KSRTC ನೌಕರರಿಗೆ ಗುಡ್‌ನ್ಯೂಸ್ – 1 ಕೋಟಿ ಮೌಲ್ಯದ ವಿಮೆ ಸೌಲಭ್ಯ ಜಾರಿ

Public TV
3 Min Read
KSRTC Bengaluru

ಬೆಂಗಳೂರು: ದೇಶದ ರಸ್ತೆ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ (KSRTC Employees) 1 ಕೋಟಿ ರೂ. ಮೌಲ್ಯದ ವಿಮೆ (Insurance) ಸೌಲಭ್ಯ ಜಾರಿಗೊಳಿಸಲಾಗಿದೆ.

ಬೆಂಗಳೂರಿನ (Bengaluru) ಕೆಎಸ್‌ಆರ್‌ಟಿಸಿ (KSRTC) ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಎಂ.ಚಂದ್ರಪ್ಪ ಅವರ ಸಮ್ಮುಖದಲ್ಲಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್, ಯುನೈಟೆಡ್ ಇಂಡಿಯಾ ವಿಮಾ ಕಂಪನಿಯ (United India Insurance Company) ಪ್ರಧಾನ ವ್ಯವಸ್ಥಾಪಕರು ಅಂಗ್ರೂಪ್ ಸೋನಂ ಅವರು ಒಡಂಬಡಿಕೆಗೆ ಸಹಿ ಹಾಕಿದರು. ಇದನ್ನೂ ಓದಿ: ಅಲಿ, ರಶೀದ್ ಸಂಭ್ರಮಾಚರಣೆಯಿಂದ ಹೊರ ಹೋಗಿ ಎಂದ ಬಟ್ಲರ್ – ಆದ್ರು ಹೃದಯ ಗೆದ್ದ ಕ್ಯಾಪ್ಟನ್

KSRTC Bengaluru 1

ಈಗಾಗಲೇ ಭಾರತೀಯ ಸ್ಟೇಟ್‌ಬ್ಯಾಂಕ್‌ನೊಂದಿಗೆ (SBI) ಮಾಡಿಕೊಂಡ 50 ಲಕ್ಷ ವಿಮೆ ಹಾಗೂ ಇಂದು ಯುನೈಟೆಡ್ ಇಂಡಿಯಾ ವಿಮಾ ಕಂಪನಿಯೊಂದಿಗೆ (United India Insurance Company) ಮಾಡಿಕೊಂಡ ಒಡಂಬಡಿಕೆಯ 50 ಲಕ್ಷ ರೂ. ಸೇರಿ ಒಟ್ಟು 1 ಕೋಟಿ ರೂ. ವಿಮೆ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ದೆಹಲಿಯ ಭಯಾನಕ ಕೃತ್ಯಕ್ಕೆ ಅಮೆರಿಕದ ಥ್ರಿಲ್ಲರ್ `ಡೆಕ್ಸ್ಟರ್‌’ ಸ್ಫೂರ್ತಿ – ರೋಚಕ ಸತ್ಯ ಬಯಲು

ಕೆಎಸ್‌ಆರ್‌ಟಿಸಿಯು (KSRTC) ತನ್ನ ಸಿಬ್ಬಂದಿ ಕರ್ತವ್ಯದಲ್ಲಿದ್ದಾಗ ಅಥವಾ ಇಲ್ಲದಿದ್ದಾಗ ಅಪಘಾತದಲ್ಲಿ ಮೃತಪಟ್ಟರೆ, ಶಾಶ್ವತ ಅಥವಾ ತಾತ್ಕಾಲಿಕ ಅಂಗವೈಕಲ್ಯಕ್ಕೆ ತುತ್ತಾದರೆ ಅವರಿಗೆ 50 ಲಕ್ಷ ರೂ. ವಿಮೆ ನೀಡುವ ಸೌಲಭ್ಯವನ್ನು ಎಸ್‌ಬಿಐನೊಂದಿಗೆ ಮಾಡಿಕೊಂಡ ಒಪ್ಪಂದದಲ್ಲಿ ಜಾರಿಗೆ ತರಲಾಗಿತ್ತು. ಇದರ ಮುಂದುವರಿದ ಭಾಗವಾಗಿ, ಯುನೈಟೆಡ್ ಇಂಡಿಯಾ ವಿಮಾ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಅದರಂತೆ ಸಿಬ್ಬಂದಿಗೆ ಇನ್ನೂ 50 ವಿಮಾ ಸೌಲಭ್ಯ ಹೆಚ್ಚುವರಿಯಾಗಿ ಸಿಗಲಿದೆ. ಈ ಯೋಜನೆಗೆ ಒಳಪಡುವ ಸಿಬ್ಬಂದಿ ಪ್ರತಿ ತಿಂಗಳಿಗೆ 62.50 ರೂ. ಜಿಎಸ್‌ಟಿ (GST) ಹಾಗೂ ವಾರ್ಷಿಕ ಜಿಎಸ್‌ಟಿ 750 ರೂ. ಸೇರಿ ಒಟ್ಟು 885 ರೂ. ಪಾವತಿಸಬೇಕಾಗುತ್ತದೆ.

KSRTC

ಅನುಕೂಲಗಳೇನು?
ಈ ವೈಯಕ್ತಿಕ ವಿಮಾ ಯೋಜನೆಯಿಂದ ಪಾಲಿಸಿದಾರರು ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ 50 ಲಕ್ಷ ರೂ.ಗಳ ಪರಿಹಾರದ ಹಣ ಕೂಡಲೇ ದೊರೆಯಲಿದೆ. ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದರೆ 50 ಲಕ್ಷ ರೂ.ಗಳ ವಿಮೆ ಪರಿಹಾರ ಸಿಗಲಿದೆ. ಕರ್ತವ್ಯ ಸಮಯ ಅಥವಾ ಕರ್ತವ್ಯದಲ್ಲಿ ಇಲ್ಲದ ಸಮಯದಲ್ಲೂ ಆಗುವ ಅಪಘಾತಗಳಿಗೂ ವಿಮೆ ಅನ್ವಯವಾಗುತ್ತದೆ. ಒಂದು ವೇಳೆ ಸಿಬ್ಬಂದಿ ಅಪಘಾತಕ್ಕೆ ಒಳಗಾಗಿ ತಾತ್ಕಾಲಿಕ ಅಂಗವೈಕಲ್ಯ ಉಂಟಾಗಿ, ತನ್ನ ಮೂಲ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ಅಸಮರ್ಥನಾದ ಪಕ್ಷದಲ್ಲಿ, ಆತನು ಚೇತರಿಸಿಕೊಳ್ಳುವವರೆಗೆ ಅವನಿಗೆ ವಿಮಾ ಮಾಡಲಾದ 50 ಲಕ್ಷ ರೂ.ಗಳಲ್ಲಿ ಶೇ.1 ರಷ್ಟು ಮೊತ್ತವನ್ನು ಪ್ರತಿ ವಾರ 5 ಸಾವಿರ ರೂ.ನಂತೆ ಅಥವಾ ಮಾಸಿಕ ವೇತನ ರೂಪದಲ್ಲಿ ಶೇ.25 ರಷ್ಟು ಹಣವನ್ನು ವಿಮಾ ಸಂಸ್ಥೆ ನೀಡುತ್ತದೆ.

KSRTC Bengaluru 2

ಇಲ್ಲಿಯವರೆಗೂ ನಿಗಮದ ಸಿಬ್ಬಂದಿಗಳಿಗೆ (KSRTC Employees) ಯಾವುದೇ ಅಪಘಾತ ವಿಮಾ ಯೋಜನೆಯ ಸೌಲಭ್ಯವಿರಲಿಲ್ಲ. ಈ ಎರಡು ವಿಮಾ ಯೋಜನೆಗಳಿಂದ ನಿಗಮವು ತನ್ನ ಸಿಬ್ಬಂದಿ 1 ಕೋಟಿ ರೂ. ಮೊತ್ತದ ಅಪಘಾತ ಪರಿಹಾರ ವಿಮಾ ಯೋಜನೆ ಜಾರಿಗೆ ತಂದಂತಾಗಿದೆ. ಸಾರಿಗೆ ಸಿಬ್ಬಂದಿ ಸಂಸ್ಥೆಗಾಗಿ ಹಗಲಿರುಳು ದುಡಿಯುತ್ತಾರೆ ಅವರ ಆಕಸ್ಮಿಕ ಅಗಲಿಕೆಯು ಅಥವಾ ಅಂಗವೈಕಲ್ಯತೆಯು ಅವರ ಕುಟುಂಬವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಬಾರದು ಎಂಬ ಕಾರಣದಿಂದ ಅವಲಂಬಿತರ ಹಿತ ಕಾಪಾಡುವ ಈ ಅಪಘಾತ ವಿಮಾ ಪ್ಯಾಕೇಜ್ ಯೋಜನೆಯ ಒಡಂಬಡಿಕೆಯನ್ನು ಮಾಡಿಕೊಳ್ಳಲಾಗಿದೆ.

ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್, ಡಾ.ನವೀನ್ ಭಟ್, ಉಷಾ ಚಂದ್ರಮೌಳಿ ಇನ್ನಿತರರು ಉಪಸ್ಥಿತರಿದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *