– ದಾರಿ ಮಧ್ಯೆ ಪ್ರಜ್ಞೆ ತಪ್ಪಿಸಿ ರೇಪ್ ಮಾಡ್ದ
ಗಾಂಧಿನಗರ: ಹೊಸದಾಗಿ ಕಾರು ಖರೀದಿಸಿದ ವ್ಯಕ್ತಿಯೊಬ್ಬ, ಕಾರಿಗೆ ಪೂಜೆ ಮಾಡಿಸಿಕೊಂಡು ಬರುವ ನೆಪದಲ್ಲಿ ಹೆಂಡತಿಯ ಅಪ್ರಾಪ್ತ ವಯಸ್ಸಿನ ಸೋದರ ಸಂಬಂಧಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿರುವ ಘಟನೆ ಗುಜರಾತ್ನ ರಾಜ್ಕೋಟ್ನಲ್ಲಿ ನಡೆದಿದೆ.
Advertisement
ಆರೋಪಿ ರಾಜ್ಕೋಟ್ನ ವಿರ್ಪುರದಲ್ಲಿರುವ ತನ್ನ ಪತ್ನಿಯ ಮಾವನ ಮನೆಗೆ ಹೋಗಿದ್ದನು. ಆಗ ಬಾಲಕಿಯ ಪೋಷಕರ ಎದುರು, ನನ್ನ ಪತ್ನಿಗೆ ಆಶ್ಚರ್ಯವಾಗುತ್ತದೆ ಯಾಕೆಂದರೆ ನಾನು ಅವಳಿಗೆ ತಿಳಿಯದಂತೆ ಹೊಸ ಕಾರು ಖರೀದಿ ಮಾಡಿದ್ದೇನೆ. ಕಾರಿನ ಪೂಜೆ ಮಾಡಲು ನಿಮ್ಮ ಮಗಳನ್ನು ನನ್ನೊಂದಿಗೆ ಕಳುಹಿಸಿಕೊಡಿ ಎಂದು ಕರೆದುಕೊಂಡು ಹೋಗಿದ್ದಾನೆ. ದಾರಿ ಮಧ್ಯದಲ್ಲಿ ಬಾಲಕಿಯ ಪ್ರಜ್ಞೆತಪ್ಪಿಸಿದ್ದಾನೆ. ಈ ವೇಳೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ರಾಜ್ಕೋಟ್ನ ಗ್ರಾಮೀಣ ಪ್ರದೇಶದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸಾಗರ್ ಬಾಗ್ಮಾರ್ ಹೇಳಿದ್ದಾರೆ.
Advertisement
Advertisement
ಕೆಲವು ದಿನಗಳ ನಂತರ ಬಾಲಕಿಯ ಆರೋಗ್ಯ ಹಾಳಾಗಿದೆ. ಈ ವೇಳೆ ಬಾಲಕಿಯ ಪೋಷಕರು ಆಕೆಯನ್ನು ವಿರ್ಪುರ್ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಗ ಆಸ್ಪತ್ರೆಯ ವೈದ್ಯರು ಬಾಲಕಿಯ ಮೇಲೆ ಅತ್ಯಾಚಾರವಾಗಿದೆ ಎಂದು ಪೋಷಕರಿಗೆ ತಿಳಿಸಿದ್ದಾರೆ. ಕೂಡಲೇ ಪೋಷಕರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Advertisement
ಆರೋಪಿಯನ್ನು ಬಂಧಿಸಿದ್ದೇವೆ. ನ್ಯಾಯಾಲಯ ಆರೋಪಿಯನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಈ ಪ್ರಕರಣದ ಕುರಿತಾಗಿ ನಾವು ವಿಚಾರಣೆ ಆರಂಭಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಕೋಪಗೊಂಡ ಸ್ಥಳಿಯರು ಪೊಲೀಸ್ ಠಾಣೆ ಸುತ್ತಲೂ ಜಮಾಯಿಸಿದ್ದರು. ಆರೋಪಿಯನ್ನು ನಮ್ಮ ಕೈಗೆ ಕೋಡಿ ನಾವು ಶಿಕ್ಷೆ ನೀಡುತ್ತೇವೆ ಎಂದು ಹೇಳುತ್ತಿದ್ದರು. ಆತನ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿ ಗ್ರಾಮಸ್ಥರನ್ನು ಕಳಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.