ತಾಮ್ರ-ನಿಕ್ಕಲ್ ಲೋಹದಿಂದ ತಯಾರಿಸಿದ 1957 ರಿಂದ 1963 ಸಮಯದಲ್ಲಿ ಮುದ್ರಿಸಲಾದ 10 ಪೈಸೆ ನಾಣ್ಯ ನಿಮ್ಮಲ್ಲಿದೆಯೆ? ಹಾಗಿದ್ದಲ್ಲಿ ನಿಮ್ಮ ಜೇಬಿನಲ್ಲಿ 1000 ರೂ. ಇದ್ದ ಹಾಗೆ. ಅದು ಹೇಗೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುತ್ತಿದ್ದರೆ ಇಲ್ಲಿದೆ ಅದಕ್ಕೆ ಉತ್ತರ.
1957 ರಿಂದ 1963ರ ನಡುವೆ ಬಿಡುಗಡೆಯಾದ ಯಾವುದೇ 10 ಪೈಸೆಯ ನಾಣ್ಯವನ್ನು ನೀವು ಹೊಂದಿದ್ದರೆ ಅವುಗಳನ್ನು ಆನ್‍ಲೈನ್‍ನಲ್ಲಿ ಮಾರಾಟ ಮಾಡಿ ಉತ್ತಮ ಆದಾಯವನ್ನು ಗಳಿಸಬಹುದು. ಭಾರತದ ಅಧಿಕೃತವಾಗಿ ದೇಶವಾಗಿ ಘೋಷಣೆಯಾದ ಬಳಿಕ ಬಿಡುಗಡೆಯಾದ ಮೊದಲ ನಾಣ್ಯಗಳೆಂದರೆ ಅದು ಈ 10 ಪೈಸೆಯ ನಾಣ್ಯಗಳು. ಇದನ್ನೂ ಓದಿ: ಅಪ್ಪು ಕನಸು ನನಸು- ಗಂಧದ ಗುಡಿ ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ಔಟ್
Advertisement
Advertisement
1 ರೂ.ಯನ್ನು 10 ಭಾಗವಾಗಿ ಮಾಡಿದಾಗ ಸಿಗುವ 1 ಭಾಗದ ಮೊತ್ತ 10 ಪೈಸೆ. ಈ ದಶಮಾಂಶ ಪದ್ಧತಿಯನ್ನು 1957ರಲ್ಲಿ ಪರಿಚಯಿಸಲಾಗಿತ್ತು. 10 ಪೈಸೆಯ ನಾಣ್ಯಗಳ ಮೇಲೆ ನಯೆ ಪೈಸೆ ಎಂಬುದಾಗಿ ಬರೆದಿರುವುದನ್ನು ನಾವು ಕಾಣಬಹುದು. 1963 ಇಸವಿಯ ನಂತರ ಈ ಪದವನ್ನು ಬಳಸದಿರುವಂತೆ ನಿರ್ಧರಿಸಲಾಗಿದ್ದು, ನಂತರದಲ್ಲಿ ನಾಣ್ಯಗಳ ಮೇಲೆ ಪೈಸೆ ಎಂಬ ಪದವನ್ನು ಮಾತ್ರವೇ ಬಳಸಲಾಯಿತು. ಇದನ್ನೂ ಓದಿ: ರಾಜ್ ಕುಟುಂಬದಿಂದ ಗಂಧದಗುಡಿಯ 3ನೇ ಪ್ರಯೋಗ
Advertisement
10 ಪೈಸೆ ನಾಣ್ಯವನ್ನು 1957 ರಿಂದ 1963 ರ ನಡುವೆ ಬಿಡುಗಡೆ ಮಾಡಲಾಗಿತ್ತು. ಈ ನಾಣ್ಯಗಳ ತೂಕ 5 ಗ್ರಾಂ. ಹಾಗೂ ವ್ಯಾಸ 23 ಮಿ.ಮೀ. ಈ ನಾಣ್ಯಗಳನ್ನು ಬಾಂಬೆ, ಕಲ್ಕತ್ತಾ ಹಾಗೂ ಹೈದರಾಬಾದ್‍ನಲ್ಲಿ ಟಂಕಿಸಲಾಗಿತ್ತು. ಇದನ್ನೂ ಓದಿ: ಅಪ್ಪು ಕನಸು ನನಸು- ಗಂಧದ ಗುಡಿ ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ಔಟ್
Advertisement
ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ತಂಭ, ಇಂಗ್ಲಿಷ್ ಹಾಗೂ ದೇವನಾಗರಿ ಭಾಷೆಯಲ್ಲಿ ಭಾರತ ಎಂದು ಬರೆದಿರುವುದನ್ನು ನೋಡಬಹುದು. ಇನ್ನೊಂದು ಬದಿಯಲ್ಲಿ 10 ಎಂದು ಇಂಗ್ಲಿಷ್ ಅಂಕೆಯಲ್ಲಿ ಬರೆದಿದ್ದು, ದೇವನಾಗರಿ ಲಿಪಿಯಲ್ಲಿ ನಯೇ ಪೈಸೆ ಹಾಗೂ ರೂಪಯೆ ಕಾ ದಸ್‍ವಾ ಭಾಗ್ ಎಂದು ಬರೆಯಲಾಗಿದೆ. ನಾಣ್ಯದ ಕೆಳ ಭಾಗದಲ್ಲಿ ಟಂಕಿಸಿದ ವರ್ಷವನ್ನೂ ಉಲ್ಲೇಖಿಸಿದೆ. ಇದನ್ನೂ ಓದಿ: ಜಿಯೋ ಮಾರ್ಟ್ ವಿರುದ್ಧ ಸಿಡಿದ 4.50 ಲಕ್ಷ ಸೇಲ್ಸ್‌ಮನ್ಸ್
ವರದಿಗಳ ಪ್ರಕಾರ ಈ ನಾಣ್ಯಗಳನ್ನು ಆನ್‍ಲೈನ್‍ನಲ್ಲಿ ಮಾರಾಟ ಮಾಡಿ ಉತ್ತಮ ಗಳಿಕೆಯನ್ನೂ ಮಾಡಬಹುದು. ಹಳೆಯ ಹಾಗೂ ಅಪರೂಪದ ನಾಣ್ಯಗಳನ್ನು 1000 ರೂ.ಗಳಿಗೆ ಮಾರಾಟ ಮಾಡಬಹುದು ಎಂದು ತಿಳಿದು ಬಂದಿದೆ. ಹಳೆಯ ಹಾಗೂ ಅಪರೂಪದ ನಾಣ್ಯಗಳು ಮತ್ತು ನೋಟುಗಳನ್ನು ಖರೀದಿ ಅಥವಾ ಮಾರಾಟ ಮಾಡಲು ಹಲವಾರು ವೆಬ್‍ಸೈಟ್‍ಗಳು ಇವೆ. ಇದನ್ನೂ ಓದಿ: ಪರಿಷತ್ ಚುನಾವಣೆ ಹತ್ತಿರ ಬರುತ್ತಿದ್ದಂತೆ ಬೀದರ್‌ನಲ್ಲಿ ಕುದುರೆ ವ್ಯಾಪಾರ ಜೋರು
ಹಳೆಯ ನಾಣ್ಯಗಳನ್ನು ಮಾರಾಟ ಮಾಡಲು ವೆಬ್‍ಸೈಟ್‍ಗಳಿಗೆ ಲಾಗ್ ಇನ್ ಆಗಿ, ಮಾರಾಟಗಾರರಾಗಿ ನೊಂದಾಯಿಸಿಕೊಳ್ಳಿ. ನಂತರ ನಿಮ್ಮ ಬಳಿ ಇರುವ ಅಪರೂಪದ ನಾಣ್ಯಗಳ ಫೋಟೋಗಳನ್ನು ಅಪ್‍ಲೋಡ್ ಮಾಡಬೇಕಾಗುತ್ತದೆ. ಆಸಕ್ತ ವ್ಯಕ್ತಿಗಳು ಖರೀದಿಗಾಗಿ ನಿಮ್ಮನ್ನು ಸಂಪರ್ಕಿಸುತ್ತಾರೆ. ಅವರೊಂದಿಗೆ ಮಾತುಕತೆ ನಡೆಸಿ ನಂತರ ನಿಮ್ಮ ನಾಣ್ಯಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಬಹುದು.