ಬೆಂಗಳೂರು: ಹೊಸ ತಳಿಯ ವೈರಸ್ ಪತ್ತೆ ಹಚ್ಚಲು ಮೂರು ದಿನ ಬೇಕಾಗುತ್ತದೆ ಎಂದು ಜಯದೇವ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಸಿಎನ್ ಮಂಜುನಾಥ್ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕೊರೊನಾದ ಹೊಸ ತಳಿಯ ವೈರಾಣು ಇದ್ದರೂ ತಕ್ಷಣಕ್ಕೆ ಗೊತ್ತಾಗುವುದಿಲ್ಲ. ಬ್ರಿಟನ್‍ನಿಂದ ಬಂದವರಿಗೆ ಕೊರೊನಾ ಪಾಸಿಟಿವ್ ಕಂಡೂಬಂದರೂ ಅದು ಹೊಸ ತಳಿಯ ವೈರಸ್ಸೋ ಅಥವಾ ಹಳೆ ವೈರಸ್ಸೋ ಎನ್ನುವುದನ್ನು ಪತ್ತೆ ಹಚ್ಚಲು ಮೂರು ದಿನ ಬೇಕಾಗುತ್ತದೆ ಎಂದು ತಿಳಿಸಿದರು.
Advertisement
Advertisement
ಆರ್‌ಟಿಪಿಸಿಆರ್ ಟೆಸ್ಟ್ ಮೂಲಕ ಸೋಂಕು ಇರುವುದು ಗೊತ್ತಾಗುತ್ತದೆ. ಆದರೆ ಇದು ಯಾವ ಸ್ವರೂಪದ ವೈರಸ್ ಎನ್ನುವದನ್ನು ಪತ್ತೆ ಹಚ್ಚಲು ಜಿನ್ ಸಿಕ್ವನ್ಸ್ ಮಾಡಬೇಕಾಗುತ್ತದೆ ಎಂದು ವಿವರಿಸಿದರು.
Advertisement
ಬ್ರಿಟನ್‍ನಲ್ಲಿ ರೂಪಾಂತರಗೊಂಡ ವೈರಸನ್ನು ವಿಯುಐ-202012 ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ. ಮೂಲ ವೈರಸ್‍ಗೆ ಹೋಲಿಸಿದರೆ ಇದರಲ್ಲಿ 23 ಬದಲಾವಣೆ ಇದ್ದು ಸಾಮಾನ್ಯ ಕೊರೋನಾ ವೈರಸ್‍ಗಿಂತ ಶೇಕಡಾ 70ರಷ್ಟು ವೇಗ ವೇಗವಾಗಿ ಮಾನವನ ದೇಹವನ್ನು ಪ್ರವೇಶಿಸುತ್ತದೆ.
Advertisement
ರೂಪಾಂತರಗೊಂಡ ವೈರಸ್‍ನಿಂದ ಲಂಡನ್‍ನಲ್ಲಿ ಈಗ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿದೆ. ರೋಗ ನಿರೋಧಕ ಶಕ್ತಿ ಕಮ್ಮಿ ಇರುವ ಸೋಂಕಿತರಲ್ಲಿ ಹೊಸ ರೂಪದ ವೈರಸ್ ಉತ್ಪತ್ತಿಯಾಗುತ್ತಿದೆ. ದಕ್ಷಿಣ, ಇಂಗ್ಲೆಂಡ್‍ನಲ್ಲಿ ಶೇ. 70ರಷ್ಟು ಮಂದಿಗೆ ಸೋಂಕು ಬಂದಿದೆ.