ಕೊಲ್ಕತ್ತಾ: ಮಹಿಳೆಯ ಹೊಟ್ಟೆಯಿಂದ ಸುಮಾರು 1.5 ಕೆ.ಜಿ. ತೂಕದ ಆಭರಣ ಹಾಗೂ 90 ನಾಣ್ಯಗಳನ್ನು ಹೊರ ತೆಗೆದಿರುವ ಅಪರೂಪದ ಘಟನೆ ಪಶ್ಚಿಮ ಬಂಗಾಳದ ಬಿರ್ಭಮ್ ಜಿಲ್ಲೆಯಲ್ಲಿ ನಡೆದಿದೆ.
ಮಾನಸಿಕ ಅಸ್ವಸ್ಥ ಮಹಿಳೆಯ ಹೊಟ್ಟೆಯಿಂದ 1.5 ಕೆ.ಜಿ. ತೂಕದ ಆಭರಣ ಹಾಗೂ 90 ನಾಣ್ಯಗಳನ್ನು ಸರ್ಕಾರಿ ಆಸ್ಪತ್ರೆ ವೈದ್ಯರು ಹೊರ ತೆಗೆದಿದ್ದಾರೆ. 5 ಹಾಗೂ 10 ರೂ.ಗಳ ನಾಣ್ಯಗಳು, ಸರ, ಕಿವಿಯ ಓಲೆಗಳು, ಬಳೆ, ಕಡಗ, ಬ್ರಾಸ್ಲೆಟ್ಸ್ ಹಾಗೂ ವಾಚ್ ಸೇರಿದಂತೆ ವಿವಿಧ ಆಭರಣಗಳನ್ನು 26 ವರ್ಷದ ಮಹಿಳೆಯ ಹೊಟ್ಟೆಯಿಂದ ಹೊರ ತೆಗೆಯಲಾಗಿದೆ ಎಂದು ರಾಂಪುರಾತ್‍ನ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ಸರ್ಜರಿ ವಿಭಾಗದ ಮುಖ್ಯಸ್ಥ ಸಿದ್ಧಾರ್ಥ್ ಬಿಸ್ವಾಸ್ ತಿಳಿಸಿದ್ದಾರೆ.
Advertisement
Advertisement
ಕೆಲವು ಬಂಗಾರದ ಆಭರಣಗಳೂ ಸೇರಿದಂತೆ ತಾಮ್ರ ಹಾಗೂ ಹಿತ್ತಾಳೆಯ ಆಭರಣಗಳು ಮಹಿಳೆಯ ಹೊಟ್ಟೆಯಲ್ಲಿದ್ದವು ಎಂದು ವೈದ್ಯರು ತಿಳಿಸಿದ್ದಾರೆ.
Advertisement
ಮನೆಯಲ್ಲಿನ ಆಭರಣಗಳು ಕಾಣೆಯಾಗುತ್ತಿದ್ದನ್ನು ಗಮನಿಸಿದ್ದೆ. ಇವಳೇ ತೆಗೆದುಕೊಂಡು ಹೋಗಿರಬಹುದು ಎಂದು ಪ್ರಶ್ನಿಸಿದಾಗ ಅಳಲು ಪ್ರಾರಂಭಿಸುತ್ತಿದ್ದಳು. ಹೀಗಾಗಿ ನಾವು ಹೆಚ್ಚು ಪ್ರಶ್ನೆ ಮಾಡುತ್ತಿರಲಿಲ್ಲ. ಮಗಳು ಮಾನಸಿಕವಾಗಿ ಅಸ್ವಸ್ಥೆಯಾಗಿದ್ದು, ಕೆಲವು ದಿನಗಳಿಂದ ಊಟವಾದ ನಂತರ ತಟ್ಟೆಯನ್ನು ಜೋರಾಗಿ ಎಸೆಯುತ್ತಿದ್ದಾಳೆ ಎಂದು ಮಾನಸಿಕ ಅಸ್ವಸ್ಥ ಯುವತಿಯ ತಾಯಿ ಅಳಲು ತೋಡಿಕೊಂಡಿದ್ದಾರೆ.
Advertisement
ನಾಣ್ಯಗಳನ್ನು ತನ್ನ ಸಹೋದರ ಅಂಗಡಿಯಿಂದ ತೆಗೆದುಕೊಳ್ಳುತ್ತಿದ್ದಳು. ನಾವು ಅವಳ ಮೇಲೆ ನಿಗಾ ವಹಿಸುತ್ತಿದ್ದರೂ, ಕಣ್ಣು ತಪ್ಪಿಸಿ ಇಷ್ಟೊಂದು ನಾಣ್ಯ ಹಾಗೂ ಆಭರಣಗಳನ್ನು ನುಂಗಿದ್ದಾಳೆ. ಖಾಯಿಲೆ ಕುರಿತು ವಿವಿಧ ಖಾಸಗಿ ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದ್ದೇವೆ. ವೈದ್ಯರು ನೀಡಿದ ಔಷಧಗಳನ್ನು ಕೊಡುತ್ತಿದ್ದೇವೆ. ಆದರೂ ಸಹ ಈ ವೆರೆಗೆ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಹೀಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.