-ಸುಶಾಂತ್ ಕನಸಲ್ಲಿ ಬಂದಿದ್ದರಿಂದ ಸಂದರ್ಶನ ನೀಡ್ತಿದ್ದೇನೆ
ಮುಂಬೈ: ಜೂನ್ 14ರಂದು ಶವಾಗಾರದಲ್ಲಿ ನಾನು ಸುಶಾಂತ್ ಶವದ ಮುಂದೆ ಕ್ಷಮೆ ಕೇಳಿ ಕಣ್ಣೀರು ಹಾಕಿದ್ದೆ ಎಂದು ನಟಿ ರಿಯಾ ಚಕ್ರವರ್ತಿ ಹೇಳಿದ್ದಾರೆ.
ಸುಶಾಂತ್ ನನ್ನ ಕನಸಿನಲ್ಲಿ ಬಂದಿದ್ದರಿಂದ ಇಂದು ಮಾಧ್ಯಮದ ಮುಂದೆ ಬಂದಿದ್ದೇನೆ. ಕನಸಿನಲ್ಲಿ ಬಂದ ಸುಶಾಂತ್, ಸತ್ಯ ಏನು ಎಂಬುವುದನ್ನ ತಿಳಿಸು, ಧೈರ್ಯವಾಗಿರುವ ಎಂದು ಹೇಳಿದ್ದರಿಂದ ಸಂದರ್ಶನ ನೀಡುತ್ತಿದ್ದೇನೆ.
Advertisement
Advertisement
ಸುಶಾಂತ್ ನಿಧನದ ಬಳಿಕ ಮೊದಲ ಬಾರಿಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ರಿಯಾ, ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತು ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಉತ್ತರ ನೀಡಿದ್ದಾರೆ. ಜೂನ್ 14ರಂದು ನಾನು ಸೋದರನ ಜೊತೆ ಮನೆಯಲ್ಲಿದ್ದೆ. ಆ ವೇಳೆ ನನ್ನ ಫ್ರೆಂಡ್ ಕರೆ ಮಾಡಿ, ಕೆಲ ಸುದ್ದಿಗಳು ಹರಿದಾಡುತ್ತಿದ್ದು, ಅದನ್ನು ನಿಲ್ಲಿಸುವಂತೆ ಹೇಳಿದ್ರು. ಆದ್ರೆ ನನ್ನ ಫ್ರೆಂಡ್ ಗೆ ನಾನು ನನ್ನ ಸುಶಾಂತ್ ಮನೆಯಿಂದ ಹೊರ ಬಂದಿರುವ ವಿಚಾರ ತಿಳಿದಿರಲಿಲ್ಲ. ಸುಶಾಂತ್ ಅಂತಿಮ ದರ್ಶನ ಪಡೆಯಲು ಅವರ ಮನೆಗೆ ಹೋಗಿರಲಿಲ್ಲ. ಸಾವಿನ ವಿಷಯ ತಿಳಿದಾಗ ಶಾಕ್ ಆಗಿತ್ತು. ಏನು ಮಾಡಬೇಕು, ಎಲ್ಲಿಗೆ ಹೋಗಬೇಕು ಎಂದು ತಿಳಿಯದಾಗಿತ್ತು. ಸುಶಾಂತ್ ಸಾವು ನನ್ನನ್ನು ಸಂಪೂರ್ಣ ಸೋಲಿಸಿತ್ತು. ಸುಶಾಂತ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವವರ ಲಿಸ್ಟ್ ನಲ್ಲಿ ನನ್ನ ಹೆಸರು ಇರಲಿಲ್ಲ. ಆ ಲಿಸ್ಟ್ ನಲ್ಲಿ ಇಂಡಸ್ಟ್ರಿಯವರ ಹೆಸರುಗಳಿದ್ದವು. ಉದ್ದೇಶಪೂರ್ವಕವಾಗಿ ನನ್ನ ಹೆಸರು ಕೈ ಬಿಟ್ಟಿದ್ದರಿಂದ ಅಂತ್ಯಕ್ರಿಯೆಗೆ ತೆರಳಲಿಲ್ಲ ಎಂದರು. ಇದನ್ನೂ ಓದಿ: ಡ್ರಗ್ಸ್ ಸೇವನೆ, ಮಾರಾಟ ಆರೋಪ- ರಿಯಾ ಚಕ್ರವರ್ತಿ ವಕೀಲ ಸ್ಪಷ್ಟನೆ
Advertisement
Advertisement
ಸುಶಾಂತ್ ತನ್ನ ಪ್ರಾಣ ಕಳೆದುಕೊಂಡಿದ್ದ, ದುಃಖದಲ್ಲಿದ್ದ ನಾನು ಐ ಆ್ಯಮ್ ಸಾರಿ ಹೇಳಿ ಕಣ್ಣೀರಿಟ್ಟಿದ್ದೆ. ಆದ್ರೆ ಇಂದು ಆ ಪದವನ್ನ ಜೋಕ್ ಮಾಡಲಾಗ್ತಿದೆ. ನನ್ನ ಮಾತುಗಳಿಗೆ ಬೇರೆ ಬೇರೆ ಅರ್ಥ ಕಲಿಸಿದವರ ಮನೋಸ್ಥಿತಿಯ ಬಗ್ಗೆ ಬೇಸರವಿದೆ. ಸುಶಾಂತ್ ಸಾವನ್ನು ಕೆಲವರು ಮಜಾಕ್ ಮಾಡುತ್ತಿದ್ದಾರೆ. ಇದನ್ನೂ ಓದಿ: ರಿಯಾ ನನ್ನ ಮಗನಿಗೆ ಹಂತ ಹಂತವಾಗಿ ವಿಷ ನೀಡಿ ಕೊಂದ್ಳು: ಸುಶಾಂತ್ ತಂದೆ
ನನಗೆ ಶವಾಗಾರದ ಹೊರಗೆ ನಿಲ್ಲುವಂತೆ ಹೇಳಲಾಗಿತ್ತು. ನನ್ನ ಗೆಳೆಯ ಅಲ್ಲಿದ್ದ ಒಬ್ಬರಿಗೆ ಮೃತದೇಹ ನೋಡಲು ಅನುಮತಿ ನೀಡುವಂತೆ ಕೇಳಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ. ಈ ವೇಳೆ ನೀವು ಮೃತದೇಹ ನೋಡಬಹುದು ಅಂತಾ ಹೇಳಿದ್ರು. ಕೇವಲ 3 ರಿಂದ 4 ಸೆಕೆಂಡ್ ಸುಶಾಂತ್ ಮೃತದೇಹ ನೋಡಿದ್ದೇನೆ. ಆಗ ಸಾರಿ ಕೇಳಿ, ಸುಶಾಂತ್ ಕಾಲಿಗೆ ನಮಸ್ಕರಿಸಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಸುಶಾಂತ್ ಮನೆ ರಿಯಾ ತೊರೆಯುವ ಮುನ್ನ 8 ಹಾರ್ಡ್ ಡಿಸ್ಕ್ ಡೇಟಾ ಡಿಲೀ