ನವದೆಹಲಿ: ಶಿಕ್ಷಣ (Education) ಹಾಗೂ ಸರ್ಕಾರಿ ಉದ್ಯೋಗದಲ್ಲಿ (Government Job) ಆರ್ಥಿಕವಾಗಿ ಹಿಂದುಳಿದ ಮೇಲರ್ಗದ ಬಡ ಅಭ್ಯರ್ಥಿಗಳಿಗೆ ಶೇ.10ರಷ್ಟು ಮೀಸಲಾತಿ (Reservation) ನೀಡಲು ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಂದಿದ್ದ 103ನೇ ತಿದ್ದುಪಡಿಯ ಸಿಂಧುತ್ವ ಪ್ರಶ್ನಿಸಲಾಗಿರುವ ಹಲವು ಅರ್ಜಿಗಳ ವಿಚಾರಣೆ ಕುರಿತಂತೆ ಸುಪ್ರೀಂಕೋರ್ಟ್ (Supreme Court) ಸೋಮವಾರ ಮಹತ್ವದ ತೀರ್ಪು ಪ್ರಕಟಿಸಲಿದೆ.
Advertisement
ಹೀಗಾಗಿ `ಮೇಲ್ವರ್ಗದ ಮೀಸಲು’ ಎಂದೇ ಕರೆಯಲ್ಪಡುವ ಈ ಮೀಸಲಾತಿ ಮುಂದುವರಿಯುತ್ತದೆಯೇ? ಅಥವಾ ರದ್ದಾಗುತ್ತದೆಯೇ? ಅಥವಾ ಬದಲಾವಣೆಯಾಗುತ್ತದೆಯೇ ಎಂಬ ಕುತೂಹಲ ಗರಿಗೆದರಿದೆ. ಇದನ್ನೂ ಓದಿ: ಹೇಮಾವತಿ ಹಿನ್ನೀರಿನಲ್ಲಿ ತೇಲುವ ಹಡಗು- ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಶೆಟ್ಟಿಹಳ್ಳಿ ಚರ್ಚ್
Advertisement
Advertisement
ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ (CJI) ಉದಯ್ ಉಮೇಶ್ ಲಲಿತ್ (UU Lalit), ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ, ನ್ಯಾಯಮೂರ್ತಿ ಎಸ್.ರವೀಂದ್ರ ಭಟ್, ನ್ಯಾಯಮೂರ್ತಿ ಬೇಲಾ ಎಂ. ತ್ರಿವೇದಿ ಹಾಗೂ ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ತೀರ್ಪು ಪ್ರಕಟಿಸಲಿದೆ. ಇದನ್ನೂ ಓದಿ: ಚಂದ್ರಗ್ರಹಣ – ನಾಳೆ ರಾಜ್ಯದಲ್ಲಿ ಹಲವು ದೇವಾಲಯಗಳು ಬಂದ್
Advertisement
ಏನಿದು ಪ್ರಕರಣ?
ಶಿಕ್ಷಣ ಹಾಗೂ ಉದ್ಯೋಗದಲ್ಲಿ ಸಾಮಾಜಿಕ ಸಮಾನತೆ ತರಲು ಮೇಲ್ವರ್ಗಗಳಲ್ಲಿರುವ ಬಡವರಿಗೆ ಕೇಂದ್ರ ಸರ್ಕಾರ 2019ರಲ್ಲಿ ಶೇ.10 ಮೀಸಲಾತಿ ನೀಡಿ ಕಾಯ್ದೆ ಜಾರಿಗೊಳಿಸಿತ್ತು. ಇದು ಒಟ್ಟು ಮೀಸಲಾತಿಗೆ ಇರುವ ಶೇ.50 ಮಿತಿಗೆ ಹೊರತಾಗಿದೆ. ಇದನ್ನು ಪ್ರಶ್ನಿಸಿ 40ಕ್ಕೂ ಹೆಚ್ಚು ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿದ್ದವು, ಸಾಂವಿಧಾನಿಕ ಪೀಠ ಅವುಗಳ ವಿಚಾರಣೆ ಪೂರ್ಣಗೊಳಿಸಿದ್ದು, ಇಂದು ಮೀಸಲಾತಿ ಬಗ್ಗೆ ತೀರ್ಪು ಪ್ರಕಟಿಸಲಿದೆ.