ಗರ್ಭಿಣಿಯರಿಗೆ ತಮ್ಮ ಡಯಟ್‍ನಲ್ಲಿ ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎನ್ನುವ ಗೊಂದಲ ಇದ್ದೇ ಇರುತ್ತೆ. ತಾಯ್ತನದ ಖುಷಿಯನ್ನು ಸವಿಯಲು ನಾವು ನಿಮಗೆ ಸಹಾಯ ಮಾಡ್ತಿವಿ. ಹೌದು, ಗರ್ಭಾವಸ್ಥೆಯಲ್ಲಿ ಮಹಿಳೆಯರು ಯಾವ ರೀತಿ ಸಸ್ಯಹಾರಿ ಆಹಾರವನ್ನು ಸೇವಿಸಿದರೇ ಒಳ್ಳೆಯದು ಎನ್ನುವ ಒಂದೊಳ್ಳೆ ಸಸ್ಯಹಾರಿ ಆಹಾರಗಳ ಪಟ್ಟಿ ಇಲ್ಲಿದೆ. ಇದನ್ನು ಅನುಸರಿಸಿ ಉತ್ತಮ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ.
ಉತ್ತಮ ಪೌಷ್ಠಿಕಾಂಶವನ್ನು ಸಸ್ಯಹಾರ ಆಹಾರಗಳು ಹೊಂದಿರುತ್ತದೆ. ಅದರಲ್ಲಿ ಹೆಚ್ಚಿನ ಪ್ರೊಟೀನ್ ಅಂಶ ಅಡಗಿರುತ್ತದೆ. ಸಸ್ಯಹಾರಿ ಆಹಾರವನ್ನು ಸೇವಿಸುವುದರಿಂದ ಗರ್ಭಿಣಿಯರಿಗೆ ಉತ್ತಮ ಪ್ರೊಟೀನ್ ಸಿಗುತ್ತದೆ ಹಾಗೂ ಮಗುವಿನ ಬೆಳವಣಿಗೆಗೆ ಈ ರೀತಿಯ ಆಹಾರಗಳು ಸಹಾಯಕಾರಿ.
ಸಸ್ಯಹಾರಿ ಆಹಾರಗಳ ಪಟ್ಟಿ ಈ ಕೆಳಗಿನಂತಿದೆ:
1. ಒಣ ಹಣ್ಣು:
ಒಣ ದ್ರಾಕ್ಷಿ, ಗೋಡಂಬಿ, ಪಿಸ್ತಾ, ವಾಲ್‍ನಟ್, ಬಾದಾಮಿ ಇತ್ಯಾದಿಗಳಲ್ಲಿ ಹೆಚ್ಚಿನ ಪ್ರೊಟೀನ್ ಅಂಶ ಅಡಕವಾಗಿರುತ್ತದೆ. ಇವುಗಳ ಸೇವನೆಯಿಂದ ದೇಹಕ್ಕೆ ಅವಶ್ಯಕವಾಗಿರುವ ವಿಟಮಿನ್-ಇ ಅಂಶ ಸಿಗುತ್ತದೆ. ಹಾಗೆಯೇ ನಿಮ್ಮ ತೂಕವನ್ನು ಹೆಚ್ಚಿಸಿ ಉತ್ತಮ ಆರೋಗ್ಯ ನೀಡುತ್ತದೆ.
2. ತೆಂಗಿನಕಾಯಿ:
ಇದರಲ್ಲಿ ಆರೋಗ್ಯಕರ ಕೊಬ್ಬಿನ ಅಂಶ ಹೇರಳವಾಗಿರುತ್ತದೆ. ದೇಹಕ್ಕೆ ಬೇಕಾಗುವ ಶಕ್ತಿಯನ್ನು ತೆಂಗಿನಕಾಯಿ ತಿನ್ನುವುದರಿಂದ ಪಡೆಯಬಹುದು. ಇದನ್ನು ನೀವು ನೇರವಾಗಿಯು ತಿನ್ನಬಹುದು, ಇಲ್ಲದಿದ್ದರೆ ಇದರಿಂದ ಚಟ್ನಿ ತಯಾರಿಸಿ ಬೇರೆ ಡಿಶ್ ಗಳ ಜೊತೆಗೆ ಸವಿಯಬಹುದು.
3. ಧಾನ್ಯಗಳು:
ಧಾನ್ಯಗಳು ಹಾಗೂ ಬೇಳೆಕಾಳುಗಳಲ್ಲಿ ಹೆಚ್ಚಿನ ಪ್ರೊಟೀನ್ ಇರುತ್ತದೆ. ಇವುಗಳನ್ನು ತಾವು ಸೇವಿಸುವ ಆಹಾರಗಳಲ್ಲಿ ಬಳಸುವುದರಿಂದ ಗರ್ಭಿಣಿಯರಿಗೆ ಉತ್ತಮ ಪ್ರೊಟೀನ್ ದೊರೆಯುತ್ತದೆ.
4. ಬೀನ್ಸ್:
ಬೀನ್ಸ್ ಪ್ರೊಟೀನ್ ಜೊತೆಗೆ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಪ್ರತಿದಿನ ಬೀನ್ಸ್ ಸೇವನೆಯಿಂದ ನಮಗೆ ಉತ್ತಮ ಫೈಬರ್ ಅಂಶ ದೊರೆಯುತ್ತದೆ. ಸ್ಟ್ರಿಂಗ್ ಬೀನ್ಸ್, ಹಸಿರು ಬೀನ್ಸ್, ಫಾವಾ ಬೀನ್ಸ್ ಮುಂತಾದ ವಿವಿಧ ಬಗೆಯ ಬೀನ್ಸ್‍ಗಳನ್ನು ಸೇವಿಸಬಹುದು.
5. ಕ್ಯಾರೆಟ್ (ಗಜ್ಜರಿ):
ಕ್ಯಾರೆಟ್ ವಿಟಮಿನ್-ಎ ಅಂಶವನ್ನು ಹೊಂದಿರುತ್ತದೆ. ಇದನ್ನು ಗರ್ಭಿಣಿಯರು ತಮ್ಮ ಆಹಾರದಲ್ಲಿ ಬಳಸುವುದು ಒಳ್ಳೆಯದು. ಕ್ಯಾರೇಟ್ ಸೇವನೆಯಿಂದ ನಿಮ್ಮ ಕಣ್ಣುಗಳ ದೃಷ್ಟಿ ಮಾತ್ರವಲ್ಲದೆ ಮಗುವಿನ ದೃಷ್ಟಿಯು ಉತ್ತಮವಾಗುತ್ತದೆ.
6. ಸೋಯಾ:
ಗರ್ಭಿಣಿಯರಿಗೆ ಅವಶ್ಯಕವಾಗಿರುವ ಪ್ರೊಟೀನ್ ಅಂಶವನ್ನು ಸೋಯಾ ಹೊಂದಿರುತ್ತದೆ. ಸೋಯಾದಲ್ಲಿ ವಿಟಮಿನ್-ಡಿ ಪೂರಕವಾಗಿರುತ್ತದೆ. ಹೀಗಾಗಿ ಗರ್ಭಿಣಿಯರು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಒಳ್ಳೆಯದು.
7. ಮೊಸರು:
ಮೊಸರು ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಒಳ್ಳೆಯ ಬ್ಯಾಕ್ಟೀರಿಯಾ ಹಾಗೂ ಕ್ಯಾಲ್ಸಿಯಂನ ಒಂದೊಳ್ಳೆ ಮಿಶ್ರಣ ಎಂದರೆ ಮೊಸರು. ಗರ್ಭಿಣಿಯರಲ್ಲಿ ಹೆಚ್ಚಾಗಿ ಎದೆಯುರಿ ಕಾಣಿಸಿಕೊಳ್ಳುತ್ತದೆ. ಮೊಸರು ಸೇವಿಸುವುದರಿಂದ ಎದೆಯುರಿಯನ್ನು ಕಡಿಮೆ ಮಾಡಿಕೊಳ್ಳಬಹುದು.
8. ಕಿಡ್ನಿ ಬೀನ್ಸ್:
ಸಸ್ಯಹಾರಿ ಮೂಲವಾದ ಕಿಡ್ನಿ ಬೀನ್ಸ್ ನಲ್ಲಿ ಪ್ರೊಟೀನ್ ಹೇರಳವಾಗಿರುತ್ತದೆ. ಇದು ಮಗುವಿನ ಬೆಳವಣಿಗೆಗೆ ಸಹಾಯಕಾರಿ. ಅಲ್ಲದೇ ಇದು ಗರ್ಭಿಣಿಯರಿಗೆ ಉತ್ತಮ ಆಹಾರವಾಗಿರುತ್ತದೆ.
9. ಹಸಿರು ತರಕಾರಿಗಳು:
ಶೂನ್ಯ ಕ್ಯಾಲರಿ ಹಾಗೂ ಹೆಚ್ಚಿನ ಕ್ಯಾಲ್ಸಿಯಂ ಹೊಂದಿರುವ ಅದ್ಭುತ ಆಹಾರವೆಂದರೆ ಅದು ಹಸಿರು ತರಕಾರಿಗಳು. ಪಾಲಕ್, ಬ್ರೊಕಲಿ, ಸೊಪ್ಪು ಇತ್ಯಾದಿಗಳನ್ನು ಅವಶ್ಯವಾಗಿ ಗರ್ಭಿಣಿಯರು ಸೇವಿಸಬೇಕು.
10. ಪನ್ನೀರ್:
ಪನ್ನೀರ್ ಹೆಚ್ಚಿನ ಪ್ರೋಟಿನ್ ಹೊಂದಿರುತ್ತದೆ. ಇದರಲ್ಲಿ ಹಾಲಿನ ಅಂಶ ಹಾಗೂ ಕ್ಯಾಲ್ಸಿಯಂ ಅಡಕವಾಗಿರುತ್ತದೆ. ಆದ್ದರಿಂದ ಮಗುವಿನ ಬೆಳವಣಿಗೆಗೆ ಪನ್ನೀರ್ ಸಹಕಾರಿ.
ತಾಯ್ತನ ಎಂಬುದು ಮಹಿಳೆಯ ಜೀವನದಲ್ಲಿ ಬರುವ ಒಂದು ಅತ್ಯಮೂಲ್ಯವಾದ ಒಂದು ಭಾಗ. ತಾನು ನೋವು ತಿಂದು ಮತ್ತೊಂದು ಜೀವಕ್ಕೆ ಜನ್ಮಕೊಡುವ ಮೂಲಕ ತಾನು ಹೊಸ ಜನ್ಮ ಪಡೆಯುತ್ತಾಳೆ ತಾಯಿ. ಈ ವಿಶೇಷ ಸಮಯದಲ್ಲಿ ಗರ್ಭಿಣಿ ಮಹಿಳೆಯರಿಗೆ ಉತ್ತಮ ಆರೈಕೆ ಹಾಗೂ ಪೌಷ್ಠಿಕ ಆಹಾರವನ್ನು ನೀಡಬೇಕು.