ರಿಯಾದ್: ಡ್ರೋನ್ ದಾಳಿಯಿಂದ 10 ಜನರು ತೀವ್ರ ಗಾಯಗೊಂಡ ಘಟನೆ ಸೌದಿ ದಕ್ಷಿಣ ನಗರದ ಜಿಜಾನ್‍ನ ಕಿಂಗ್ ಅಬ್ದುಲ್ಲಾ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಸೌದಿ ದಕ್ಷಿಣ ನಗರ ಜಿಜಾನ್‍ನ ಕಿಂಗ್ ಅಬ್ದುಲ್ಲಾ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಸ್ಫೋಟಕಗಳು ತುಂಬಿದ ಡ್ರೋನ್ ದಾಳಿ ನಡೆದಿದ್ದು, ಪರಿಣಾಮ 10 ಜನರಿಗೆ ತೀವ್ರ ಗಾಯವಾಗಿದೆ. ಅದರಲ್ಲಿ 6 ಸೌದಿಗಳು, ಮೂವರು ಬಾಂಗ್ಲಾದೇಶಿ ಪ್ರಜೆಗಳು ಮತ್ತು ಓರ್ವ ಸುಡಾನ್ ಪ್ರಜೆ ಗಾಯಗೊಂಡಿದ್ದಾರೆ. ಈ ದಾಳಿಯ ವೇಳೆ ವಿಮಾನ ನಿಲ್ದಾಣದ ಕೆಲವು ಮುಂಭಾಗದ ಕಿಟಕಿಗಳು ಸಹ ಛಿದ್ರಗೊಂಡಿವೆ ಎಂದು ಸೌದಿ ನೇತೃತ್ವದ ಒಕ್ಕೂಟದ ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: 627 ಗ್ರಾಂ ಚಿನ್ನ, 24.71 ಲಕ್ಷ ರೂ. ಲೂಟಿ ಮಾಡಿ ಪರಾರಿಯಾಗಿದ್ದ ಕಳ್ಳರು ಅರೆಸ್ಟ್
Advertisement
Advertisement
ಸೌದಿ ನೇತೃತ್ವದ ಸೇನಾ ಒಕ್ಕೂಟವು 2015 ರಲ್ಲಿ ಯೆಮೆನ್‍ನಲ್ಲಿ ಮಧ್ಯಪ್ರವೇಶಿಸಿತು. ಈ ಪರಿಣಾಮ ಅಧ್ಯಕ್ಷ ಅಬ್ದ್ರಬ್ಬು ಮನ್ಸೂರ್ ಹಾದಿ ಅವರ ಉಚ್ಚಾಟಿತ ಸರ್ಕಾರದ ಬೆಂಬಲ ಪಡೆಗಳು ಮತ್ತು ಇರಾನ್-ಹೊಂದಿಕೊಂಡ ಹೌತಿ ಗುಂಪಿನ ವಿರುದ್ಧ ಹೋರಾಡುವುದು. ಈ ಕೃತ್ಯ ಯಾರು ಮಾಡಿದ್ದು ಎಂದು ತಕ್ಷಣಕ್ಕೆ ಹೇಳಲು ಆಗುತ್ತಿಲ್ಲ. ಆದರೆ ದಾಳಿ ಮಾಡಿದ ಗುಂಪು ನಿಯಮಿತವಾಗಿ ಗಲ್ಫ್ ಸಾಮ್ರಾಜ್ಯವನ್ನು ಗುರಿಯಾಗಿಸಿಕೊಂಡು ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
Advertisement
Advertisement