– ಹುಟ್ಟುತ್ತಲೇ ಅಮ್ಮನನ್ನ ಕಳೆದುಕೊಂಡ ಕಂದಮ್ಮ
ಚಿಕ್ಕಬಳ್ಳಾಪುರ: ಹೆರಿಗೆ ಶಸ್ತ್ರಚಿಕಿತ್ಸೆ ವೇಳೆ ವೈದ್ಯರ ನಿರ್ಲಕ್ಷ್ಯದಿಂದ ತೀವ್ರ ರಕ್ತಸ್ರಾವವಾಗಿ ಮಹಿಳೆ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ.
ಮಮತಾ (26) ಮೃತ ದುರ್ದೈವಿ. ಈಕೆ ದೊಡ್ಡಬಳ್ಳಾಪುರ ನಗರದ ರಾಜೀವ್ ಗಾಂಧಿ ಬಡಾವಣೆಯ ನಿವಾಸಿ. ಸಹಜ ಹೆರಿಗೆಯಾಗಲ್ಲ ಅಂತ ವೈದ್ಯರು ಸಿಜೇರಿಯನ್ ಮಾಡಿದ್ದರು. ಈ ವೇಳೆ ಆಧಿಕ ರಕ್ತಸ್ರಾವದಿಂದ ಬಾಣಂತಿಯ ಆರೋಗ್ಯದಲ್ಲಿ ಏರುಪೇರಾದಾಗ ಬೆಂಗಳೂರಿನ ವಾಣಿ ವಿಲಾಸ್ ಆಸ್ಪತ್ರೆಗೆ ಕಳಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಇದೀಗ ಬಾಣಂತಿ ಸಾವನ್ನಪ್ಪಿದ್ದಾರೆ.
Advertisement
Advertisement
ಮಮತಾ ತುಮಕೂರಿನ ಹಿರೇಹಳ್ಳಿಯ ಸಂತೋಷ್ ಜೊತೆ ಒಂದೂವರೆ ವರ್ಷಗಳ ಹಿಂದೆ ವಿವಾಹವಾಗಿದ್ದರು. ಗರ್ಭಿಣಿಯಾಗಿದ್ದ ಮಮತಾ ತವರು ಮನೆ ದೊಡ್ಡಬಳ್ಳಾಪುರಕ್ಕೆ ಬಂದಿದ್ದರು. ದೊಡ್ಡಬಳ್ಳಾಪುರದ ಆಸ್ಪತ್ರೆಯಲ್ಲಿ ತಾಯಿ-ಮಗುವಿಗೆ ವೈದಕೀಯ ತಪಾಸಣೆ ಮಾಡಿಸುತ್ತಿದ್ದರು. ಏಪ್ರಿಲ್ 7ರಂದು ಹೆರಿಗೆ ಮಾಡುವುದಾಗಿ ವೈದ್ಯರು ಹೇಳಿದ ಹಿನ್ನೆಲೆ ಮಮತಾಳನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
Advertisement
Advertisement
ಮನೆಯಿಂದ ಬರುವಾಗ ಆರೋಗ್ಯವಾಗಿಯೇ ಇದ್ದ ಮಮತಾ, ಆಸ್ಪತ್ರೆಗೆ ಬಂದ ಬಳಿಕ ಹೆರಿಗೆ ನೋವು ಬರದಿದ್ದಾಗ ಇಂಜೆಕ್ಷನ್ ನೀಡಿದ್ದಾರೆ. ನಂತರ ಸಹಜ ಹೆರಿಗೆ ಆಗದಿದ್ದಾಗ ಸಿಜೇರಿಯನ್ ಮಾಡಿದ್ದು, ಗಂಡು ಮಗುವಾಗಿದೆ. ಆದರೆ ಅಧಿಕ ರಕ್ತಸ್ರಾವವಾದ ಹಿನ್ನೆಲೆ ಬಾಣಂತಿಯನ್ನ ಬೆಂಗಳೂರಿನ ವಾಣಿ ವಿಲಾಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ.
ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ಗರ್ಭಕೋಶವನ್ನ ತೆಗೆದಿದ್ದಾರೆ. ಈ ಸಮಯದಲ್ಲಿ ಅಧಿಕ ರಕ್ತಸ್ರಾವದಿಂದ ಮಮತಾ ಸಾವನ್ನಪ್ಪಿದ್ದಾರೆ. ಮಮತಾಳ ಸಾವಿನಿಂದ ಕುಟುಂಬಸ್ಥರು ಆಕ್ರೋಶಭರಿತರಾಗಿ ಮೃತದೇಹದೊಂದಿಗೆ ದೊಡ್ಡಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆ ಎದುರು ಪ್ರತಿಭಟಿಸಿದ್ದಾರೆ.
ಮಮತಾಳ ಸಾವಿಗೆ ವೈದ್ಯರ ನಿರ್ಲಕ್ಷ್ಯತೆಯೇ ಕಾರಣ, ಹೆರಿಗೆ ಮಾಡಿಸಲು ವೈದ್ಯರು ಆಶಾ ಕಾರ್ಯಕರ್ತೆಯ ಮೂಲಕ 6 ಸಾವಿರ ಹಣ ತೆಗೆದು ಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ರೋಗಿಯನ್ನ ಕರೆದುಕೊಂಡು ಹೋಗಲು ಸಹ ಸಿಬ್ಬಂದಿ ಇಲ್ಲವೆಂದು ಗಲಾಟೆ ನಡೆಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ದೊಡ್ಡಬಳ್ಳಾಪುರ ನಗರ ಪೆÇಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.