ಒಂದು ವಾರದಲ್ಲಿ ಕೆಆರ್‌ಎಸ್‌ನಲ್ಲಿ 10 ಅಡಿ ಭರ್ತಿ – ಸದ್ಯಕ್ಕೆ ಕುಡಿಯುವ ನೀರಿಗೆ ಇಲ್ಲ ಹಾಹಾಕಾರ

Public TV
1 Min Read
KRS

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಒಂದು ವಾರದಿಂದ ಕೊಂಚ ಪ್ರಮಾಣ ಮಳೆ‌ ಸುರಿದ ಪರಿಣಾಮ ಒಂದು ವಾರದಲ್ಲಿ ಕೆಆರ್‌ಎಸ್‌ ಡ್ಯಾಂ‌ (KRS Dam) 10 ಅಡಿ ಭರ್ತಿಯಾಗಿದ್ದು, 5 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ.

ಒಂದು ವಾರದ‌ ಹಿಂದೆ ಕೆಆರ್‌ಎಸ್‌ ಡ್ಯಾಂ ಬರಿದಾಗುವ ಆತಂಕ ಎದುರಾಗಿತ್ತು. ಆದರೆ ಒಂದು ವಾರದಿಂದ‌ ಕಾವೇರಿ‌ ಜಲಾನಯನ ಪ್ರದೇಶದಲ್ಲಿ ಒಂದಷ್ಟು ಪ್ರಮಾಣದಲ್ಲಿ‌ ಮಳೆಯಾದ ಪರಿಣಾಮ ಡ್ಯಾಂಗೆ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಇದನ್ನೂ ಓದಿ: ಕಾಂಗ್ರೆಸ್‌ ಮಂತ್ರಿಗಳ ಜೊತೆ ನಮ್ಮ ಅಡ್ಜಸ್ಟ್‌ಮೆಂಟ್‌ ರಾಜಕೀಯ ಇಲ್ಲ: ಯತ್ನಾಳ್‌

ಡ್ಯಾಂನ ನೀರಿನ ಮಟ್ಟದಲ್ಲಿ ಏರಿಕೆಯಾಗುವ ಮೂಲಕ ಕುಡಿಯುವ ನೀರಿನ ಹಾಹಾಕಾರದ ಆತಂಕ ಸದ್ಯಕ್ಕೆ ದೂರವಾಗಿದೆ. ಕಳೆದ ವಾರ 78.56 ಅಡಿ ನೀರಿ ಮಟ್ಟ ಇದ್ದ ಕೆಆರ್‌ಎಸ್‌ ಡ್ಯಾಂ ಇದೀಗ 88.10 ಅಡಿ ತಲುಪಿದೆ.

ಡ್ಯಾಂನಲ್ಲಿ ಕಳೆದ ವಾರ 10.166 ಟಿಎಂಸಿ ನೀರು ಶೇಖರಣೆಯಾಗಿತ್ತು, ಇಂದು ಡ್ಯಾಂನಲ್ಲಿ 14.836 ಟಿಎಂಸಿ ನೀರು ಶೇಖರಣೆಯಾಗಿದೆ. ಸದ್ಯ ಡ್ಯಾಂಗೆ 4,976 ಕ್ಯೂಸೆಕ್ ನೀರು ಒಳಹರಿವು ಇದ್ದರೆ, ಡ್ಯಾಂನಿಂದ 390 ಕ್ಯೂಸೆಕ್ ನೀರು ಹೊರಹರಿವು ಮಾಡಲಾಗಿದೆ. ಇದನ್ನೂ ಓದಿ: ಆಧಾರ್‌ನಲ್ಲಿ ಹೆಸರು ಲಕ್ಷ್ಮೀ, ಲಿಂಗ ಪುರುಷ ಅಂತ ಇರೋದನ್ನ ಕಂಡು ಕಕ್ಕಾಬಿಕ್ಕಿಯಾದ ಕಂಡಕ್ಟರ್‌

Web Stories

Share This Article