ನವದೆಹಲಿ : ಎರಡನೇ ಬಾರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ಬೆಂಗಳೂರಿನ ಸಬ್ ಅರ್ಬನ್ ರೈಲು ಯೋಜನೆಗೆ ಒತ್ತು ನೀಡಲಾಗಿದೆ. ಯೋಜನೆಗೆ 18,600 ಕೋಟಿಗೆ ಅನುದಾನ ನೀಡುವ ಮೂಲಕ ಕಾಮಗಾರಿಗೆ ವೇಗ ನೀಡಲಾಗಿದೆ.
ಇದಲ್ಲದೇ ರಾಜ್ಯದಲ್ಲಿ ರೈಲ್ವೇ ಯೋಜನೆಗಳು ಮುಂದುವರಿಸಲು ಅನುದಾನ ನೀಡಿದ್ದು ಅಳ್ನಾವರ – ತಾವರಗಟ್ಟಿ (22 ಕಿಮೀ) ಹುಬ್ಬಳ್ಳಿ ಬೈಪಾಸ್ (20.6ಕಿಮೀ) ತುಮಕೂರು – ಗುಬ್ಬಿ (18 ಕಿಮೀ) ಡಬ್ಲಿಂಗ್ ಕಾಮಗಾರಿ ಯೋಜನೆಗಳನ್ನು ಮುಂದುವರಿಸಲಾಗಿದೆ. ಚೆನ್ನೈ-ಬೆಂಗಳೂರು ಕಾರಿಡಾರ್ ಎಕ್ಸ್ ಪ್ರೆಸ್ ವೇ ಕೂಡಾ ಪ್ರಾರಂಭಿಸಲಾಗಿದೆ.
Advertisement
Advertisement
ಇನ್ನು ರಾಜ್ಯದ ಹಲವು ಸಂಸ್ಥೆಗಳಿಗೆ ವಾರ್ಷಿಕ ಅನುದಾನ ಹಂಚಿಕೆ ಮಾಡಿದ್ದು ಈ ಪೈಕಿ ಬೆಂಗಳೂರಿನ ರಾಷ್ಟ್ರೀಯ ಯೂನಾನಿ ಔಷಧಿ ಸಂಸ್ಥೆಗೆ 23.50 ಕೋಟಿ, ಕಾಫಿ ಮಂಡಳಿಗೆ 2 ಕೋಟಿ, ನಿಮ್ಹಾನ್ಸ್ ಸಂಸ್ಥೆಗೆ 39.19 ಕೋಟಿ, ಮೈಸೂರಿನ ಸ್ಪೀಚ್ ಅಂಡ್ ಹಿಯರಿಂಗ್ ಸಂಸ್ಥೆಗೆ 55.66 ಕೋಟಿ, ಬೆಂಗಳೂರಿನ ಐಐಎಂಎಸ್‍ಗೆ 20 ಕೋಟಿ ನೀಡಲಾಗಿದೆ.
Advertisement
ಸೆಂಟರ್ ಫಾರ್ ನ್ಯಾನೋ ಅಂಡ್ ಸಾಫ್ಟ್ ಮ್ಯಾಟರ್ ಸೈನ್ಸ್ ಗೆ 28.27 ಕೋಟಿ, ಭಾರತೀಯ ವಿಜ್ಞಾನ ಅಕಾಡೆಮಿಗೆ 14.52 ಕೋಟಿ, ಭಾರತೀಯ ಆ್ಯಸ್ಟ್ರೋ ಫಿಸಿಕ್ಸ್ ಸಂಸ್ಥೆಗೆ 71.72 ಕೋಟಿ, ರಾಮನ್ ಸಂಶೋಧನಾ ಸಂಸ್ಥೆಗೆ 58.77 ಕೋಟಿ, ಸೆಂಟರ್ ಆಫ್ ಎಕ್ಸ್ ಲೆನ್ಸ್ ಫಾರ್ ಎನರ್ಜಿ ಸ್ಥಾಪನೆಗೆ 1 ಕೋಟಿ ಹಂಚಿಕೆಯಾಗಿದ್ದು, ಐಐಐಟಿ ನಿರ್ವಹಣೆಗೆ 180 ಕೋಟಿ, ಐಐಟಿ ನಿರ್ವಹಣೆಗೆ 585 ಕೋಟಿ ನೀಡಿದೆ.
Advertisement
100 ಸ್ಮಾರ್ಟ್ ಸಿಟಿ ಯೋಜನೆಗೆ 6,252 ಕೋಟಿ ನೀಡಲಾಗಿದೆ ಅಮೃತ ಯೋಜನೆಗೆ 5,841 ಕೋಟಿ ನೀಡಿದ್ದು ಕರ್ನಾಟಕ ಸಂಯೋಜಿತ ನಗರ ನೀರು ನಿರ್ವಹಣೆ ಹೂಡಿಕೆ ಯೋಜನೆಗೆ 100 ಕೋಟಿ ಅನುದಾನ ಕೇಂದ್ರ ಸರ್ಕಾರ ಈಬಾರಿಯ ಬಜೆಟ್ ನಲ್ಲಿ ನೀಡಿದೆ.