ಭುವನೇಶ್ವರ: ದೇಶದ ರೈಲು ದುರಂತದ ಇತಿಹಾಸದಲ್ಲೇ ಒಡಿಶಾ ರೈಲು ಅಪಘಾತ (Odisha Train Accident) ಒಂದು ಕಪ್ಪು ಚುಕ್ಕೆ. ಮೂರು ರೈಲುಗಳು ಅಪಘಾತಕ್ಕೀಡಾಗಿದ್ದು, ಅಪಾರ ಸಾವು-ನೋವಿನ ದೃಶ್ಯಗಳು ಈಗಲೂ ಬೆಚ್ಚಿಬೀಳುಸುತ್ತವೆ. ಇಂತಹ ಭೀಕರ ಅಪಘಾತವಾದ ಬಳಿಕ ಏನೇನಾಯಿತು ಎಂಬ ವಿವರವನ್ನು ಇಲ್ಲಿ ಎಳೆಎಳೆಯಾಗಿ ಬಿಚ್ಚಿಡಲಾಗಿದೆ.
ಸಿಎಸ್‌ಗೆ ಮೊದಲ ಫೋನ್ ಕರೆ
ಅಂದು ಜೂನ್ 2 ರ ಸಂಜೆ 7 ರಿಂದ 7:10 ರ ಸಂದರ್ಭ. ಒಡಿಶಾ ಮುಖ್ಯ ಕಾರ್ಯದರ್ಶಿ ಪ್ರದೀಪ್ ಜೆನಾ ಅವರು ಬಾಲಸೋರ್ ಜಿಲ್ಲಾಧಿಕಾರಿ ದತ್ತಾತ್ರೇಯ ಪಿ ಶಿಂಧೆ ಅವರಿಂದ ಕರೆ ಸ್ವೀಕರಿಸಿದರು. “ಸರ್, ಒಂದು ರೈಲು ಹಳಿತಪ್ಪಿದೆ ಮತ್ತು ನಾನು ಸ್ಥಳಕ್ಕೆ ಹೋಗುತ್ತಿದ್ದೇನೆ” ಎಂದು ಶಿಂಧೆ ಹೇಳಿದರು. ಏನಾದರೂ ಅಗತ್ಯವಿದೆಯೇ ಎಂದು ಕೇಳಿದಾಗ ಜಿಲ್ಲಾಧಿಕಾರಿ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ. ಸರಕು ರೈಲು ಹಳಿತಪ್ಪಿದರೂ ಸಹ, ODRAF ಮತ್ತು ಅಗ್ನಿಶಾಮಕ ಸೇವೆಗಳ ತಂಡಗಳ ಅಗತ್ಯವಿರುತ್ತದೆ. ಲೂಪ್ ಲೈನ್‌ಗೆ ತಪ್ಪಾಗಿ ಪ್ರವೇಶಿಸಿದ ಕೋರಮಂಡಲ್ ಎಕ್ಸ್‌ಪ್ರೆಸ್ ಹಳಿತಪ್ಪಿ ಸ್ಟ್ಯಾಟಿಕ್ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಅಲ್ಲದೇ ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನ ಕೊನೆಯ ಮೂರು ಕೋಚ್‌ಗಳಿಗೂ ಡಿಕ್ಕಿ ಹೊಡೆದಿತ್ತು. ಅಪಘಾತದ ಸ್ಥಳಕ್ಕೆ ಮುಖ್ಯ ಕಾರ್ಯದರ್ಶಿ ಅವರು ಜಿಲ್ಲೆಯ ಎರಡು ತಂಡಗಳನ್ನು ಸಜ್ಜುಗೊಳಿಸಿದರು. ಇದನ್ನೂ ಓದಿ: ಒಡಿಶಾ ರೈಲು ದುರಂತ – ಪರಿಹಾರದ ಹಣಕ್ಕಾಗಿ ಮೃತ ವ್ಯಕ್ತಿಯನ್ನು ಪತಿ ಎಂದ ಮಹಿಳೆ
Advertisement
Advertisement
ಇದಾದ ಕೆಲವೇ ನಿಮಿಷಗಳಲ್ಲಿ ಬಾಲಸೋರ್ ಜಿಲ್ಲಾಧಿಕಾರಿಯಿಂದ ಮುಖ್ಯ ಕಾರ್ಯದರ್ಶಿಗೆ ಎರಡನೇ ಕರೆ ಬಂತು. “ಸರ್, ಇದು ರೈಲು ಅಪಘಾತ” ಎಂದರು. ಮರುನಿಮಿಷದಲ್ಲಿ ಅವರಿಗೆ ಮುಖ್ಯಮಂತ್ರಿ ಕಚೇರಿಯಿಂದ ಹಠಾತ್ ಕರೆ ಬಂತು. ಅಪಘಾತದ ವಿಚಾರ ಪ್ರಸ್ತಾಪಿಸಿದರು. “ಅಪಘಾತದ ಬಗ್ಗೆ ಮಾಹಿತಿ ಬಂದಿದೆ. ನಾನು ಹೇಳಿದ್ದೇನೆ. ಸ್ಥಳಕ್ಕೆ ODRAF ಮತ್ತು ಅಗ್ನಿಶಾಮಕ ಸೇವೆಗಳ ತಂಡಗಳನ್ನು ನಿಯೋಜಿಸಿದ್ದೇನೆ. ಡಿಸಿ ಅಲ್ಲಿಗೆ ತಲುಪಿದಾಗ, ಇನ್ನೂ ಏನು ಅಗತ್ಯವಿದೆ ಎಂದು ಅವರಿಗೆ ತಿಳಿಯುತ್ತೆ. ಯಾವುದೇ ಪರಿಸ್ಥಿತಿ ಇದ್ದರೂ, ನಿಭಾಯಿಸಲು ರಾಜ್ಯ ಮಟ್ಟದಲ್ಲಿ ತಯಾರಿ ನಡೆಸುತ್ತಿದ್ದೇನೆ” ಎಂದು ಸಿಎಸ್ ಪ್ರತಿಕ್ರಿಯಿಸಿದರು. ನಂತರ ಟಿವಿ ಆನ್ ಮಾಡಿ ಸುದ್ದಿ ವಾಹಿನಿಯಲ್ಲಿ ರಾತ್ರಿ 7:15ರ ಸುಮಾರಿಗೆ ಮೊದಲ ದೃಶ್ಯಾವಳಿಗಳನ್ನು ನೋಡಿದಾಗ, ಮೇಜರ್ ಇದೆ ಎಂಬುದು ನಮಗೆ ಸ್ಪಷ್ಟವಾಯಿತು ಎಂದು ಸಿಎಸ್ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: PublicTV Explainer: ರಕ್ಷಾ ‘ಕವಚ’ ಇದ್ದಿದ್ರೆ ಒಡಿಶಾ ರೈಲು ದುರಂತ ತಪ್ಪಿಸಬಹುದಿತ್ತೆ?
Advertisement
ದುರಂತದ ತೀವ್ರತೆ ಮತ್ತು ಪ್ರಮಾಣವನ್ನು ಅರಿತ ಕೂಡಲೇ ರಾಜ್ಯ ಸರ್ಕಾರದ ಒಂಬತ್ತು ಹಿರಿಯ ಅಧಿಕಾರಿಗಳನ್ನು 45 ನಿಮಿಷಗಳಲ್ಲಿ ಬಾಲಸೋರ್‌ಗೆ ನಿಯೋಜಿಸಲಾಗಿದೆ. ಅವರಲ್ಲಿ ಎಸಿಎಸ್ ಸತ್ಯಬ್ರತ್ ಸಾಹು, ಕೈಗಾರಿಕಾ ಕಾರ್ಯದರ್ಶಿ ಹೇಮಂಡ್ ಶರ್ಮಾ, ಡಿಜಿ ಅಗ್ನಿಶಾಮಕ ಸೇವೆ ಸುಧಾಂಶು ಸಾರಂಗಿ, ಸಾರಿಗೆ ಆಯುಕ್ತ ಅಮಿತಾಭ್ ಠಾಕೂರ್ ಮತ್ತು ಡಿಜಿ ಜಿಆರ್‌ಪಿ ಇದ್ದರು. ಇದನ್ನೂ ಓದಿ: ಬಾಲಸೋರ್ ರೈಲು ಅಪಘಾತ – ತನಿಖೆ ಆರಂಭಿಸಿದ ಸಿಬಿಐ
Advertisement
ಕಂಟ್ರೋಲ್ ರೂಂನಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಮುಖ್ಯ ಕಾರ್ಯದರ್ಶಿ ಮತ್ತು ಇತರ ಅಧಿಕಾರಿಗಳ ತುರ್ತು ಸಭೆ ನಡೆಸಿದರು. “ಏನು ಬೇಕಾದರೂ ಮಾಡಿ. ಹಣದ ಬಗ್ಗೆ ಚಿಂತಿಸಬೇಡಿ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ ಡ್ರಾ ಮಾಡಿ” ಎಂದು ಸೂಚಿಸಿದರು. ಗಾಯಾಳುಗಳಿಗೆ ಚಿಕಿತ್ಸೆ, ಸಂತ್ರಸ್ತರಿಗೆ ಆಹಾರ ಎಲ್ಲವನ್ನೂ ಸೂಕ್ತ ರೀತಿಯಲ್ಲಿ ನಿರ್ವಹಿಸಿ ಎಂದು ಜೀವಗಳನ್ನು ಉಳಿಸುವ ಕುರಿತು ಸಭೆಯಲ್ಲಿ ಸಿಎಂ ಒತ್ತಿ ಹೇಳಿದರು.
ಇತ್ತ ಒಡಿಶಾ ಆರೋಗ್ಯ ಕಾರ್ಯದರ್ಶಿ ಶಾಲಿನಿ ಪಂಡಿತ್, ಜಿಲ್ಲೆಗೆ ಅಂಬುಲೆನ್ಸ್‌ಗಳನ್ನು ಸಜ್ಜುಗೊಳಿಸಿದರು. ರೋಗಿಗಳನ್ನು ಸ್ವೀಕರಿಸಲು ಸಿದ್ಧರಾಗಿರುವ ಬಾಲಾಸೋರ್ ಬಳಿಯ ಆಸ್ಪತ್ರೆಗಳನ್ನು ಎಚ್ಚರಿಸಿದರು. ಮೂರು ಗಂಟೆಗಳಲ್ಲಿ, ಅವರು 250 ಅಂಬುಲೆನ್ಸ್‌ಗಳು, SCB ವೈದ್ಯಕೀಯ ಕಾಲೇಜಿನಿಂದ 50 ವೈದ್ಯರು, ಬರಿಪಾದ ವೈದ್ಯಕೀಯ ಕಾಲೇಜಿನಿಂದ 30-40 ವೈದ್ಯರು ಮತ್ತು ಕೇಂದ್ರಪಾರಾ ಮತ್ತು ನೆರೆಯ ಜಾಜ್‌ಪುರದಿಂದ ಕೆಲವು ವೈದ್ಯರನ್ನು ಸಜ್ಜುಗೊಳಿಸಿದರು. ಬಾಲಾಸೋರ್‌ನಲ್ಲಿರುವ ಗ್ರೌಂಡ್ ಝೀರೋಗೆ “ಸಾಧ್ಯವಾದಷ್ಟು ಅಂಬುಲೆನ್ಸ್‌ಗಳನ್ನು ಕಳುಹಿಸಲು” ನೆರೆಯ ಭದ್ರಕ್ ಮತ್ತು ಜಾಜ್‌ಪುರದ ಡಿಸಿಗಳಿಗೆ ಸೂಚಿಸಿದರು. ಇದನ್ನೂ ಓದಿ: ಸತ್ತಿದ್ದಾನೆಂದು ಹೆಣಗಳ ರಾಶಿಯಲ್ಲಿ ಇಟ್ಟಿದ್ದ ಮಗನನ್ನು ಜೀವಂತವಾಗಿ ಹೊರ ತೆಗೆದ ತಂದೆ!
ಅಂಬುಲೆನ್ಸ್ ಜೊತೆಗೆ ಸ್ಥಳಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲಾಯಿತು. ಸಿಎಸ್ ಜೆನಾ ಅವರು ಸಾರಿಗೆ ಆಯುಕ್ತ ಅಮಿತಾಬ್ ಠಾಕೂರ್ ಅವರೊಂದಿಗೆ ಮಾತನಾಡಿದರು. ಪ್ರತಿಯಾಗಿ, ಬಾಲಸೋರ್, ಭದ್ರಕ್, ಜಾಜ್‌ಪುರ್ ಮತ್ತು ಬರಿಪದ ಜಿಲ್ಲೆಗಳ ಆರ್‌ಟಿಒಗಳಿಗೆ “ಕನಿಷ್ಠ 40 ಬಸ್‌ಗಳನ್ನು ಕಳುಹಿಸಲು” ಕೇಳಿದರು. “ರೈಲು ಅಪಘಾತದ ಎರಡು ಗಂಟೆಗಳ ಅವಧಿಯಲ್ಲಿ 40 ಅಂಬುಲೆನ್ಸ್‌ಗಳು, 40 ಬಸ್‌ಗಳು ಮತ್ತು 80 ವೈದ್ಯರು ಜಿಲ್ಲೆಯನ್ನು ತಲುಪಿದ್ದಾರೆ” ಎಂದು ಜೆನಾ ಹೇಳಿದರು.
9 ಅಧಿಕಾರಿಗಳ ನಿರಂತರ ಕೆಲಸ
ಅಗ್ನಿಶಾಮಕ ಸೇವೆಗಳ ಡಿಜಿ ಸುಧಾಂಶು ಸಾರಂಗಿ ಅವರು ಭುವನೇಶ್ವರದಿಂದ ಮೊದಲು ತಲುಪಿದರು. ನಂತರ ಎಸಿಎಸ್ ಸತ್ಯಬ್ರತ್ ಸಾಹು ಮತ್ತು ಕೈಗಾರಿಕಾ ಪ್ರಧಾನ ಕಾರ್ಯದರ್ಶಿ ಹೇಮಂತ್ ಶರ್ಮಾ ಹೋದರು. ಆ ಹೊತ್ತಿಗೆ, ಅಗ್ನಿಶಾಮಕ ಇಲಾಖೆಯ 15 ತಂಡಗಳು ಮತ್ತು ಎರಡು ODRAF ತಂಡಗಳು ಸ್ಥಳಕ್ಕೆ ತಲುಪಿದ್ದವು. ಮಧ್ಯರಾತ್ರಿಯ ವೇಳೆಗೆ ರಕ್ಷಣಾ ಸಿಬ್ಬಂದಿಗಳ ಸಂಖ್ಯೆ 400 ಆಗಿತ್ತು. ದುರಂತ ಸ್ಥಳದಲ್ಲಿ ಸತ್ಯಬ್ರತ್ ಸಾಹು, ಹೇಮಂತ್ ಶರ್ಮಾ, ಬಲವಂತ್ ಸಿಂಗ್, ಅರವಿಂದ್ ಅಗರ್ವಾಲ್, ಭೂಪಿಂದರ್ ಸಿಂಗ್ ಪುನಿಯಾ, ಸುಧಾಂಶು ಸಾರಂಗಿ, ದಯಾಳ್ ಗಂಗ್ವಾರ್, ಅಮಿತಾಭ್ ಠಾಕೂರ್, ಹಿಮಾಂಶು ಕುಮಾರ್ ಲಾಲ್ ಒಂಬತ್ತು ಅಧಿಕಾರಿಗಳು ಹಾಗೂ ಬಾಲಸೋರ್ ಜಿಲ್ಲಾಧಿಕಾರಿ ಮತ್ತು ಎಸ್ಪಿ ಜೊತೆಯಲ್ಲಿ ನಿರಂತರವಾಗಿ ಕೆಲಸ ಮಾಡಿದರು. ಇದನ್ನೂ ಓದಿ: ಒಡಿಶಾ ರೈಲು ದುರಂತವಾಗಿ 4 ದಿನ ಕಳೆದರೂ 101 ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ
3 ಹಂತಗಳಲ್ಲಿ ರಕ್ಷಣಾ ಕಾರ್ಯಾಚರಣೆ
ತುರ್ತು ಪರಿಸ್ಥಿತಿಯಲ್ಲಿ ಯಾರು ಪರಿಹಾರದ ಉಸ್ತುವಾರಿ ವಹಿಸಬೇಕು, ಗಾಯಗೊಂಡವರನ್ನು ಯಾರು ಸ್ವೀಕರಿಸಬೇಕು, ಮೃತದೇಹಗಳನ್ನು ಯಾರು ನಿರ್ವಹಿಸಬೇಕು ಎಂದು ಅಧಿಕಾರಿಗಳು ಒಬ್ಬಬ್ಬರಾಗಿ ಒಂದೊಂದು ಜವಾಬ್ದಾರಿ ವಹಿಸಿಕೊಂಡರು. ಮೊದಲ ಹಂತದಲ್ಲಿ, ಇನ್ನೂ ಜೀವಂತವಾಗಿರುವ ಪ್ರಯಾಣಿಕರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಬೇಕು. ನಂತರ ಟ್ರ್ಯಾಕ್‌ನಲ್ಲಿ ಮೃತದೇಹಗಳನ್ನು ಪಕ್ಕಕ್ಕೆ ಇರಿಸುವ ಕೆಲಸ ಮಾಡಿದರು. ಮೊದಲ 45 ನಿಮಿಷಗಳ ಕಾಲ, ಪ್ರಾಥಮಿಕವಾಗಿ ಶಿಂಧೆ ನೇತೃತ್ವದ ಸ್ಥಳೀಯ ಆಡಳಿತ, ಎಸ್ಪಿ ಮತ್ತು ಬಹನಾಗಾ ಜನರು ಪರಿಸ್ಥಿತಿಯನ್ನು ನಿಭಾಯಿಸಿದರು. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವುದು, ಅಧಿಕಾರಿಗಳಿಗೆ ಅಗತ್ಯ ಸಹಾಯ ಒದಗಿಸುವುದು ಮತ್ತು ರಕ್ತದಾನ ಮಾಡುವ ಮೂಲಕ ಸ್ಥಳೀಯರು ಸಾಥ್ ನೀಡಿದರು.
ಅಷ್ಟೊತ್ತಿಗಾಗಲೇ ಕತ್ತಲಾವರಿಸಿತ್ತು. ಕತ್ತಲಿನಲ್ಲಿ ರಕ್ಷಣೆ ಕಾರ್ಯಾಚರಣೆ ಮಾಡುವುದು ಕಷ್ಟ ಎಂಬುದು ಅಧಿಕಾರಿಗಳಿಗೆ ಅರಿವಾಗಿದ್ದರಿಂದ ಮುಂಚೆಯೇ ಒಂದಷ್ಟು ಸಿದ್ಧತೆ ಮಾಡಿಕೊಂಡಿದ್ದರು. ಇಡೀ ಪ್ರದೇಶವನ್ನು ಬೆಳಗಿಸುವುದು ಮೊದಲ ಕೆಲಸವಾಗಿತ್ತು. ನಾವು 53 ಲೈಟ್ ಟವರ್‌ಗಳನ್ನು ಮತ್ತು ಜನರೇಟರ್‌ಗಳನ್ನು ಸ್ಥಾಪಿಸಿದ್ದರು. ಇದರಿಂದ ರಕ್ಷಣಾ ಕಾರ್ಯಾಚರಣೆಗಳು ನಡೆಯಿತು. ಎರಡನೇ ಕೆಲಸ ಗಾಯಾಳುಗಳನ್ನು ಸ್ಥಳಾಂತರಿಸುವುದಾಗಿತ್ತು. ಸ್ಥಳೀಯ ಸಾರ್ವಜನಿಕರು ಮತ್ತು ಅಧಿಕಾರಿಗಳು ಒಟ್ಟಿಗೆ ಕೆಲಸ ಮಾಡಿದ್ದರಿಂದ ಗಾಯಾಳುಗಳ ಸ್ಥಳಾಂತರವು ತಕ್ಷಣವೇ ಪ್ರಾರಂಭವಾಯಿತು. ಹೊಸ ತಂಡಗಳು ಆಗಮಿಸುತ್ತಿದ್ದಂತೆ ಅಧಿಕಾರಿಗಳಿಗೆ ಮತ್ತಷ್ಟು ಬಲ ಹೆಚ್ಚಾದಂತಾಯಿತು. ಹೀಗೆ ನಿರಂತರ ಕಾರ್ಯಾಚರಣೆ ನಡೆಸಿ ಮಧ್ಯರಾತ್ರಿ 12 ಗಂಟೆ ಹೊತ್ತಿಗೆ ಬದುಕುಳಿದು ಗಾಯಗೊಂಡಿದ್ದ ಎಲ್ಲರನ್ನೂ ಹೊರತೆಗೆದು ಆಸ್ಪತ್ರೆಗೆ ಸಾಗಿಸುವ ಕೆಲಸವಾಗಿತ್ತು. ಸರಿಸುಮಾರು 1,200 ಗಾಯಾಳುಗಳನ್ನು ರಕ್ಷಿಸಲಾಯಿತು. ಗಂಭೀರವಾಗಿ ಗಾಯಗೊಂಡವರನ್ನು ಅಂಬುಲೆನ್ಸ್ ಮೂಲಕ ಹಾಗೂ ಸಣ್ಣಪುಟ್ಟ ಗಾಯಗಳಾಗಿದ್ದವರನ್ನು ಬಸ್‌ಗಳ ಮೂಲಕ ಆಸ್ಪತ್ರೆಗೆ ಸಾಗಿಸುವ ಕೆಲಸವಾಯಿತು. ಹೀಗೆ ಮೂರು ಹಂತಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯಿತು. ರಕ್ಷಣಾ ಕಾರ್ಯದಲ್ಲಿ ಹಂತಹಂತವಾಗಿ ಎನ್‌ಡಿಆರ್‌ಎಫ್, ಸೈನ್ಯದವರು ರಕ್ಷಣಾ ತಂಡಗಳನ್ನು ಸೇರಿ ಸಾಥ್ ಕೊಟ್ಟರು. ಇದನ್ನೂ ಓದಿ: ಒಡಿಶಾ ರೈಲು ದುರಂತ ವಿಧ್ವಂಸಕ ಕೃತ್ಯವೇ? – ಪ್ರಾಥಮಿಕ ತನಿಖೆಯ ಬೆನ್ನಲ್ಲೇ ಎದ್ದಿವೆ ಹಲವು ಪ್ರಶ್ನೆಗಳು
ತಾಪಮಾನವು 39 ಮತ್ತು 40 ಡಿಗ್ರಿಗಳಿಗೆ ಏರುವುದರೊಂದಿಗೆ ಸುಡುವ ಬೇಸಿಗೆಯಲ್ಲಿ ಮೃತದೇಹಗಳನ್ನು ಸಂರಕ್ಷಿಸುವುದು ಮತ್ತೊಂದು ದೊಡ್ಡ ಸವಾಲಾಗಿತ್ತು. ಅಪಘಾತದ ಮರುದಿನವೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿತ್ತು. ನಂತರ ಸ್ಥಳಕ್ಕೆ ವಿಐಪಿಗಳ ಭೇಟಿ, ಪರಿಶೀಲನೆ ಕಾರ್ಯವೂ ನಡೆಯಿತು. ಪ್ರಧಾನಿ ಮೋದಿ ಜೂನ್ 3 ರಂದು ಮಧ್ಯಾಹ್ನ ದುರಂತದ ಸ್ಥಳಕ್ಕೆ ತಲುಪಿದಾಗ, ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮೈದಾನದಲ್ಲಿದ್ದ ಅಧಿಕಾರಿಗಳನ್ನು ಕೇಳಿದರು. ಅದೇ ದಿನ ಬೆಳಿಗ್ಗೆ ಅಪಘಾತದ ಸ್ಥಳದಲ್ಲಿದ್ದ ಪಟ್ನಾಯಕ್, ಮೃತದೇಹಗಳನ್ನು ಸಂರಕ್ಷಿಸುವಲ್ಲಿ ರಾಜ್ಯಕ್ಕೆ ಬೆಂಬಲದ ಅಗತ್ಯವಿದೆ ಎಂದು ಪ್ರಧಾನಿ ಮೋದಿಯವರಿಗೆ ತಿಳಿಸಿದರು.
ಪ್ರಧಾನಿ ಮೋದಿ ಅವರು ಕೇಂದ್ರದ ಆರೋಗ್ಯ ಮಂತ್ರಿಗಳು ಹಾಗೂ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು. ನಂತರ ಒಂದೊಂದು ಅಂಬುಲೆನ್ಸ್‌ನಲ್ಲಿ 2 ಮೃತದೇಹಗಳನ್ನು ಭುವನೇಶ್ವರದ ಏಮ್ಸ್‌ಗೆ ಸಾಗಿಸಲಾಯಿತು. ಅಲ್ಲಿ ಶವಗಳಿಗಾಗಿ 150 ಹಾಸಿಗೆಗಳ ಶವಗಾರದ ವ್ಯವಸ್ಥೆ ಮಾಡಲಾಗಿತ್ತು. ಹೀಗೆ ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ನಡೆಯಿತು. ಇದನ್ನೂ ಓದಿ: Odisha Train Accident; ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಏರಿಕೆ – 233 ಮಂದಿ ಬಲಿ, 900 ಮಂದಿಗೆ ಗಾಯ
ಮೃತರು ಮತ್ತು ಗಾಯಾಳುಗಳ ಬಂಧುಗಳಿಗೆ ಪರಿಹಾರವನ್ನು ಘೋಷಿಸುವುದರಿಂದ ಹಿಡಿದು, ಸಿಕ್ಕಿಬಿದ್ದ ಪ್ರಯಾಣಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ, ಗುರುತಿನ ನಂತರ ಮೃತದೇಹಗಳನ್ನು ಕುಟುಂಬಸ್ಥರು ಉಚಿತವಾಗಿ ಸಾಗಿಸುವುದು, ಮರಣ ಪ್ರಮಾಣಪತ್ರಗಳನ್ನು ಪಡೆಯುವ ಪ್ರಕ್ರಿಯೆ ಸುಲಭಗೊಳಿಸುವುದು, ಸಹಾಯ ಕೇಂದ್ರಗಳನ್ನು ಸ್ಥಾಪಿಸುವುದು ಮತ್ತು ಸಂತ್ರಸ್ತರಿಗೆ ಆಹಾರ ಒದಗಿಸುವುದು. ಹೀಗೆ ಅನೇಕ ಸವಾಲುಗಳು ಎದುರಾದವು. ಸಿಎಂ, ಅಧಿಕಾರಿಗಳು ಎಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿದರು.