ಟೆಹರಾನ್: ಪ್ರಯಾಣಿಕರ ರೈಲೊಂದು ಹಳಿ ತಪ್ಪಿ 10 ಮಂದಿ ಸಾವನ್ನಪ್ಪಿರುವ ಘಟನೆ ಬುಧವಾರ ಮುಂಜಾನೆ ಪೂರ್ವ ಇರಾನ್‌ನಲ್ಲಿ ನಡೆದಿದೆ.
ಘಟನೆಯಲ್ಲಿ 10 ಮಂದಿ ಸಾವನ್ನಪ್ಪಿದ್ದು, 50 ಮಂದಿಗೆ ಗಾಯಗಳಾಗಿವೆ. ಅವರಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
Advertisement
ಇರಾನ್‌ನ ಮರುಭೂಮಿ ಪ್ರದೇಶವಾಗಿರುವ ತಬಾಸ್‌ನಲ್ಲಿ ಮುಂಜಾನೆ ರೈಲಿನ 7 ಬೋಗಿಗಳು ಹಳಿ ತಪ್ಪಿವೆ. ದುರ್ಘಟನೆ ನಡೆದಿರುವ ಪ್ರದೇಶ ನಗರದಿಂದ ದೂರದಲ್ಲಿದ್ದು, ಸಂವಹನವೂ ಕಷ್ಟಕರವಾಗಿದೆ. ಘಟನೆ ನಡೆಯುತ್ತಿದ್ದಂತೆ ಅಂಬುಲೆನ್ಸ್‌ಗಳು ಹಾಗೂ 3 ಹೆಲಿಕಾಪ್ಟರ್‌ಗಳು ರಕ್ಷಣಾಕಾರ್ಯಕ್ಕೆ ಧಾವಿಸಿವೆ. ಇದನ್ನೂ ಓದಿ: ಭಾರೀ ಅಗ್ನಿ ಅವಘಡ – 90ಕ್ಕೂ ಅಧಿಕ ಎಲೆಕ್ಟ್ರಿಕ್ ವಾಹನಗಳು ಬೆಂಕಿಗಾಹುತಿ
Advertisement
Advertisement
ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ರೈಲು ನೆಲ ಅಗೆಯುವ ಯಂತ್ರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಇಡಿ ಸಮನ್ಸ್ – ವಿಚಾರಣೆಯಿಂದ ವಿನಾಯಿತಿ ಕೋರಿದ ಸೋನಿಯಾ
Advertisement
2016ರಲ್ಲೂ ಇರಾನ್‌ನಲ್ಲಿ ನಡೆದ ರೈಲು ಅಪಘಾತದಲ್ಲಿ ಹಲವರು ಸಾವನ್ನಪ್ಪಿದ್ದರು. ಇರಾನ್‌ನಲ್ಲಿ ಪ್ರತೀ ವರ್ಷ ರಸ್ತೆ ಅಪಘಾತಗಳಲ್ಲೇ ಸುಮಾರು 17,000 ಜನರು ಸಾವನ್ನಪ್ಪುತ್ತಾರೆ ಎಂದು ಅಂಕಿ ಅಂಶ ತಿಳಿಸಿದೆ. ಜೊತೆಗೆ ವಿಶ್ವದಲ್ಲೇ ಅತ್ಯಂತ ಅಪಾಯಕಾರಿ ಸಂಚಾರಿ ಮಾರ್ಗಗಳನ್ನು ಹೊಂದಿರುವ ದೇಶಗಳಲ್ಲಿ ಇರಾನ್ ಒಂದಾಗಿದೆ.