ಬೆಂಗಳೂರು: ಉತ್ತರಾಖಂಡ್ ರಾಜ್ಯದಲ್ಲಿ ಮೇಘಸ್ಫೋಟದಿಂದ ಭಾರೀ ಪ್ರವಾಹ ಸೃಷ್ಟಿಯಾಗಿದ್ದು, ಪ್ರವಾಸಕ್ಕೆ ಹೋಗಿದ್ದ 10 ಕನ್ನಡಿಗರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ.
Advertisement
10 ಕನ್ನಡಿಗರು ಪ್ರವಾಹಪೀಡಿತ ಸ್ಥಳದಲ್ಲಿ ಸಿಲುಕಿಕೊಂಡಿದ್ದಾರೆ. ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದ ಕನ್ನಡಿಗರು ನೆರವು ಕೋರಿ ಸಹಾಯವಾಣಿಗೆ ಸಂಪರ್ಕ ಮಾಡಿದ್ದಾರೆ. ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಕೋಮುಗಲಭೆ – ಇಸ್ಕಾನ್ ದೇವಾಲಯದ ಟ್ವಿಟ್ಟರ್ ಖಾತೆ ಬ್ಲಾಕ್
Advertisement
ಉತ್ತರಾಖಂಡ್‍ದ ಪ್ರವಾಹದಲ್ಲಿ ಸಿಲುಕಿಕೊಂಡಿರುವ ಕನ್ನಡಿಗರಲ್ಲಿ 4 ಜನ ಬೆಂಗಳೂರಿನವರಾಗಿದ್ದು, ಅದರಲ್ಲಿ ಇಬ್ಬರು ಯಲಹಂಕ ಮೂಲದವರಾಗಿದ್ದು, ಇನ್ನೊಬ್ಬರು ಬಸವೇಶ್ವರನಗರ, ಆರ್‍ಟಿನಗರ ನಿವಾಸಿಗಳಾಗಿದ್ದಾರೆ. ನಾಲ್ವರು ಈಗ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
Advertisement
ಗಂಗಾಭಟ್, ರಿತೀಶ್ ಭಟ್(ಯಲಹಂಕ), ಗಣೇಶ್(ಬಸವೇಶ್ವರನಗರ), ಅಶ್ವಥ್ ನಾರಾಯಣ್(ಆರ್‌ಟಿ ನಗರ) ಬೆಂಗಳೂರು ಮೂಲದವರಾಗಿದ್ದಾರೆ. ಬೆಂಗಳೂರಿಗರಲ್ಲದೇ ಉಡುಪಿಯ ಒಬ್ಬರು ಕೂಡ ಪ್ರವಾಹದಲ್ಲಿ ಪರದಾಡುತ್ತಿದ್ದಾರೆ. ಉಡುಪಿ ಮೂಲದ ಮಹಿಳೆ ರೇಖಾ, ಸಿಂದಗಿಯ ವೈದ್ಯೆ ಡಾ.ರೇಖಾ ಮತ್ತು ಮಿಲಿಟರಿ ವೈದ್ಯ ಡಾ.ಅನಿತಾ ಪಂಪಣ್ಣನವರ್ ಪ್ರವಾಹದಲ್ಲಿ ಸಿಲುಕಿದ್ದಾರೆ. ಇದನ್ನೂ ಓದಿ: ಇಂದು ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಭವಿಷ್ಯ ನಿರ್ಧಾರ
ಉತ್ತರಾಖಂಡ್‍ನಲ್ಲಿರುವ ಕನ್ನಡಿಗರು ಸುರಕ್ಷಿತವಾಗಿದ್ದಾರೆ. ಒಂದೆರಡು ದಿನಗಳಲ್ಲಿ ಕನ್ನಡಿಗರನ್ನು ಕರೆತರುತ್ತೇವೆ. ಮಳೆಯಿಂದ ರಸ್ತೆ ಕಡಿತವಾಗಿರೋದ್ರಿಂದ ಸಂಕಷ್ಟ ಎದುರಾಗಿದೆ. ಪ್ರವಾಹಪೀಡಿತ ಭಾಗಗಳಲ್ಲಿ ಸಿಲುಕಿರುವವರ ಕುಟುಂಬವನ್ನು ಸಂಪರ್ಕಿದ್ದೇವೆ ಎಂದು ಪಬ್ಲಿಕ್ ಟಿವಿಗೆ ನೋಡಲ್ ಅಧಿಕಾರಿ ತುಷಾರ್ ಗಿರಿನಾಥ್ ಹೇಳಿಕೆ ನೀಡಿದ್ದಾರೆ.