ಬೆಂಗಳೂರು: ಸ್ಟಾರ್ ನಟರೊಬ್ಬರು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ನಿರ್ಮಾಪಕ ಇಂದ್ರಜಿತ್ ಲಂಕೇಶ್ ಅವರು ಇಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿಗೆ ದೂರು ನೀಡಿದ್ದಾರೆ.
ಮೈಸೂರಿನ ಸಂದೇಶ್ ನಾಗರಾಜ್ ಮಾಲೀಕತ್ವದ ಹೋಟೇಲಿನಲ್ಲಿ ಈ ಘಟನೆ ನಡೆದಿದ್ದು, ಪ್ರಕರಣದ ಸಂಪೂರ್ಣ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಸ್ಟಾರ್ ನಟ, ಹೋಟೇಲಿನಲ್ಲಿ ದಲಿತ ವೇಟರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಇಂದ್ರಜಿತ್ ಆರೋಪಿಸಿದ್ದಾರೆ.
Advertisement
Advertisement
ಈ ಬಗ್ಗೆ ಮಾತನಾಡಿರುವ ಇಂದ್ರಜಿತ್, ಸಂದೇಶ್ ನಾಗರಾಜ್ ಹೋಟೆಲಿನಲ್ಲಿ ನಟರೊಬ್ಬರು ದಲಿತ ಸಮುದಾಯದ ವೇಟರ್ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ವೇಟರ್ ಗೆ ಕಣ್ಣುಗಳಿಗೆ ಹಾನಿಯಾಗಿದೆ. ಸಿಸಿ ಟಿವಿ ದೃಶ್ಯ ಇದೆ. ಕೂಡಲೇ ಈ ಬಗ್ಗೆ ತನಿಖೆ ನಡೆಸಿ ಎಂದು ಇಂದ್ರಜಿತ್ ಆಗ್ರಹಿಸಿದ್ದಾರೆ. ಆದರೆ ನಟನ ಹೆಸರನ್ನು ಮಾತ್ರ ಇಂದ್ರಜಿತ್ ಮನವಿಯಲ್ಲಿ ಉಲ್ಲೇಖ ಮಾಡಿಲ್ಲ.
Advertisement
ನಾನು ಸಾಮಾನ್ಯರ ಪರ. ಪ್ರತಿಯೊಂದು ಕೇಸ್ ನಲ್ಲಿ ಸಾಮಾನ್ಯರಿಗೆ ನ್ಯಾಯ ಸಿಗ್ತಿಲ್ಲ. ಹೀಗಾಗಿ ಈ ಪ್ರಕರಣದಲ್ಲಾದರೂ ನ್ಯಾಯ ಸಿಗಲಿ ಎಂದು ಇಂದ್ರಜಿತ್ ಒತ್ತಾಯಿಸಿದ್ದಾರೆ.
Advertisement