ಜೈಪುರ್: ಕುಟುಂಬದಲ್ಲಿ 35 ವರ್ಷಗಳ ಬಳಿಕ ಹೆಣ್ಣುಮಗು ಜನಿಸಿದ ಕಾರಣ ಸಂತಸಗೊಂಡ ಕುಟುಂಬಸ್ಥರು ಮಗುವನ್ನು ಹೆಲಿಕಾಪ್ಟರ್‌ನಲ್ಲಿ ಗ್ರಾಮಕ್ಕೆ ಕರೆದುಕೊಂಡು ಬಂದಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
Advertisement
ಹೆಣ್ಣು ಮಗು ಜನಿಸಿತು ಅಂತ ಕುಟುಂಬದವರು ಖುಷಿ ಪಟ್ಟಿದ್ದಾರೆ. ಹೆಣ್ಣು ಮಗುವಿನ ಸ್ವಾಗತಕ್ಕೆ ವಿವಿಧ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಹಲವು ವರ್ಷಗಳ ನಂತರ ಹೆಣ್ಣು ಮಗು ಜನನವಾಯಿತು ಆ ಮಗುವಿನ ಸ್ವಾಗತಕ್ಕೆ ಹೆಲಿಕಾಪ್ಟರ್ ಬಾಡಿಗೆ ಪಡೆದು ತರಿಸಿದ್ದಾರೆ. ರಾಜಸ್ಥಾನದ ನಾಗಪುರ ಜಿಲ್ಲೆಯ ಚಂದವತ ಗ್ರಾಮದ ಹನುಮಾತ್ ಪ್ರಜಾಪತ್ ಅವರ ರೈತ ಕುಟುಂಬದಲ್ಲಿ 35 ವರ್ಷಗಳಿಂದ ಹೆಣ್ಣುಮಗು ಜನಿಸಿರಲಿಲ್ಲ. 35 ವರ್ಷಗಳ ನಂತರ ಜನಿಸಿದ ಹೆಣ್ಣು ಮಗುವಿನಿಂದ ಅವರ ಮನೆಯಲ್ಲಿ ಸಂತಸ ದುಪ್ಪಟ್ಟಾಗಿದೆ.
Advertisement
Advertisement
ಮಗುವಿನ ಸ್ವಾಗತ ಸಾಧಾರಣವಾಗಿ ಇರಬಾರದು ಎಂದು ನಿರ್ಧರಿಸಿದ ಕುಟುಂಬದ ಯಜಮಾನ ಮೊಮ್ಮಗಳನ್ನು ಅದ್ದೂರಿಯಾಗಿ ಸ್ವಾಗತಿಸಬೇಕು ಎಂದು ನಿರ್ಧರಿಸಿದ್ದಾರೆ. ಹಾಗಾಗಿ ಮಗುವಿನ ಅಜ್ಜ ಬೆಳೆಯನ್ನು 5 ಲಕ್ಷಕ್ಕೆ ಮಾರಿ ತನ್ನ ಮೊಮ್ಮಗಳಿಗಾಗಿ ಹೆಲಿಕಾಪ್ಟರ್ ಬಾಡಿಗೆಗೆ ಪಡೆದು ತರಿಸಿದ್ದಾರೆ. ಅದರಲ್ಲಿಯೇ ಮೊಮ್ಮಗಳನ್ನು ಸ್ವಾಗತಿಸಿದ್ದಾರೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
Advertisement
ಮಗುವಿಗೆ ನಾವು ಸಿದ್ದಾಧತ್ರಿ ಎಂದು ಹೆಸರು ಇಟ್ಟಿದ್ದೇವೆ. ನಮ್ಮಲ್ಲಿ ಹಲವರು ಹೆಣ್ಣು ಮಗು ಎಂದು ಮೂಗು ಮುರಿದಿದ್ದಾರೆ. ಆದರೆ ನಮ್ಮ ಮನೆಯಲ್ಲಿ ಹೆಣ್ಣು ಮಗು ಜನಿಸಿದರೆ ಅದ್ದೂರಿಯಾಗಿ ಸಂಭ್ರಮಿಸುಬೇಕು ಎಂದು ನಿರ್ಧರಿಸಿದ್ದೇವು. ನನ್ನ ಈ ನಡೆಯಿಂದ ಕೆಲವರಾದರು ಪ್ರೇರಣೆ ಪಡೆದರೆ ತುಂಬಾ ಸಂತೋಷವಾಗುತ್ತದೆ ಎಂದು ಹನುಮಾನ್ ಪ್ರಜಾತ್ ಹೇಳಿದ್ದಾರೆ.