ಇಂಗ್ಲೆಂಡ್: ಬರೀ ಮಾನವನಿಗೆ ಮಾತ್ರವಲ್ಲದೆ ಪ್ರಾಣಿ, ಪಕ್ಷಿ, ಜಲಚರಗಳಿಗೂ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಮಾಡುವಷ್ಟರ ಮಟ್ಟಿಗೆ ವೈದ್ಯ ಲೋಕ ಬೆಳೆದು ನಿಂತಿದೆ. ಯುಕೆಯಲ್ಲಿ ಕೇವಲ 1 ಗ್ರಾಂ ತೂಕದ ಮೀನಿಗೆ ವೈದ್ಯರು ಆಪರೇಷನ್ ಮಾಡಿ ಯಶಸ್ವಿಯಾಗಿರೋದು ಅದಕ್ಕೆ ಒಂದೊಳ್ಳೆ ಉದಾಹರಣೆಯಾಗಿದೆ.
ಹೌದು. ಇಂಗ್ಲೆಂಡಿನ ಬ್ರಿಸ್ಟಸ್‍ನ ವೈದ್ಯೆ ಸೋನ್ಯಾ ಮೈಲ್ಸ್ ಇಂತಹದೊಂದು ಅಚ್ಚರಿಯ ಕೆಲಸ ಮಾಡಿದ್ದಾರೆ. ಕೇವಲ 1 ಗ್ರಾಂ ತೂಕದ ಮೌಲಿ ಪ್ರಜಾತಿಯ ಗೋಲ್ಡ್ ಫಿಶ್‍ಗೆ ಶಸ್ತ್ರ ಚಿಕಿತ್ಸೆ ಮಾಡಿ ಯಶಸ್ವಿಯಾಗಿ ಎಲ್ಲೆಡೆ ಸುದ್ದಿಯಾಗಿದ್ದಾರೆ. ಯುಕೆ ಮಹಿಳೆಯೊಬ್ಬರಿಗೆ ಈ 1 ಗ್ರಾಂ ತೂಕದ ಗೋಲ್ಡ್ ಫಿಶ್ ಅನ್ನು ಯಾರೋ ಗಿಫ್ಟ್ ಮಾಡಿದ್ದರು. ಆದ್ದರಿಂದ ಮೀನಿನ ಒಡತಿ ಅದನ್ನು ತುಂಬಾ ಜಾಗೃತೆಯಿಂದ ನೋಡಿಕೊಳ್ಳುತ್ತಿದ್ದರು. ಒಂದು ದಿನ ಮೀನು ಅಸ್ವಸ್ಥಗೊಂಡಿದ್ದನ್ನು ಗಮನಿಸಿದ ಒಡತಿ, ಅದನ್ನು ವೈದ್ಯರ ಬಳಿ ಕರೆತಂದಿದ್ದರು.
Advertisement
Advertisement
ಆಗ ಅದರ ಹೊಟ್ಟೆಯಲ್ಲಿ ಟ್ಯೂಮರ್ ಆಗಿರುವುದು ಬೆಳಕಿಗೆ ಬಂದು, ಮೀನಿಗೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ಹೇಳಿದ್ದರು. ಅದಕ್ಕೆ ಒಡತಿ ಒಪ್ಪಿಗೆ ನೀಡಿದಾಗ, ವೈದ್ಯೆ ಸೋನ್ಯಾ ಮೈಲ್ಸ್ ಯಶಸ್ವಿಯಾಗಿ ಮೀನಿನ ಹೊಟ್ಟೆಯಲ್ಲಿದ್ದ ಟ್ಯೂಮರ್ ಹೊರತೆಗೆದು ದಾಖಲೆ ಮಾಡಿದ್ದಾರೆ. ಈ ಮೀನು ಇದೀಗ ವಿಶ್ವದ ಅತ್ಯಂತ ಚಿಕ್ಕ ರೋಗಿ ಎಂಬ ಹೊಗ್ಗಳಿಕೆ ಪಡೆದುಕೊಂಡಿದೆ.
Advertisement
ಒಂದು ಸಣ್ಣ ಪೈಪ್ ಮೂಲಕ ಮೀನಿನಲ್ಲಿದ್ದ ಟ್ಯೂಮರ್‌ನ್ನು ವೈದ್ಯೆ ಹೊರ ತೆಗೆದಿದ್ದಾರೆ. ಈ ಶಸ್ತ್ರಚಿಕಿತ್ಸೆ ಯಶಸ್ವಿಗೊಳಿಸಲು ಬರೋಬ್ಬರಿ 40 ನಿಮಿಷಗಳ ಕಾಲ ವೈದ್ಯರು ಕಷ್ಟಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಈ ಗೋಲ್ಡನ್ ಫಿಶ್‍ಗೆ ಮಾರುಕಟ್ಟೆಯಲ್ಲಿ 89 ರೂ. ಬೆಲೆ ಇದೆ. ಆದರೆ ಇದರ ಶಸ್ತ್ರಚಿಕಿತ್ಸೆಗೆ ಮೀನಿನ ಒಡತಿ ಬರೋಬ್ಬರಿ 9 ಸಾವಿರ ರೂ. ಖರ್ಚು ಮಾಡಿದ್ದಾರೆ. ಸದ್ಯ ಈ ಮೀನು ಆರೋಗ್ಯವಾಗಿದೆ ಎಂದು ಒಡತಿ ತಿಳಿಸಿದ್ದಾರೆ.