ದಾವಣಗೆರೆ: 10 ತಿಂಗಳ ಮಗು (Baby) ಮನೆ ಮುಂಭಾಗ ಆಟವಾಡುತ್ತಿದ್ದಾಗ ನೀರು ತುಂಬಿದ ಬಕೆಟ್‌ಗೆ (Bucket) ಬಿದ್ದು ಸಾವನ್ನಪ್ಪಿದ ಮನಕಲುಕುವ ಘಟನೆ ದಾವಣಗೆರೆ (Davanagere) ಜಿಲ್ಲೆಯ ಜಗಳೂರು ತಾಲೂಕಿನ ಬಿಸ್ತುವಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಂಜುನಾಥ್ ಹಾಗೂ ತಾರ ದಂಪತಿಯ 10 ತಿಂಗಳ ಮಗು ಅನುಶ್ರಾವ್ಯ ಮೃತ ಕಂದಮ್ಮ. ಎಂದಿನಂತೆ ಮಗು ಮನೆಯ ಮುಂಭಾಗ ಆಟವಾಡುತ್ತಿದ್ದಾಗ ದುರ್ಘಟನೆ ನಡೆದಿದೆ. ಇದನ್ನೂ ಓದಿ: ಕೋಚಿಂಗ್ ನಡುವೆ ಪ್ರೇಮಾಂಕುರ – 50 ವಯಸ್ಸಿನ ಶಿಕ್ಷಕನನ್ನು ವರಿಸಿದ 20ರ ವಿದ್ಯಾರ್ಥಿನಿ
ಮಗು ಆಟವಾಡುತ್ತಿದ್ದಾಗ ನೀರು ತುಂಬಿದ ಬಕೆಟ್‌ಗೆ ಆಯಾತಪ್ಪಿ ಬಿದ್ದಿದೆ. ಇದಾದ ಸ್ವಲ್ಪ ಹೊತ್ತಿನ ಬಳಿಕ ಮಗುವಿನ ಪೋಷಕರು ಇದನ್ನು ನೋಡಿದ್ದಾರೆ. ತಕ್ಷಣ ಮಗುವನ್ನು ಜಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಮಗು ಮಾರ್ಗಮಧ್ಯೆಯೇ ಸಾವನ್ನಪ್ಪಿದೆ. ಇದನ್ನೂ ಓದಿ: ಸಾವು-ಬದುಕಿನ ನಡುವೆ ಹೋರಾಡ್ತಿದ್ದ 185 ಕೆಜಿ ತೂಕದ ಮಹಿಳೆ ಜೀವ ಉಳಿಸಿದ ವೈದ್ಯರು
ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.