ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಬೈಕ್ ಸೀಜ್ ಮಾಡಿ, ಲಕ್ಷಾಂತರ ರೂ. ದಂಡ ಕಟ್ಟುವಂತೆ ಸಿಟಿ ಮಾರ್ಕೆಟ್ ಪೊಲೀಸರು (City Market Police) ಮಾಲೀಕನಿಗೆ ನೋಟಿಸ್ ನೀಡಿದ್ದಾರೆ.
KA05 ZX1344 ನಂಬರ್‌ನ ಸ್ಕೂಟರ್‌ನಿಂದ ಹೆಲ್ಮೆಟ್, ಸಿಗ್ನಲ್ ಜಂಪ್ ಹೀಗೆ ಹಲವು ರೀತಿಯಲ್ಲಿ ಟ್ರಾಫಿಕ್ ರೂಲ್ಸ್ ಉಲ್ಲಂಘನೆಯಾಗಿತ್ತು. ಕಳೆದ ವರ್ಷ 1,05,500 ರೂ. ದಂಡ ಹಾಕಲಾಗಿತ್ತು. ಈ ವರ್ಷ 1,61,000 ರೂ. ದಂಡ ಏರಿಕೆಯಾಗಿದೆ.ಇದನ್ನೂ ಓದಿ: ಚಳಿಗಾಲದಲ್ಲೂ ಸುಡುತ್ತಿದೆ ಬಿಸಿಲು – ರಾಜ್ಯದಲ್ಲಿ 30 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದ ಉಷ್ಣಾಂಶ
ಆದರೂ, ಪೊಲೀಸರ ಭಯವಿಲ್ಲದೇ ರಾಜಾರೋಷವಾಗಿ ವ್ಯಕ್ತಿ ಸ್ಕೂಟರ್ ಚಲಾಯಿಸುತ್ತಿದ್ದ. ಈ ಕುರಿತು ವ್ಯಕ್ತಿಯೊಬ್ಬರು ಸ್ಕೂಟರ್ ಪೋಟೋ ತೆಗೆದು, ಬೆಂಗಳೂರಿನಲ್ಲಿ ಸ್ಕೂಟರ್ ಬೆಲೆಗಿಂತ ದುಪ್ಪಟ್ಟು ಟ್ರಾಫಿಕ್ ಫೈನ್ ವಿಧಿಸಿಕೊಂಡಿದ್ದ ವ್ಯಕ್ತಿ ಎಂದು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಮಾಡಿದ್ದರು.
ಇದಕ್ಕೆ ಬೆಂಗಳೂರು ಸಂಚಾರಿ ಪೊಲೀಸರು ಯಾಕೆ ಇನ್ನೂ ಸವಾರನ ವಿರುದ್ಧ ಕ್ರಮಕೈಗೊಂಡಿಲ್ಲ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದರು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಸಂಚಾರಿ ಪೊಲೀಸರು ವೈರಲ್ ಆಗುತ್ತಿದ್ದ ಸ್ಕೂಟರ್ ಪತ್ತೆ ಹಚ್ಚಿ ಸೀಜ್ ಮಾಡಿದ್ದಾರೆ.
ಪದೇ ಪದೇ ಸಂಚಾರಿ ನಿಯಮ ಉಲ್ಲಂಘನೆ ಮಾಡಿ, ಸ್ಕೂಟರ್ ಚಲಾಯಿಸುತ್ತಿದ್ದ ವ್ಯಕ್ತಿಗೆ ದಂಡದ ಮೊತ್ತ ಕಟ್ಟುವಂತೆ ನೋಟಿಸ್ ನೀಡಿ, ಸ್ಕೂಟರ್ ಸೀಜ್ ಮಾಡಿದ್ದಾರೆ. ಸ್ಕೂಟರ್ ಮೇಲೆ 2023ರಿಂದ ಈವರೆಗೆ ಒಟ್ಟು 311 ಸಂಚಾರ ನಿಯಮ ಉಲ್ಲಂಘನೆ ಕೇಸ್ ದಾಖಲಾಗಿವೆ.ಇದನ್ನೂ ಓದಿ: ಹೆಚ್ಚಾಯ್ತು ಬೇಡಿಕೆ- ಸಿನಿಮಾ ಆಫರ್‌ಗೆ ಡೋಂಟ್ ಕೇರ್ ಎಂದ Bigg Boss ವಿನ್ನರ್ ಹನುಮಂತ