– ಸಂತೆಗೆ ತರಕಾರಿ ಒಯ್ಯುತ್ತಿದ್ದಾಗ ದುರ್ಘಟನೆ
– ಹುಬ್ಬಳ್ಳಿ, ಯಲ್ಲಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ
– ಮೃತರಾದವರು ಹಾವೇರಿ ಸವಣೂರು ನಿವಾಸಿಗಳು
ಕಾರವಾರ: ಹಣ್ಣು ತರಕಾರಿ ತುಂಬಿದ ಲಾರಿ ಪಲ್ಟಿಯಾಗಿ 10 ಜನರು ಸಾವುಕಂಡು 16 ಜನ ಗಂಭೀರ ಗಾಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಭಾಗದಲ್ಲಿ ಬೆಳಗಿನ ಜಾವ ನಡೆದಿದೆ.
ಹಾವೇರಿ ಸವಣೂರಿನಿಂದ ಕುಮಟಾದ ಕಡೆ ಹಣ್ಣು ತರಕಾರಿ ತುಂಬಿದ್ದ ಲಾರಿ ಗುಳ್ಳಾಪುರ ಭಾಗಕ್ಕೆ ಬರುತಿದ್ದಂತೆ ಚಾಲಕನ ನಿರ್ಲಕ್ಷದಿಂದ ವಿದ್ಯತ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಸ್ಥಳದಲ್ಲೇ 9 ಜನರ ಸಾವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮತ್ತೋರ್ವ ವ್ಯಕ್ತಿ ಮೃತಪಟ್ಟಿದ್ದು ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. 16 ಜನ ಗಂಭೀರ ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಹುಬ್ಬಳ್ಳಿ, ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಶವಗಳನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಗಾಯಗೊಂಡವರು ಹಾಗೂ ಮೃತರಾದವರು ಹಾವೇರಿಯ ಸವಣೂರು ಮೂಲದವರಾಗಿದ್ದು, ಕುಮಟಾದಲ್ಲಿ ನಡೆಯುವ ಸಂತೆಗೆ ಹಣ್ಣು ತರಕಾರಿ ಒಯ್ಯುತ್ತಿದ್ದರು. ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಲ್ಟಿಯಾದ ಲಾರಿಯಲ್ಲಿ ಒಟ್ಟು 28 ಮಂದಿ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಈಗ ಲಭ್ಯವಾಗಿದೆ. ಯಲ್ಲಾಪುರ ಆಸ್ಪತ್ರೆಗೆ ಸ್ಥಳೀಯ ಶಾಸಕ ಶಿವರಾಮ ಹೆಬ್ಬಾರ್ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಮೃತ ದೇಹಗಳನ್ನು ಆದಷ್ಟು ಶೀಘ್ರವಾಗಿ ಮೃತರ ಊರಿಗೆ ಸಾಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೃತಪಟ್ಟವರು:
1. ಫಯಾಜ್ (45)
2. ವಾಸಿಮ್ (25)
3. ಇಜಜ್ (20)
4. ಸಾದೀಕ್ (30)
5. ಗುಲಾಮ್ ಹುಸೇನ್
6. ಇಮ್‌ತಿಯಾಜ್ (40)
7. ಅಲ್ಪಾಜ್ – (25)
8. ಜಿಲಾನಿ (20)
9. ಅಸ್ಲಾಂ (24)
10. ಜಲಾಲ್ (30) -ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಸಾವು
ಹುಬ್ಬಳಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು
1. ಅಶ್ರಫ್ – ಡ್ರೈವರ್(18)
2. ಖ್ವಾಜಾ (22)
3. ಮೊಹಮ್ಮದ್ ಸಾದಿಕ್(25)
4. ಖ್ವಾಜಾ ಮೈನು(24)
5. ನಿಜಾಮ್ (30)
6. ಮದ್ಲಾನ್ ಸಾಬ್(24) ವರ್ಷ
7. ಜಾಫರ್ (22) ವರ್ಷ
ಯಲ್ಲಾಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು
1. ಮಲ್ಲಿಕ್ ರೆಹಾನ್ (21)
2. ಅಫ್ತಾಬ್(23) ವರ್ಷ
3. ಗೌಸ್ ಮೈದ್ದೀನ್ (30)
4. ಇರ್ಫಾನ್ (17)
5. ನೂರ್ ಅಹಮ್ಮದ್ (30)
6. ಅಫ್ಸರ್ ಕಾಂಜಾಡ್(34)
7. ಸುಭಾಷ ಗೌಡರ್(17)
8. ಖಾದ್ರಿ (26) ವರ್ಷ
9. ಸಾಬೀರ್ ಅಹಮ್ಮದ ಬಾಬಾ ಹುಸೇನ್ ಗವಾರಿ(38)
10. ಮರ್ದಾನ್ ಸಾಬ್(22)
11. ರಫಾಯಿ (21)
12. ಮೊಹಮ್ಮದ್ ಗೌಸ (22)