Bengaluru CityDistrictsKarnatakaLatestLeading NewsMain Post

ಚಂದ್ರಗ್ರಹಣ – ನಾಳೆ ರಾಜ್ಯದಲ್ಲಿ ಹಲವು ದೇವಾಲಯಗಳು ಬಂದ್

ಬೆಂಗಳೂರು: 15 ದಿನ ಅಂತರದಲ್ಲಿ ಎರಡನೇ ಗ್ರಹಣ ಸಂಭವಿಸುತ್ತಿದೆ. ಸೂರ್ಯ ಗ್ರಹಣದ ಬೆನ್ನಲ್ಲೇ ರಕ್ತ ಚಂದ್ರಗ್ರಹಣ (Lunar Eclipse) ಸಂಭವಿಸ್ತಿರೋದು ಹಲವು ಮಹತ್ವ ಪಡೆದಿದೆ.

ಗ್ರಹಣ ಸಮಯದ ವೇಳೆ ನಗರದ ಹಲವು ದೇವಾಲಯಗಳು (Temple) ಬಂದ್ ಆಗಲಿದೆ. ಈ ವರ್ಷದ ಕೊನೆಯ ಗ್ರಹಣವು ಮಂಗಳವಾರ ಸಂಭವಿಸಲಿದೆ. ಇದು ಚಂದ್ರಗ್ರಹಣವಾಗಿರಲಿದ್ದು (Lunar Eclipse), ಕಳೆದ 15 ದಿನದಲ್ಲಿ ಸಂಭವಿಸುತ್ತಿರುವ 2ನೇ ಗ್ರಹಣವಾಗಿದೆ. ಇದನ್ನೂ ಓದಿ: ಹೇಮಾವತಿ ಹಿನ್ನೀರಿನಲ್ಲಿ ತೇಲುವ ಹಡಗು- ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಶೆಟ್ಟಿಹಳ್ಳಿ ಚರ್ಚ್

ಎಷ್ಟೊತ್ತಿಗೆ ಆರಂಭ?
ಚಂದ್ರಗ್ರಹಣವು (Lunar Eclipse) ಮಧ್ಯಾಹ್ನ 2.39ಕ್ಕೆ ಆರಂಭವಾಗಿ ಸಂಜೆ 6:19ಕ್ಕೆ ಮುಗಿಯಲಿದೆ. ಸೂರ್ಯಾಸ್ತ 5:54ಕ್ಕೆ ಆಗಲಿದೆ. ಚಂದ್ರಗ್ರಹಣವಾದ್ದರಿಂದ ಮಧ್ಯಾಹ್ನದ ಹೊತ್ತು ಕಾಣಲು ಅಸಾಧ್ಯ. ಆದರೆ ಸಂಜೆ 5:54ಕ್ಕೆ ಸೂರ್ಯಾಸ್ತ ಆಗಲಿರುವ ಕಾರಣ ಗ್ರಹಣದ ಕೊನೆಯ 25 ನಿಮಿಷ ಮಾತ್ರ ಕಾಣಬಹುದಾಗಿದೆ.

Live Tv

Leave a Reply

Your email address will not be published. Required fields are marked *

Back to top button