ಈಗಾಗಲೇ ಬ್ರಿಟನ್ ಕೊರೊನಾ ವೈರಸ್ ಸಿಲಿಕಾನ್ ಸಿಟಿಯನ್ನ ಪ್ರವೇಶಿಸಿದೆ. ಸರ್ಕಾರ ಸಾರ್ವಜನಿಕವಾಗಿ ಹೊಸ ವರ್ಷಾಚರಣೆ ಮಾಡುವಂತಿಲ್ಲ ಎಂದು ಆದೇಶ ತಂದಿದೆ. ಇನ್ನು ಮನೆಯಲ್ಲಿ ಹೊಸ ವರ್ಷ ಆಚರಣೆ ಮಾಡೋಣ ಅಂದ್ರೆ ಕೇಕ್ ಎಲ್ಲಿಂದ ತರೋಣ ಅನ್ನೋದರ ಬಗ್ಗೆ ಕೆಲ ಗಂಟೆ ಚರ್ಚೆ ನಡೆಯುತ್ತೆ. ಅಲ್ಲಿ ಇಲ್ಲಿ ತರೋದಕ್ಕಿಂತ ಮನೆಯಲ್ಲಿಯೇ ಪ್ಲಮ್ ಕೇಕ್ ತಯಾರಿಸಿ ಹೊಸ ವರ್ಷವನ್ನ ಬರಮಾಡಿಕೊಳ್ಳಿ. ಪ್ಲಮ್ ಕೇಕ್ ಮಾಡುವ ವಿಧಾನ ಇಲ್ಲಿದೆ.
Advertisement
ಬೇಕಾಗುವ ಸಾಮಾಗ್ರಿಗಳು
* ಮೈದಾ – ಒಂದು ಕಪ್
* ಹಾಲು – ಅರ್ಧ ಕಪ್
* ಡ್ರೈ ಫ್ರೂಟ್ಸ್ – ಒಂದು ಕಪ್
(ಟ್ಯೂಟಿಫ್ರೂಟಿ, ಒಣ ದ್ರಾಕ್ಷಿ, ಕಪ್ಪು ಒಣದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ, ಚೆರ್ರಿ)
* ಆರೆಂಜ್ ಜ್ಯೂಸ್ – 1 ಲೋಟ
* ಸಕ್ಕರೆ – ಅರ್ಧ ಕಪ್
* ಬೇಕಿಂಗ್ ಸೋಡಾ – ಸ್ವಲ್ಪ
* ಬೇಕಿಂಗ್ ಪೌಡರ್ – ಅರ್ಧ ಸ್ಪೂನ್
* ತುಪ್ಪ – ಸ್ವಲ್ಪ
Advertisement
ಬೇಕಿದ್ದಲ್ಲಿ ಇವುಗಳನ್ನ ಬಳಸಿಕೊಳ್ಳಬಹುದು
* ಏಲಕ್ಕಿ ಪುಡಿ – ಚಿಟಿಕೆ
* ಚಕ್ಕೆ ಪುಡಿ – ಚಿಟಿಕೆ
Advertisement
Advertisement
ಮಾಡುವ ವಿಧಾನ
* ಮೊದಲು ಒಂದು ಅಗಲವಾದ ಬೌಲ್‍ಗೆ ಎಲ್ಲ ಡ್ರೈ ಫ್ರೂಟ್ಸ್ ಅನ್ನು ಹಾಕಿ ಅದಕ್ಕೆ ಆರೆಂಜ್ ಜ್ಯೂಸ್ ಸೇರಿಸಿ 1-2 ಗಂಟೆಗಳ ಕಾಲ ನೆನಸಿಡಿ
* ಈಗ ಒಂದು ಪ್ಯಾನ್‍ಗೆ ಸಕ್ಕರೆ ಹಾಕಿ ತೆಳ್ಳಗೆ ಗೋಲ್ಡ್ ಕಲರ್ ಬರುವತನಕ ಕೈಯಾಡಿಸಿ ಕ್ಯಾರಮಿಲ್ ಸಿರಪ್ ರೆಡಿ ಮಾಡಿಕೊಳ್ಳಿ.
* ಈಗ ಒಂದು ಮಿಕ್ಸಿಂಗ್ ಬೌಲ್‍ಗೆ ಹಾಲು, ಸ್ವಲ್ಪ ಸಕ್ಕರೆ ಸೇರಿಸಿ ಕಲಸಿ
* ಈ ಮಿಶ್ರಣಕ್ಕೆ ಮೈದಾ, ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್, ಏಲಕ್ಕಿ ಪುಡಿ ಸೇರಿಸಿ (ಚಕ್ಕೆ ಪುಡಿ ಇಷ್ಟವಾದರೆ ಸೇರಿಸಿಕೊಳ್ಳಬಹುದು) ಕಲಸಿ
* ಇದೇ ಮಿಶ್ರಣಕ್ಕೆ ನೆನೆಸಿಟ್ಟ ಡ್ರೈ ಫ್ರೂಟ್ಸ್‍ಗಳನ್ನು ಸೇರಿಸಿ.
* ಈ ಮಿಶ್ರಣಕ್ಕೆ ಸಿದ್ಧಪಡಿಸಿಕೊಂಡ ಕ್ಯಾರಮಿಲ್ ಸಿರಪ್, ತುಪ್ಪ ಸೇರಿಸಿ. ಕೇಕ್ ಮಿಶ್ರಣದ ಹದಕ್ಕೆ ಹಾಲು ಸೇರಿಸಿ ಕಲಸಿಕೊಂಡು 10 ನಿಮಿಷ ಬಿಡಿ.
* ಕುಕ್ಕರ್‍ಗೆ ಪ್ಯಾನ್ ಸ್ಟಾಂಡ್ ಇಟ್ಟು 10 ನಿಮಿಷ ಪ್ರೀ ಹೀಟ್ ಮಾಡಿಕೊಳ್ಳಿ
* ಈಗ ಒಂದು ಪ್ಯಾನ್‍ಗೆ ತುಪ್ಪ ಸವರಿ ಬಟರ್ ಪೇಪರ್ ಹಾಕಿ.
* ಪ್ಯಾನ್‍ಗೆ ಕೇಕ್ ಮಿಶ್ರಣವನ್ನು ಸೇರಿಸಿ ಮೇಲೆ ಡ್ರೈ ಪ್ರೂಟ್ಸ್‍ನಿಂದ ಅಲಂಕರಿಸಿ.
* ಈಗ ಪ್ರೀ ಹೀಟ್ ಕುಕ್ಕರ್ ಗೆ ಕೇಕ್ ಮಿಶ್ರಣದ ಪ್ಯಾನ್ ಇರಿಸಿ. 15-20 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ. ಕುಕ್ಕರ್ ಅನ್ನು ತಣ್ಣಗಾದ ಮೇಲೆ ತಟ್ಟೆಗೆ ಶಿಫ್ಟ್ ಮಾಡಿಕೊಳ್ಳಿ. ಬಟರ್ ಪೇಪರ್ ಅನ್ನು ತೆಗೆದು ಕಟ್ ಮಾಡಿ ಸರ್ವ್ ಮಾಡಿ ನ್ಯೂ ಇಯರ್ ಆಚರಿಸಿ