ಹಾಸನ: ಮೊಬೈಲ್‌ನಲ್ಲೇ ಕ್ರೆಡಿಟ್ ಕಾರ್ಡ್ (Mobile Credit Card) ಮಾಡಿಕೊಡುವುದಾಗಿ ನಂಬಿಸಿ ಕಣ್ಣೆದುರೇ ಚಾಲಾಕಿಯೊಬ್ಬ ಮೊಬೈಲ್‌ನಿಂದ (Mobile) ಹಣ ವರ್ಗಾವಣೆ ಮಾಡಿಕೊಂಡು ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹಾಸನ ನಗರದ ಬಸಟ್ಟಿಕೊಪ್ಪಲು ನಿವಾಸಿ ಧರ್ಮಪ್ರಕಾಶ ಎಂಬುವವರು ಯೂನಿಯನ್ ಬ್ಯಾಂಕ್ (Union Bank) ಖಾತೆದಾರರಾಗಿದ್ದಾರೆ. ಬ್ಯಾಂಕ್ ಖಾತೆಗೆ (Bank Account) ತಮ್ಮ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿಸಿದ್ದರು. ಇದನ್ನೂ ಓದಿ: ಪುಸ್ತಕದಲ್ಲಿ ಹಿಂದೂ ವಿರೋಧಿ ಉಲ್ಲೇಖ – ಲೇಖಕರು ಸೇರಿ ನಾಲ್ವರ ವಿರುದ್ಧ ಕೇಸ್
Advertisement
Advertisement
ಕಳೆದ ಸೆಪ್ಟೆಂಬರ್ 9 ರಂದು ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ನಗರದ ಯೂನಿಯನ್ ಬ್ಯಾಂಕ್ (Union Bank) ಬಳಿ ಭೇಟಿಯಾಗಿ ಪರಿಚಯಸ್ಥನಂತೆ ಮಾತನಾಡಿದ್ದಾನೆ. ನಂತರ ತಾನು ಮೊಬೈಲ್‌ನಲ್ಲೇ ಕ್ರೆಡಿಟ್ ಕಾರ್ಡ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಡುತ್ತೇನೆ ಎಂದು ನಂಬಿಸಿ ಧರ್ಮಪ್ರಕಾಶ್ ಮೊಬೈಲ್ ಪಡೆದು ಡಿಜಿಟಲ್ ದಾಖಲೆ ಹಾಗೂ ಮಾಹಿತಿಯನ್ನ ಅಪ್ಲೋಡ್ ಮಾಡಿದ್ದಾನೆ. ಇದನ್ನೂ ಓದಿ: ರಾಹುಲ್ ಏಕಾಂಗಿ ಹೋರಾಟ ವ್ಯರ್ಥ, ಶಕೀಬ್ ಆಲ್‌ರೌಂಡರ್ ಆಟ – ಬಾಂಗ್ಲಾದೇಶಕ್ಕೆ 1 ವಿಕೆಟ್ ರೋಚಕ ಜಯ
Advertisement
Advertisement
ಸ್ವಲ್ಪ ಹೊತ್ತಿನ ನಂತರ ಮೊಬೈಲ್‌ನ್ನು ಧರ್ಮಪ್ರಕಾಶ್‌ಗೆ ವಾಪಸ್ ಕೊಟ್ಟಿದ್ದಾನೆ. ಆ ವೇಳೆ ಮೊಬೈಲ್ ಸ್ವಿಚ್ಡ್ಆಫ್ ಆಗಿದ್ದರಿಂದ ಮೊಬೈಲ್ ಅಂಗಡಿಗೆ ಹೋಗಿ ಪರಿಶೀಲಿಸಿದ್ದಾರೆ. ನಂತರವೇ ಮೊಬೈಲ್‌ನಲ್ಲಿದ್ದ ಸಿಮ್‌ನ್ನು ಅಪರಿಚಿತ ನಿಷ್ಕ್ರಿಯಗೊಳಿಸಿರುವುದು ಗೊತ್ತಾಗಿದೆ. ಕೂಡಲೇ ಬೇರೆ ಸಿಮ್ ತೆಗೆದುಕೊಂಡು ಮೊಬೈಲ್ ಪರಿಶೀಲಿಸಿದಾಗ ಬ್ಯಾಂಕ್ ಖಾತೆಯಿಂದ 1,13,800 ರೂ. ಗಳನ್ನು ಬೇರೆ ಖಾತೆಗೆ ವರ್ಗಾವಣೆ ಮಾಡಿಕೊಂಡಿರುವುದು ಗೊತ್ತಾಗಿದೆ.
ಅಪರಿಚಿತ ವಂಚಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಧರ್ಮಪ್ರಕಾಶ್ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.