ಭಾರತೀಯ ಪ್ರೇಕ್ಷಕರು ಕಾಯುತ್ತಿರುವ ಬೆರಳೆಣಿಕೆಯ ಸಿನಿಮಾಗಳಲ್ಲಿ ಸಲಾರ್ (Salaar) ಕೂಡ ಒಂದು. ಕೆಜಿಎಫ್ ನಂತರ ಪ್ರಶಾಂತ್ ನೀಲ್ (Prashant Neel) ಕೈಗೆತ್ತಿಕೊಂಡ ಪ್ರಾಜೆಕ್ಟ್ ಇದಾಗಿದ್ದರಿಂದ, ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಯಿದೆ. ನೋಡುಗರ ನಿರೀಕ್ಷೆ ತಕ್ಕಂತೆ ಪ್ರಶಾಂತ್ ಸಿನಿಮಾ ಮಾಡಿದ್ದಾರೆ ಎನ್ನುವುದಕ್ಕೆ ಸಾಕಷ್ಟು ಸಾಕ್ಷಿಗಳು ದೊರೆಯುತ್ತಿವೆ. ಇದೊಂದು ಮೆಗಾ ಪ್ರಾಜೆಕ್ಟ್ ಆಗಿದ್ದರಿಂದ ದುಬಾರಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿದೆ.
Advertisement
ಬಾಹುಬಲಿ ಖ್ಯಾತಿಯ ಪ್ರಭಾಸ್ (Prabhas) ಮತ್ತು ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಕಾಂಬಿನೇಷನ್ ‘ಸಲಾರ್’ ಸಿನಿಮಾವನ್ನು ಮತ್ತೊಂದು ಹಂತಕ್ಕೆ ತಗೆದುಕೊಂಡು ಹೋಗಿದೆ ಎನ್ನಲಾಗುತ್ತಿದೆ. ಸಿನಿಮಾಗಾಗಿ ಬಳಸಿದ ತಂತ್ರಜ್ಞಾನ ಮತ್ತು ಕಥೆಯನ್ನು ಹೇಳಿದ ರೀತಿ ಹಿಂದಿನ ಅವರ ಸಿನಿಮಾಗಳಿಗಿಂತ ವಿಭಿನ್ನವಾಗಿದೆಯಂತೆ. ಹಾಗಾಗಿ ಸಲಾರ್ ಕೇವಲ ಭಾರತೀಯರು ಮಾತ್ರವಲ್ಲ, ವಿದೇಶಿ ಚಿತ್ರ ಪ್ರೇಕ್ಷಕರು ಕೂಡ ಮೆಚ್ಚುತ್ತಾರೆ ಎನ್ನುವ ವಿಶ್ವಾಸ ಚಿತ್ರತಂಡದ್ದು. ಇದನ್ನೂ ಓದಿ:ಶ್ರುತಿ ಹರಿಹರನ್- ಸರ್ಜಾ ಮೀಟೂ ಕೇಸ್ : ನಟಿಗೆ ಪೊಲೀಸ್ ನೋಟಿಸ್
Advertisement
Advertisement
ಈ ಸಿನಿಮಾದ ಬಜೆಟ್ ಬಗ್ಗೆ ಅಧಿಕೃತವಾಗಿ ಚಿತ್ರತಂಡ ಹೇಳದೇ ಇದ್ದರೂ, ಈವರೆಗೂ ಹೊಂಬಾಳೆ ಫಿಲ್ಮ್ಸ್ (Hombale Films) ಬ್ಯಾನರ್ ನಲ್ಲಿ ಬಂದ ಸಿನಿಮಾಗಳಿಗಿಂತ ಈ ಸಿನಿಮಾದ ಬಜೆಟ್ ದುಬಾರಿಯಂತೆ. ಹೆಸರಾಂತ ಕಲಾವಿದರು ಮತ್ತು ಉತ್ಕ್ರಷ್ಟ ಮಟ್ಟದ ತಂತ್ರಜ್ಞಾನವನ್ನು ಬಳಸಿಕೊಂಡು ಸಿನಿಮಾ ಮಾಡಿದ್ದರಿಂದ 500 ಕೋಟಿಗೂ ಹೆಚ್ಚು ಬಜೆಟ್ (Budget) ಆಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದ್ಯಾವುದೂ ಅಧಿಕೃತವಲ್ಲ.
Advertisement
ಇನ್ನು ಈ ಸಿನಿಮಾದಲ್ಲಿ ಬರುವ ಸಾಹಸ ಸನ್ನಿವೇಶಕ್ಕಾಗಿ ನಿರ್ದೇಶಕ ಪ್ರಶಾಂತ್ ಬರೋಬ್ಬರಿ 10 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಹೇಳಲಾಗುತ್ತದೆ. ಇಡೀ ಸಾಹಸ ಸನ್ನಿವೇಶ ಸಮುದ್ರದಲ್ಲೇ ನಡೆಯಲಿದೆಯಂತೆ. ಅಂದಾಜು 20 ನಿಮಿಷ ಈ ದೃಶ್ಯ ಬರಲಿದೆ ಎಂದು ವರದಿಯಾಗಿದೆ. ಇದು ಸಿನಿಮಾದ ಪ್ರಮುಖ ದೃಶ್ಯಗಳಲ್ಲಿ ಒಂದು ಎಂಬ ಮಾಹಿತಿಯೂ ಇದೆ. ಹೀಗೆ ಸಲಾರ್ ಸಿನಿಮಾ ಬಗ್ಗೆ ದಿನಕ್ಕೊಂದು ಸುದ್ದಿ ಆಚೆ ಬರುತ್ತಿದೆ. ಈ ಮೂಲಕ ಕುತೂಹಲವನ್ನು ಹೆಚ್ಚಿಸುತ್ತಿದೆ.