ಬೆಂಗಳೂರು: ಹೆಲ್ಮೆಟ್ ಹಾಕಿದ್ರೆ ನಟ ಸಂಚಾರಿ ವಿಜಯ್ ಪ್ರಾಣಕ್ಕೆ ಕಂಟಕವಾಗುತ್ತಿರಲಿಲ್ಲ ಎಂದು ಅಪೋಲೋ ಆಸ್ಪತ್ರೆಯ ವೈದ್ಯ ಡಾ. ಅರುಣ್ ನಾಯ್ಕ್ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶನಿವಾರ ಬೈಕ್ ಅಪಘಾತದಲ್ಲಿ ತೀವ್ರವಾಗಿ ತಲೆಗೆ ಪೆಟ್ಟು ಬಿದ್ದು ಆಸ್ಪತ್ರೆಗೆ ಸೇರಿದ್ದ ನಟ ಸಂಚಾರಿ ವಿಜಯ್, ಬೈಕ್ ಸವಾರಿ ಮಾಡುವಾಗ ಹೆಲ್ಮೆಟ್ ಹಾಕಿದ್ರೆ ಬ್ರೇನ್ ಫೇಲೂರ್ ಆಗ್ತರಲಿಲ್ಲ ಎಂದರು. ಇದನ್ನೂ ಓದಿ: ಜನ್ರಿಗೆ ಒಳ್ಳೆದು ಮಾಡೋಕೆ ಕಾರ್ ಮಾರಲು ತಯಾರಾಗಿದ್ರು ವಿಜಯ್: ಜಗ್ಗೇಶ್
ಅತಿ ವೇಗವಾಗಿ ಹೋಗಿದ್ದು, ಹೆಲ್ಮೆಟ್ ಹಾಕದೇ ಬೈಕ್ ಚಾಲನೆ ಮಾಡಿರುವುದೇ ಅವರ ಪ್ರಾಣಕ್ಕೆ ಕಂಟಕವಾಗಿದೆ. ಅಪಘಾತವಾದಾಗ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿದೆ. ಘಟನೆ ನಡೆದ 20 ನಿಮಿಷಗಳಲ್ಲಿ ಆಸ್ಪತ್ರೆಗೆ ಸೇರಿಸಲಾಗಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ’10 ಸಾವಿರಕ್ಕೆ ನಾನ್ಯಾಕ್ ಬರ್ಲಿ ಹೋಗ್ರಿರಿ’ – ಆಯೋಜಕರ ಹೃದಯ ಕದ್ದ ಸಂಚಾರಿ ವಿಜಯ್
ಆಸ್ಪತ್ರೆಗೆ ಸೇರಿಸೋ ಸಮಯಕ್ಕಾಗಾಲೇ ಸಂಚಾರಿ ವಿಜಯ್ ಅವರು ಕೋಮಾ ಸ್ಟೇಜ್ ಗೆ ಹೋಗಿದ್ದಾರೆ. ಕೂಡಲೇ ಆಪರೇಷನ್ ಮಾಡಲಾಗಿದೆ. ಅದರೂ ಅವರ ಬ್ರೈನ್ ವರ್ಕ್ ಆಗಿರಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: ವಿಜಯ ಕುಮಾರ್ ಮುಂದೆ ‘ಸಂಚಾರಿ’ ಬಂದಿದ್ದು ಹೇಗೆ?
ಇತ್ತ ವಿಜಯ್ ಸಹೋದರ ಸಿದ್ದೇಶ್ ಮಾತನಾಡಿ, ಅಂಗಾಂಗಳನ್ನು ದಾನ ಮಾಡುವುದಾಗಿ ಘೋಷಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ, ನಟ ಮಾತ್ರವಲ್ಲದೇ ವಿಜಯ್ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದ. ಎಲ್ಲರ ಜೊತೆಯಾಗಿ ಇರುತ್ತಿದ್ದನು. ಕೊರೊನಾ ಕಷ್ಟ ಕಾಲ, ನೆರೆ ಬಂದಾಗ ಸಾಕಷ್ಟು ಕೆಲಸವನ್ನು ಮಾಡಿದ್ದಾನೆ. ಸಮಾಜಕ್ಕಾಗಿ ಕೆಲಸ ಮಾಡುತ್ತಿದ್ದ. ವಿಜಯ್ ಅಂಗಾಂಗಳನ್ನು ದಾನ ಮಾಡಬೇಕು ಎಂದು ನಾವು ನಿರ್ಧರಿಸಿದ್ದೇವೆ. ಈ ಮಾತನ್ನು ನಾನು ಹೇಳಬಾರದು. ಅವರ ಆತ್ಮಕ್ಕೆ ಸುಖ ಶಾಂತಿ ಸಿಗಲಿ ಎಂದು ಈ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದಿದ್ದಾರೆ.