ಅಹಮದಾಬಾದ್: ಮಾನಸಿಕ ಅಸ್ವಸ್ಥೆ ಮಹಿಳೆಯೊಬ್ಬಳ ಹೊಟ್ಟೆಯಿಂದ ಸುಮಾರು 1.5 ಕೆ.ಜಿಯಷ್ಟು ಕಬ್ಬಿಣದ ವಸ್ತುಗಳನ್ನು ಅಹಮದಾಬಾದ್‍ನ ನಾಗರಿಕ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದಿದ್ದಾರೆ.
40 ವರ್ಷದ ಸಂಗೀತಾ ಹೊಟ್ಟೆಯಲ್ಲಿ ಕಬ್ಬಿಣದ ವಸ್ತುಗಳು ಪತ್ತೆಯಾಗಿದೆ. ಮಹಿಳೆಯು ಮೂಲತಃ ಮಹಾರಾಷ್ಟ್ರದ ಶಿರಡಿ ನಿವಾಸಿಯಾಗಿದ್ದು, ಮಾನಸಿಕ ಅಸ್ವಸ್ಥೆಯಾಗಿದ್ದಾಳೆ. ಕಳೆದ ಅಕ್ಟೋಬರ್ 31 ರಂದು ಸರ್ಕಾರಿ ಮಾನಸಿಕ ಆರೋಗ್ಯ ಕೇಂದ್ರದಿಂದ ಸಂಗೀತಾಳನ್ನು ನಾಗರಿಕ ಆಸ್ಪತ್ರೆಗೆ ಚಿಕಿತ್ಸೆಗೆಂದು ವರ್ಗಾಯಿಸಲಾಗಿತ್ತು.
Advertisement
Advertisement
ಕೆಲವು ದಿನಗಳಿಂದ ಸಂಗೀತ ಹೊಟ್ಟೆ ನೋವಿನಿಂದ ನರಳುತ್ತಿದ್ದಳು. ಇದನ್ನು ಕಂಡ ವೈದ್ಯರು ಆಕೆಯನ್ನು ಸ್ಕ್ಯಾನಿಂಗ್ ಗೆ ಒಳಪಡಿಸಿದಾಗ, ಹೊಟ್ಟೆಯಲ್ಲಿ ಕಬ್ಬಿಣದ ಮೊಳೆಗಳು, ಪಿನ್‍ಗಳು, ಯು-ಪಿನ್‍ಗಳು, ಬಳೆ-ಸರ, ಮಂಗಳಸೂತ್ರ ಸೇರಿದಂತೆ ಹಲವು ಕಬ್ಬಿಣದ ವಸ್ತುಗಳು ಇರುವುದು ಪತ್ತೆಯಾಗಿತ್ತು. ಅದರಲ್ಲೂ ಒಂದು ಪಿನ್ ಸಂಗೀತಾಳ ಕರಳಿಗೆ ಚುಚ್ಚಿಕೊಂಡಿದ್ದ ಕಾರಣ ತಕ್ಷಣ ಆಕೆಗೆ ಶಸ್ತ್ರಚಿಕಿತ್ಸೆ ಮಾಡಿ, ಹೊಟ್ಟೆಯಲ್ಲಿದ್ದ ಸರಿಸುಮಾರು 1.5 ಕೆ.ಜಿ ತೂಕದ ಕಬ್ಬಿಣದ ವಸ್ತುಗಳನ್ನು ಹೊರ ತೆಗೆಯಲಾಯಿತು ಎಂದು ನಾಗರಿಕ ಆಸ್ಪತ್ರೆಯ ಶಸ್ತ್ರಚಿಕಿತ್ಸೆ ವಿಭಾಗದ ಹಿರಿಯ ವೈದ್ಯರಾದ ಡಾ. ನಿತಿನ್ ಪಾಮರ್ ತಿಳಿಸಿದರು.
Advertisement
ಮಾನಸಿಕ ಅಸ್ವಸ್ಥ ರೋಗಿಗಳಲ್ಲಿ ಅಕ್ಯುಫಾಗಿಯಾ ಎಂಬ ರೋಗ ಲಕ್ಷಣವಿರುವವರು ಕಬ್ಬಿಣದ ವಸ್ತುಗಳು ಹಾಗೂ ಚೂಪಾದ ಯಾವುದೇ ವಸ್ತುಗಳನ್ನು ತಿಂದುಬಿಡುತ್ತಾರೆ ಎಂದು ವೈದ್ಯರು ಮಾಹಿತಿ ನೀಡಿದರು.
Advertisement
ಸದ್ಯ ಸಂಗೀತಾ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಆಕೆ ಗುಣಮುಖಳಾದ ಮೇಲೆ ಅವಳ ಮನೆಯವರನ್ನು ಪತ್ತೆ ಮಾಡಿ ಆಕೆಯನ್ನು ಮನೆಗೆ ಕಳುಹಿಸುತ್ತೇವೆ ಎಂದು ವೈದ್ಯರು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews