ಹಾವೇರಿ: ಶಿಗ್ಗಾಂವಿ ಉಪಚುನಾವಣೆಯ ಬಳಿಕ ಹಾವೇರಿ (Haveri) ತಾಲ್ಲೂಕಿನ ಯತ್ನಳ್ಳಿ ಬಳಿಯ ಖಾಲಿ ಲೇಔಟ್‌ನಲ್ಲಿ 10 ಬ್ಯಾಲೆಟ್ ಬಾಕ್ಸ್‌ಗಳು (Ballot Boxes) ಪತ್ತೆಯಾಗಿವೆ.
ಎಪಿಎಂಸಿಯಲ್ಲಿ ಇರುವ ಒಂದು ಗೋದಾಮಿನಲ್ಲಿ ಹಳೆಯ ನಿರುಪಯುಕ್ತ ಬ್ಯಾಲೆಟ್ ಬಾಕ್ಸ್‌ಗಳನ್ನು ಕಂದಾಯ ಇಲಾಖೆಯವರು ಹಲವು ವರ್ಷಗಳ ಹಿಂದೆ ತಂದಿಟ್ಟಿದ್ದರು. ಯಾರೋ ಕಿಡಿಗೇಡಿಗಳು ಬಾಕ್ಸ್‌ಗಳನ್ನು ಮಾರುವ ಉದ್ದೇಶದಿಂದ ಕಳ್ಳತನ ಮಾಡಿದ್ದಾರೆ. ಮಾರಲು ಆಗುವುದಿಲ್ಲ ಎಂದು ತಿಳಿದು ಯತ್ನಳ್ಳಿ ಗ್ರಾಮದ ಬಳಿ ಇರುವ ಲೇಔಟ್ ಒಂದರ ಬಳಿ ಎಸೆದು ಹೋಗಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ಡಾ.ವಿಜಯಮಾಹಂತೇಶ ದಾನಮ್ಮನವರ, ಪತ್ತೆಯಾಗಿರುವುದು 2020ರ ಚುನಾವಣೆಯಲ್ಲಿ ಬಳಕೆ ಮಾಡಿದ ಬ್ಯಾಲೇಟ್ ಬಾಕ್ಸ್‌ಗಳಾಗಿವೆ. ಯಾರೋ ಕಳ್ಳರು ಕದ್ದು ಇಲ್ಲಿ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.
ಹಾವೇರಿ (Haveri) ನಗರ ಪೊಲೀಸರು (Police) ಈ ಬಗ್ಗೆ ತನಿಖೆ ಮಾಡುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.