ಹೈಕೋರ್ಟ್ ನೋಟಿಸ್ ಪಡೆಯದ ರಮೇಶ್ ಜಾರಕಿಹೊಳಿ – ವಿಚಾರಣೆ ಬಳಿಕ ನೋಟಿಸ್ ರಿಸೀವ್

Public TV
1 Min Read
ramesh jarkiholi 9

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಯುವತಿ ಎಸ್‍ಐಟಿ ಬದ್ಧತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನ್ಯಾಯಮೂರ್ತಿ ಶ್ರೀ ಶ್ರೀನಿವಾಸ್ ಹರೀಶ್ ಕುಮಾರ್ ರವರ ಏಕ ಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು.

ಹೈಕೋರ್ಟ್ ನಿಂದ ನೋಟಿಸ್ ಪಡೆದು ಎಸ್‍ಐಟಿ ಪರ ನ್ಯಾಯವಾದಿ ಪ್ರಸನ್ನಕುಮಾರ್ ಹಾಜರಾಗಿದ್ದರು. ಆದ್ರೆ ಹೈಕೋರ್ಟ್ ನೋಟಿಸ್ ಈವರೆಗೂ ರಮೇಶ್ ಜಾರಕಿಹೊಳಿ ಪಡೆದಿಲ್ಲ. ಹೈಕೋರ್ಟ್ ಜಾರಿ ಮಾಡಿದ ಹ್ಯಾಂಡ್ ಸಮನ್ಸ್ ಪಡೆಯಲು ರಮೇಶ್ ಜಾರಕಿಹೊಳಿ ನಿರಾಕರಿಸಿದ ವಿಷಯದೆಡೆ ನ್ಯಾಯಾಲಯದ ಗಮನ ಸೆಳೆದ ಸಂತ್ರಸ್ತೆ ಪರ ವಕೀಲ ಸಂಕೇತ್ ಏಣಗಿ, ರಮೇಶ್ ಜಾರಕಿಹೊಳಿ ಅವರ ಪರವಾಗಿ ಕಾಲಾವಕಾಶ ಕೇಳಿದ ಎಸ್‍ಐಟಿ ಪರ ನ್ಯಾಯವಾದಿ ಪ್ರಸನ್ನಕುಮಾರ್ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ramesh jarkiholi

ಎಸ್‍ಐಟಿ ಪರ ನ್ಯಾಯವಾದಿಗಳು ರಮೇಶ್ ಜಾರಕಿಹೊಳಿ ಪರವಲ್ಲ ಎಂದು ಪ್ರಸನ್ನಕುಮಾರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಂತ್ರಸ್ತೆ ಪರ ವಕೀಲ ಸಂಕೇತ್ ಏಣಗಿ, ಜನಪ್ರತಿನಿಧಿಗಳ ಪ್ರಕರಣಗಳ ವಿಚಾರಣೆಗೆ ಸಂಬಂಧಿಸಿದಂತೆ ರಚಿತವಾದ ವಿಶೇಷ ಪೀಠಕ್ಕೆ ಈ ಪ್ರಕರಣವನ್ನು ವರ್ಗಾವಣೆ ಮಾಡಲು ಮನವಿ ಮಾಡಿದ್ರು.

ramesh jarkiholi

ಸಂತ್ರಸ್ತೆ ಪರ ವಕೀಲ ಸಂಕೇತ ಏಣಗಿ ಮನವಿ ಪುರಸ್ಕರಿಸಿ, ಪ್ರಕರಣವನ್ನು ವಿಶೇಷ ಪೀಠಕ್ಕೆ ವರ್ಗಾವಣೆ ಮಾಡಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ರವರ ಏಕ ಸದಸ್ಯ ಪೀಠ, ಪ್ರಕರಣ ವಿಚಾರಣೆಯನ್ನು ಇದೇ ತಿಂಗಳು 23ನೇ ದಿನಾಂಕದಂದು ನಿಗದಿ ಮಾಡಿ ವಿಚಾರಣೆ ಮುಂದೂಡಿದರು.

HIGHCOURT

ಏಕಸದಸ್ಯ ಪೀಠದಲ್ಲಿ ವಿಚಾರಣೆ ಮುಗಿದ ನಂತರ ಧಿಡೀರ್ ಆಗಿ ರಮೇಶ್ ಜಾರಕಿಹೊಳಿ ಕುಟುಂಬ ನೋಟಿಸ್ ಸ್ವೀಕರಿಸಿದೆ. ಜೂನ್ 23ಕ್ಕೆ ಸಂತ್ರಸ್ತೆಯ ಮದ್ಯಂತರ ಅರ್ಜಿ ವಿಚಾರಣೆ ಹೈಕೋರ್ಟ್ ಮುಖ್ಯಪೀಠದಲ್ಲಿ ನಡೆಯಲಿದೆ. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಕೇಸ್‍ಗೆ ಸಿಕ್ಕಿಲ್ಲ ಮುಕ್ತಿ

Share This Article
Leave a Comment

Leave a Reply

Your email address will not be published. Required fields are marked *