-ಪೋಷಕರೇ ಮಗಳನ್ನ ಕೊಲೆಗೈದ್ರಾ?
ಭುವನೇಶ್ವರ: ಮನೆಯಲ್ಲಿ 10ನೇ ಕ್ಲಾಸ್ ವಿದ್ಯಾರ್ಥಿನಿಯ ಶವ ಪತ್ತೆಯಾಗಿರುವ ಘಟನೆ ಭುವನೇಶ್ವರದಲ್ಲಿ ಸೋಮವಾರ ನಡೆದಿದೆ. ಪೋಷಕರೇ ಬಾಲಕಿಯನ್ನ ಕೊಲೆಗೈದಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಬಾಲಕಿಯ ಸಾವಿನ ಸತ್ಯಾಸತ್ಯೆ ತಿಳಿಯಲು ಮೃತದೇಹವನ್ನು ಪೊಲೀಸರು ಮರಣೋತ್ತರ ಶವ ಪರೀಕ್ಷೆಗಾಗಿ ರವಾನಿಸಿದ್ದಾರೆ. ಮೃತದೇಹದ ಮೇಲೆ ಗಾಯದ ಗುರುತು ಪತ್ತೆಯಾಗಿಲ್ಲ. ವರದಿ ಬಳಿಕ ಸಾವು ಹೇಗಾಯಿತು ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸ್ ಇನ್‍ಸ್ಪೆಕ್ಟರ್ ರಶ್ಮಿ ಮೊಹಪಾತ್ರ ಹೇಳಿದ್ದಾರೆ.
ಬಾಲಕಿಯ ಸಾವಿನ ಬಳಿಕ ಮನೆಯ ಸುತ್ತಮುತ್ತ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಓರ್ವ ಯುವಕನನ್ನು ಹಿಡಿದು ಸ್ಥಳೀಯರು ಪೊಲೀಸರ ವಶಕ್ಕೆ ನೀಡಿದ್ದಾರೆ. ಯುವಕ ನಾನು ಆಕೆಯನ್ನು ಪ್ರೀತಿಸುತ್ತಿರುವ ವಿಷಯವನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಪ್ರೀತಿಯ ವಿಷಯವಾಗಿ ಪೋಷಕರು ಮತ್ತು ಬಾಲಕಿಯ ನಡುವೆ ಪದೇ ಪದೇ ಜಗಳ ಆಗುತ್ತಿತ್ತು. ಆದ್ರೆ ಅಪರಿಚಿತರು ಮನೆಗೆ ಬಂದು ಮಗಳ ಕೊಲೆ ಮಾಡಿದ್ದಾರೆ ಪೋಷಕರು ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ್ದಾರೆ.