ಬೀಜಿಂಗ್: ಜಿಮ್ ಛಾವಣಿ (Gym Roof Collapse) ಕುಸಿದು ಬಿದ್ದ ಪರಿಣಾಮ 10 ಮಂದಿ ದಾರುಣವಾಗಿ ಮೃತಪಟ್ಟು, ಓರ್ವ ಅವಶೇಷಗಳಡಿಯಲ್ಲಿ ಸಿಲುಕಿಕೊಂಡ ಘಟನೆ ಚೀನಾದಲ್ಲಿ (China) ನಡೆದಿದೆ.
ಸೋಮವಾರ ಮುಂಜಾನೆ 5:30ರ ಸುಮಾರಿಗೆ ಈ ಘಟನೆ ನಡೆದಿದು, 14 ಮಂದಿಯನ್ನು ಅವಶೇಷಗಳಡಿಯಿಂದ ಹೊರತೆಗೆಯಲಾಗಿದೆ. ಇದರಲ್ಲಿ ಆರು ಮಂದಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ನಡೆದ ತಕ್ಷಣ ಅಗ್ನಿಶಾಮಕದ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
- Advertisement 2
- Advertisement 3
ಸುಮಾರು 160 ಅಗ್ನಿಶಾಮಕ ಸಿಬ್ಬಂದಿ ಮತ್ತು 39 ಅಗ್ನಿಶಾಮಕ ಟ್ರಕ್ಗಳು ಸ್ಥಳದಲ್ಲಿದ್ದವು. ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಭಾರೀ ಮಳೆ ಬಿದ್ದಾಗ ಛಾವಣಿ ಕುಸಿದಿದೆ. ಹೀಗಾಗಿ ಕಟ್ಟಡ ನಿರ್ಮಾಣ ಮಾಡಿದ ಉಸ್ತುವಾರಿಯನ್ನು ಬಂಧಿಸಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಕರುನಾಡಲ್ಲಿ ಮುಂಗಾರು ಅಬ್ಬರ- ವರುಣಾರ್ಭಟಕ್ಕೆ ನೂರೆಂಟು ಅವಾಂತರ
- Advertisement 4
2015 ರಲ್ಲಿ ಟಿಯಾಂಜಿನ್ನಲ್ಲಿ ಇಂಥದ್ದೇ ಒಂದು ಘಟನೆ ನಡೆಯಿತು. ಅಲ್ಲಿ ರಾಸಾಯನಿಕ ಗೋದಾಮಿನಲ್ಲಿ ಭಾರೀ ಸ್ಫೋಟವು ಕನಿಷ್ಠ 165 ಮಂದಿ ಮೃತಪಟ್ಟಿದ್ದರು.
Web Stories