Connect with us

Health

ಡಯಾಬಿಟಿಸ್ ನಿಯಂತ್ರಿಸಲು ಉಪಯುಕ್ತವಾದ 10 ಆಹಾರಗಳು

Published

on

ಈಗಿನ ಕಾಲದಲ್ಲಿ ಡಯಾಬಿಟಿಸ್ ಅನ್ನೋ ಪದ ಕೇಳಿದ್ರೆ ಸಾಕು ಎಲ್ಲರು ಹೆದರುವ ಪರಿಸ್ಥಿತಿ ಬಂದಿದೆ. ಹಿಂದೆಲ್ಲ ಸಕ್ಕರೆ ಕಾಯಿಲೆ ಬರೀ ವಯಸ್ಸಾದೋರಿಗೆ ಬರುತ್ತೇ ಅಂತಾ ಮಾತಿತ್ತು. ಆದ್ರೆ ಈಗಿನ ಕಾಲಮಾನದಲ್ಲಿ ಸಣ್ಣ ಸಣ್ಣ ಮಕ್ಕಳು ಕೂಡ ಸಕ್ಕರೆ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಅದಕ್ಕೆ ಕಾರಣ ನಮ್ಮ ಜೀವನ ಶೈಲಿ. ಹೌದು, ನಮ್ಮ ದೇಹದ ಆರೋಗ್ಯ ನಿಂತಿರೋದೆ ನಮ್ಮ ಜೀವನ ಶೈಲಿ ಮೇಲೆ ಅಂದ್ರೆ ತಪ್ಪಾಗಲ್ಲ. ನಾವು ಪ್ರತಿನಿತ್ಯ ಹೇಗೆ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ಮಾಡ್ತಿವೋ ಹಾಗೆ ನಮ್ಮ ಆರೋಗ್ಯ ಇರತ್ತೆ.

ಈಗಿನ ಕಾಲದಲ್ಲಿ ನಾವು ಆರೋಗ್ಯದ ಬಗ್ಗೆ ಕಾಳಜಿ ವಹಿಸೋದು ಕಡಿಮೆ. ಡಯಾಬಿಟಿಸ್ ಕಾಯಿಲೆಗಳು ಇತ್ತೀಚೆಗೆ ಸರ್ವೆ ಸಾಮಾನ್ಯ ವೃದ್ಧರಿಂದ ಹಿಡಿದು ಪುಟ್ಟ ಮಕ್ಕಳಲ್ಲೂ ಡಯಾಬಿಟಿಸ್ ಕಾಯಿಲೆ ಕಂಡುಬರುತ್ತದೆ. ಡಯಾಬಿಟಿಸ್ ನಿಯಂತ್ರಿಸಲು ರೋಗಿಗಳು ಹಲವಾರು ಮಾತ್ರೆ, ಔಷಧಿಗಳನ್ನು ಸೇವಿಸ್ತಾರೆ. ಆದ್ರೆ ಕೇವಲ ಮಾತ್ರೆ ಸೇವಿಸದ್ರೆ ಡಯಾಬಿಟಿಸ್ ನಿಯಂತ್ರಣವಾಗಲ್ಲ. ಔಷಧಿ ಜೊತೆಗೆ ಸರಿಯಾಗಿ ಮಿತವಾದ ಆಹಾರ ಸೇವನೆಯಿಂದ ಹಾಗೂ ವ್ಯಾಯಾಮದಿಂದ ಡಯಾಬಿಟಿಸ್ ಕಾಯಿಲೆಯನ್ನು ನಿಯಂತ್ರಿಸಬಹುದು. ಯಾವೆಲ್ಲ ಆಹಾರಗಳು ಡಯಾಬಿಟಿಸ್ ನಿಯಂತ್ರಿಸಲು ಉಪಯುಕ್ತ ಎಂಬ ಪಟ್ಟಿ ಇಲ್ಲಿದೆ.

ಡಯಾಬಿಟಿಸ್ ನಿಯಂತ್ರಿಸಲು ಉಪಯುಕ್ತವಾದ 10 ಆಹಾರಗಳು:

1. ಕೊಬ್ಬಿನಾಂಶವಿರುವ ಮೀನುಗಳು: ಸಾಲ್ಮನ್, ಹೆರ್ರಿಂಗ್ ಮ್ಯಾಕ್ರೆಲ್ ತರಹದ ಮೀನುಗಳಲ್ಲಿ ಡಿಎಚ್‍ಎ ಮತ್ತು ಇಎಫ್‍ಎ, ಓಮೆಗಾ-3 ಕೊಬ್ಬಿನಾಂಶವಿರುತ್ತದೆ. ಇದು ಹೃದಯದ ಆರೋಗ್ಯಕ್ಕೆ ಒಳ್ಳೆದು. ಇಂತಹ ಮೀನಿನಲ್ಲಿರುವ ಪೌಷ್ಟಿಕಾಂಶವು ರಕ್ತನಾಳದಲ್ಲಿರುವ ಜೀವಕೋಶಗಳನ್ನು ಕಾಪಾಡಿ, ದೇಹದಲ್ಲಿ ರಕ್ತ ಸಂಚಲನವನ್ನು ವೃದ್ಧಿಸುತ್ತದೆ. ಅಲ್ಲದೆ ಇದನ್ನು ಸೇವಿಸುವುದರಿಂದ ಡಯಾಬಿಟಿಸ್ ನಿಯಂತ್ರಿಸಬಹುದು.

2. ಹಸಿರು ತರಕಾರಿಗಳು: ಹಸಿರು ತರಕಾರಿಗಳಲ್ಲಿ ಹೆಚ್ಚು ಪೌಷ್ಟಿಕಾಂಶದ ಜೊತೆಗೆ ಕಡಿಮೆ ಕ್ಯಾಲೋರಿಯನ್ನು ಹೊಂದಿರುತ್ತವೆ. ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವು ನಿಯಂತ್ರಣದಲ್ಲಿರುತ್ತದೆ. ಅಷ್ಟೆ ಅಲ್ಲದೆ ಹಸಿರು ತರಕಾರಿ ಹೃದಯಕ್ಕೆ ಹಾಗೂ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.

3. ದಾಲ್ಚಿನ್ನಿ: ಇದರಲ್ಲಿ ರೋಗನಿರೋಧಕ ಅಂಶವು ಹೆಚ್ಚಾಗಿ ಇರುತ್ತದೆ. ದಾಲ್ಚಿನ್ನಿಯನ್ನು ನಿತ್ಯದ ಆಹಾರದಲ್ಲಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಿ, ದೇಹದಲ್ಲಿನ ಇನ್ಸುಲಿನ್ ಪ್ರಮಾಣವನ್ನು ಸರಿಯಾಗಿ ಇಡುತ್ತದೆ. ಅಲ್ಲದೆ ಇದರಲ್ಲಿ ಕಡಿಮೆ ಕೊಲೆಸ್ಟ್ರಾಲ್ ಇರುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

4. ಮೊಟ್ಟೆ: ಪ್ರತಿದಿನವು ಕೋಳಿ ಮೊಟ್ಟೆಯನ್ನು ಆಹಾರದಲ್ಲಿ ಸೇವಿಸುವುದರಿಂದ ಅದ್ಭುತ ಪ್ರಯೋಜನವನ್ನು ಪಡೆಯಬಹುದು. ಇದು ಹೃದಯ ಸಂಬಂಧಿ ಕಾಯಿಲೆಗಳು ಬಾರದಂತೆ ನೊಡಿಕೊಳ್ಳುತ್ತದೆ. ಮೊಟ್ಟೆಯಲ್ಲಿ ಉತ್ತಮ ಪೌಷ್ಟಿಕಾಂಶ ಹಾಗೂ ಕೊಬ್ಬಿನಾಂಶ ಇರುವುದರಿಂದ ದೇಹಕ್ಕೆ ಒಳ್ಳೆಯ ಕೊಲೆಸ್ಟ್ರಾಲ್‍ಗಳನ್ನು ನೀಡಿ ಕೆಟ್ಟ ಕೊಲೆಸ್ಟ್ರಾಲ್‍ಗಳನ್ನು ದೂರವಿಡುತ್ತದೆ.

5. ಕಾಮಕಸ್ತೂರಿ ಬೀಜ: ದಿನನಿತ್ಯ ಆಹಾದಲ್ಲಿ ನೇರವಾಗಿ ಅಥವಾ ಹಾಲು, ನೀರು, ಜ್ಯೂಸ್‍ನಲ್ಲಿ ಕಾಮಸ್ತೂರಿ ಬೀಜವನ್ನು ಸೇರಿಸಿ ತಿನ್ನುವುದರಿಂದ ದೇಹಕ್ಕೆ ಫೈಬರ್ ಅಂಶ ದೊರೆಯುತ್ತದೆ. ಹಾಗೆಯೆ ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಇಂಸುಲಿನ್ ಪ್ರಮಾಣವನ್ನು ನಿಯಂತ್ರಿಸುತ್ತದೆ.

6. ಅರಶಿಣ: ಅರಶಿಣ ಒಂದು ಉತ್ತಮ ರೋಗನಿರೋಧಕ ಶಕ್ತಿ ಹೊಂದಿರುವ ಪದಾರ್ಥವಾಗಿದೆ. ಪ್ರತಿದಿನ ಹಾಲು ಅಥವಾ ನೀರಿನಲ್ಲಿ ಅರಶಿಣ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ರಕ್ತದಲ್ಲಿ ಸಕ್ಕರೆ ಅಂಶ ನಿಯಂತ್ರಿಸಬಹುದು ಹಾಗೂ ಹೃದಯ ಮತ್ತು ಕಿಡ್ನಿ ಸರಿಯಾಗಿ ದೇಹದಲ್ಲಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ.

7. ಒಣ ಬೀಜಗಳು: ಬಾದಾಮಿ, ಗೇರು ಬೇಜ, ಪಿಸ್ತಾ, ಶೇಗಾ ಬೀಜ, ವಾಲ್‍ನಟ್ಸ್‍ನಲ್ಲಿ ಆರೋಗ್ಯಕರ ಪೌಷ್ಟಿಕಾಂಶ ಇರುತ್ತದೆ. ಒಣ ಬೀಜಗಳನ್ನು ನಿತ್ಯವು ಸೇವಿಸುವುದರಿಂದ ಜೀರ್ಣಶಕ್ತಿಯು ಹೆಚ್ಚಾಗುತ್ತದೆ. ಇದು ದೇಹದಲ್ಲಿ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ. ಅಲ್ಲದೆ ದೇಹದಲ್ಲಿ ಸಕ್ಕರೆ ಅಂಶ ಮಿತವಾಗಿ ಇರುವಂತೆ ನೋಡಿಕೊಳ್ಳುತ್ತದೆ.

8. ಆಲಿವ್ ಎಣ್ಣೆ: ಅಡುಗೆಯಲ್ಲಿ ಆಲಿವ್ ಎಣ್ಣೆ ಬಳಸುವುದರಿಂದ ದೇಹಕ್ಕೆ ಉತ್ತಮ ಒಲಿವಿಕ್ ಆಮ್ಲ ದೊರೆಯುತ್ತದೆ. ಇದು ದೇಹದಲ್ಲಿ ರಕ್ತ ಸಂಚಲನ ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಹಾಗೆಯೆ ಹೃದಯದ ಆರೋಗ್ಯಕ್ಕೂ ಒಳ್ಳೆಯದು.

9. ಬೆಳುಳ್ಳಿ: ಇದರಲ್ಲಿ ರೋಗನಿರೋಧಕ ಅಂಶವಿರುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ರಕ್ತದಲ್ಲಿ ಸೇರೆದಂತೆ ನೋಡಿಕೊಳ್ಳುತ್ತದೆ. ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ.

10. ಅಗಸೆ ಬೀಜ: ಅಗಸೆ ಬೀಜವನ್ನು ನೇರವಾಗಿ ಅಥವಾ ಪುಡಿ ಮಾಡಿ ಆಹಾರದೊಂದಿಗೆ ಸೇರಿಸಿ ತಿನ್ನುವುದರಿಂದ ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ. ಇದು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ನಿಯಂತ್ರಿಸುತ್ತದೆ ಆದ್ದರಿಂದ ಡಯಾಬಿಟಿಸ್ ಕಾಯಿಲೆಯನ್ನು ನಿಯಂತ್ರಣವಾಗುತ್ತದೆ.

ನೋಡದ್ರಲ್ಲ ಯಾವ ಯಾವ ಆಹಾರವನ್ನು ಸೇವಿಸುವುದರಿಂದ ಡಯಾಬಿಟಿಸ್ ಕಾಯಿಲೆಯನ್ನು ನಿಯಂತ್ರಣವಾಗುತ್ತೆ ಅಂತಾ. ಕೇವಲ ಆರೋಗ್ಯಕರ ಆಹಾರವನ್ನು ಸೇವಿಸಿದರೆ ಸಾಲಲ್ಲಾ. ಆಹಾರದ ಜೊತೆ ಯೋಗ, ವ್ಯಾಯಾಮದ ಅಭ್ಯಾಸ ಮಾಡಿಕೊಂಡರೆ ಉತ್ತಮ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಬಹುದು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Click to comment

Leave a Reply

Your email address will not be published. Required fields are marked *