾಲಕಿಯೊಬ್ಬಳನ್ನು ಗರ್ಭಪಾತಕ್ಕಾಗಿ ಇಂಡಿಯಾನಕ್ಕೆ ಕಳುಹಿಸುವಂತೆ ಒತ್ತಾಯಿಸಲಾಗಿದೆ. ಅಮೆರಿಕದಲ್ಲಿ ಗರ್ಭಪಾತ ಹಕ್ಕನ್ನು ನಿಷೇಧಿಸಿದ ನಂತರ ಜೂನ್ 24ರಂದು ಒಹಿಯೋದಲ್ಲಿ ಅಧಿಕೃತವಾಗಿ ಜಾರಿಗೆ ತರಲಾಯಿತು. ಹಾಗಾಗಿ ಗರ್ಭಪಾತ ಮಾಡಿಸಲು ಅವಕಾಶವಿಲ್ಲದಿದ್ದರಿಂದ ಇಂಡಿಯಾನ ರಾಜ್ಯಕ್ಕೆ ಕಳುಹಿಸುವಂತೆ ಒತ್ತಾಯಿಸಲಾಯಿತು. ಇದನ್ನೂ ಓದಿ: ಅಮೆರಿಕದಲ್ಲಿ ಗರ್ಭಪಾತ ಹಕ್ಕು ನಿಷೇಧ: ಆಸ್ಟ್ರೇಲಿಯಾದಲ್ಲಿ ಹೋರಾಟದ ಕಿಚ್ಚು
Advertisement
Advertisement
ಇಂಡಿಯಾನದ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞ ಡಾ.ಕೈಟ್ಲಿನ್ ಬರ್ನಾರ್ಡ್ ಅವರು ಅತ್ಯಾಚಾರಕ್ಕೆ ಒಳಗಾಗಿದ್ದ ಮಗುವಿಕೆ ಚಿಕಿತ್ಸೆ ನೀಡುವಂತೆ ಸಹಾಯ ಕೋರಿದ್ದರು. ಇದನ್ನೂ ಓದಿ: ಕೋಮಾದಲ್ಲಿರುವ ಮಗನ ಜೀವ ಉಳಿಸಲು ದೇವರ ಮೊರೆ ಹೋದ ತಾಯಿ – ಮಗು ಚೇತರಿಕೆ!
Advertisement
ಇಂಡಿಯಾನಾ ರಾಜ್ಯದಲ್ಲಿ ಗರ್ಭಪಾತವು ಇನ್ನೂ ಕಾನೂನು ಬಾಹಿರವಾಗಿಲ್ಲ. ಆದರೆ ಇಲ್ಲಿನ ಶಾಸಕರು ಇದೇ ತಿಂಗಳ ಕೊನೆಯಲ್ಲಿ ಅಧಿವೇಶನ ಕರೆಯಲಿದ್ದು, ಕಾರ್ಯವಿಧಾನವನ್ನು ನಿಷೇಧಿಸುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
ಏನಿದು ಘಟನೆ?
ಗರ್ಭಪಾತದ ಸಾಂವಿಧಾನಿಕ ಹಕ್ಕನ್ನು ಅಮೆರಿಕದ ಸುಪ್ರೀಂ ಕೋರ್ಟ್ ಕಳೆದ ವಾರ ರದ್ದುಗೊಳಿಸಿತು. ಗರ್ಭಪಾತಕ್ಕೆ ಸಂಬಂಧಿಸಿದಂತೆ ಸಾಂವಿಧಾನಿಕ ಹಕ್ಕು ಎಂದು ಘೋಷಿಸಲಾಗಿದ್ದ 1973ರ ತೀರ್ಪನ್ನು ಅಮೆರಿಕ ಸುಪ್ರೀಂ ಕೋರ್ಟ್ ಕಳೆದ ಶುಕ್ರವಾರ ರದ್ದುಗೊಳಿಸಿತು. ಈ ನಿರ್ಧಾರವನ್ನು ವಿರೋಧಿಸಿ ದೇಶದ ಪ್ರಮುಖ ನಗರಗಳಲ್ಲಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ಈಗ ಅಮೆರಿಕದಲ್ಲಿರುವಂತೆ ಆಸ್ಟ್ರೇಲಿಯಾದ ರಾಜ್ಯಗಳೂ ಗರ್ಭಪಾತದ ಕಾನೂನುಗಳನ್ನು ಹೊರಡಿಸಲು ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಮಹಿಳೆಯರೂ ಪ್ರತಿಭಟನೆ ನಡೆಸುತ್ತಿದ್ದಾರೆ.