ನವದೆಹಲಿ: ಕೆಲವೊಂದು ಕನಸು, ಗುರಿ ಈಡೇರಿಕೆಗೆ ನಿರಂತರ ಪ್ರಯತ್ನ ಅಗತ್ಯವಾಗಿತ್ತದೆ. ಇಲ್ಲೊಬ್ಬ ಯುವಕ ತಾನು ಸೈನ್ಯಕ್ಕೆ ಸೇರ ಬೇಕು, ದೇಶ ಸೇವೆ ಮಾಡಬೇಕು ಎನ್ನುವ ಹಿಂದೆ ಇರುವ ರೋಚಕ ಕಥೆ ಮತ್ತು ಪ್ರಯತ್ನವನ್ನು ನಿರ್ಮಾಪಕ, ಲೇಖಕ ವಿನೋದ್ ಕಪ್ರಿ ತಮ್ಮ ಟ್ವೀಟ್ ಮೂಲಕವಾಗಿ ಹಂಚಿಕೊಂಡಿದ್ದಾರೆ.
ವಿನೋದ್ ಕಪ್ರಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ವೀಡಿಯೋಗೆ, ಆ ಯುವಕ ಪ್ರದೀಪ್ ಮೆಹ್ರಾ ಶುದ್ಧವಾದ ಬಂಗಾರ ಎಂದು ಕ್ಷಾಪ್ಷನ್ ಕೊಟ್ಟಿದ್ದಾರೆ. ಕಾರಿನಲ್ಲೇ ಕುಳಿತು ವೀಡಿಯೋ ಶೇರ್ ಮಾಡಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
Advertisement
ವೀಡಿಯೋದಲ್ಲಿ ಏನಿದೆ?: ಪ್ರದೀಪ್ ಮೆಹ್ರಾ ರಸ್ತೆಯಲ್ಲಿ ಓಡುತ್ತಿರುತ್ತಾನೆ. ತನ್ನನ್ನೊಂದು ಕಾರು ಹಿಂಬಾಲಿಸುತ್ತಿದೆ ಎಂಬುದನ್ನು ನೋಡುವುದಿಲ್ಲ. ಒಂದೇ ಸಮ ಓಡುತ್ತಲೇ ಹೋಗುತ್ತಿರುತ್ತಾರೆ. ವಿನೋದ್ ಕಪ್ರಿ ಹುಡುಗನಿಗೆ ಸಮಾನಾಂತರವಾಗಿ ಕಾರನ್ನು ಚಲಾಯಿಸಿಕೊಂಡು ಹೋಗಿ, ಬಾ ನಿನ್ನನ್ನು ಮನೆಗೆ ಬಿಡುತ್ತೇನೆ ಎಂದರೆ ಬೇಡ, ನನಗೆ ಓಡಬೇಕು ಎನ್ನುತ್ತಾರೆ. ಎಷ್ಟು ಹೇಳಿದರೂ ಕೇಳುವುದಿಲ್ಲ. ಆಗ ವಿನೋದ್ ಕಪ್ರಿ, ಯಾಕೆ ಓಡಬೇಕು ಹೀಗೆ ಎಂದು ಕೇಳಿದಾಗ, ನಾನು ಸೇನೆಯನ್ನು ಸೇರಬೇಕು. ನನಗೆ ಬೆಳಗ್ಗೆ ಓಡಲು ಸಮಯ ಸಿಗುವುದಿಲ್ಲ. ಹೀಗಾಗಿ ಕೆಲಸ ಮುಗಿಸಿ ಮಧ್ಯರಾತ್ರಿ ಓಡಿಯೇ ಮನೆಗೆ ಹೋಗುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ಶಾಸಕನ ಮೊಮ್ಮಗ’ ಎನ್ನುವುದೇ ಬೈಕ್ ನಂಬರ್ ಪ್ಲೇಟ್!
Advertisement
This is PURE GOLD❤️❤️
नोएडा की सड़क पर कल रात 12 बजे मुझे ये लड़का कंधे पर बैग टांगें बहुत तेज़ दौड़ता नज़र आया
मैंने सोचा
किसी परेशानी में होगा , लिफ़्ट देनी चाहिए
बार बार लिफ़्ट का ऑफ़र किया पर इसने मना कर दिया
वजह सुनेंगे तो आपको इस बच्चे से प्यार हो जाएगा ❤️???? pic.twitter.com/kjBcLS5CQu
— Vinod Kapri (@vinodkapri) March 20, 2022
ಸಿಕ್ಕಾಪಟೆ ಖುಷಿಯಾದ ವಿನೋದ್ ಕಪ್ರಿ: ಯುವಕನ ಬಳಿ ಆತನ ಬಗ್ಗೆ ವಿಚಾರಿಸಿದ್ದಾರೆ. ವಿನೋದ್ ಕೇಳಿದ ಎಲ್ಲ ಪ್ರಶ್ನೆಗೂ ಯುವಕ ಓಡುತ್ತಲೇ ಉತ್ತರ ಕೊಟ್ಟಿದ್ದಾರೆ. ತಾವು ನೊಯ್ಡಾದ ಸೆಕ್ಟರ್ 16ರಿಂದ ಬರೋಲಾದಲ್ಲಿರುವ ಮನೆಗೆ 10 ಕಿಮೀ ದೂರ ಪ್ರತಿದಿನವೂ ಓಡಿಕೊಂಡೇ ಹೋಗುವುದಾಗಿ ಹೇಳಿದ್ದಾರೆ. ಸದ್ಯ ನಾನು ನನ್ನ ಅಣ್ಣನೊಂದಿಗೆ ಇದ್ದೇನೆ. ತಾಯಿಗೆ ಹುಷಾರಿಲ್ಲ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬುದನ್ನೂ ವಿನೋದ್ ಕಪ್ರಿಯವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಸೋಲಿಸಲು 25 ವರ್ಷಗಳ ಬಳಿಕ ಒಂದಾದ ಸಹೋದರರು
Advertisement
ವಿನೋದ್ ಕಪ್ರಿ ಪ್ರಶ್ನೆಗೆ ಯುವಕನ ನೇರ ಉತ್ತರ: ಊಟ ಆಗಿದೆಯಾ ಎಂದು ಕೇಳಿದ್ದಕ್ಕೆ, ಇಲ್ಲ ಈಗ ನಾನು ಮನೆಗೆ ಹೋಗಿ ಅಡುಗೆ ಮಾಡಬೇಕು ಎನ್ನುತ್ತಾರೆ. ಬಾ ನನ್ನ ಜೊತೆ, ನನ್ನೊಂದಿಗೆ ಊಟ ಮಾಡು ಎಂದಿದ್ದಕ್ಕೆ, ಇಲ್ಲ ನಾನು ಹಾಗೆ ಮಾಡಿದರೆ ಮನೆಯಲ್ಲಿರುವ ನನ್ನ ಅಣ್ಣ ಹಸಿದುಕೊಂಡೇ ಇರಬೇಕಾಗುತ್ತದೆ ಎಂದು ಪ್ರದೀಪ್ ಹೇಳುತ್ತಾರೆ. ಯಾಕೆ ಅವರು ಅಡುಗೆ ಮಾಡುವುದಿಲ್ಲವಾ ಎಂದು ವಿನೋದ್ ಕಪ್ರಿ ಕೇಳಿದ್ದಕ್ಕೆ, ಇಲ್ಲ ಅವರಿಗೆ ಈಗ ರಾತ್ರಿ ಡ್ಯೂಟಿ ಇದೆ. ನಾನು ಹೋಗಿ ಅಡುಗೆ ಮಾಡಬೇಕು ಎಂದಿದ್ದಾನೆ.
Advertisement