– ಇಂತಹ ಮಾತುಗಳಿಗೆ ನಾನು ಐ ಡೋಂಟ್ ಕೇರ್ ಅಂದ್ರು ಸಂಸದೆ
ಬೆಂಗಳೂರು: ಮಾಜಿ ಸಿಎಂ ಆದವರು ಹೇಗೆ ಮಾತಾಡಬೇಕು ಅಂತ ಗೊತ್ತಿಲ್ಲವಾ. ಸಂಸದರು ಅನ್ನೋದು ಬಿಡು ಒಂದು ಹೆಣ್ಣಿನ ಬಗ್ಗೆ ಹೇಗೆ ಮಾತಾಡಬೇಕು ಅಂತ ಮಾಜಿ ಸಿಎಂ ಅರ್ಥ ಮಾಡಿಕೊಳ್ಳಬೇಕು ಎಂದು ಸಂಸದೆ ಸುಮಲತಾ ಅಂಬರೀಶ್ ಅವರು ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.
Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಶುಗರ್ ಅನ್ನು ಯಾವುದಾದರು ಒಂದು ಮಾಡೆಲ್ ನಲ್ಲಿ ಪ್ರಾರಂಭ ಮಾಡಿ ಅಂತ ಸರ್ಕಾರಕ್ಕೆ ಮನವಿ ಮಾಡಿದ್ದೆ. ನನ್ನ ಸಲಹೆ ಪಡೆದು ಸರ್ಕಾರ ನಿರ್ಧಾರ ಮಾಡಿದೆ ಅನ್ನೋ ಅಷ್ಟು ಪವರ್ ನನಗೆ ಇಲ್ಲ. ಯಾಕೆ ಕುಮಾರಸ್ವಾಮಿ ಹೀಗೆ ಮಾತಾಡಿದ್ರು ಅಂತ ಗೊತ್ತಿಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಯಾಕೆ ಮೈ ಶುಗರ್ ಪ್ರಾರಂಭ ಮಾಡಿಲ್ಲ. ಸಿಎಂ ಆಗಿದ್ದಾಗ ಅವರು ಏನು ಮಾಡಿದ್ರು ಎಂದು ಪ್ರಶ್ನಿಸಿದರು.
Advertisement
Advertisement
400 ಕೋಟಿ ಅಕ್ರಮ ಆಗಿದೆ ಅಂತ ಹೇಳಿದ್ರು. ರೈತರ ಪರವಾಗಿ ಅ ಕಾರ್ಖಾನೆ ಪ್ರಾರಂಭ ಆಗಬೇಕು. ಯಾವುದಾದರು ಒಂದು ಮಾದರಿಯಲ್ಲಿ ಕಾರ್ಖಾನೆ ಓಪನ್ ಮಾಡಲಿ. ಈ ಬಗ್ಗೆ ಸರ್ಕಾರ ತೀರ್ಮಾನ ಮಾಡಲಿ. ಎಲ್ಲರ ಜೊತೆ ಮಾತಾಡಿ ನಾನು ಕಾರ್ಖಾನೆ ಪ್ರಾರಂಭ ಮಾಡಿ ಅಂತ ಮನವಿ ಮಾಡಿದ್ದೇನೆ. ನಾನು ಖಾಸಗೀಕರಣ ಮಾಡಿ ಅಂತ ಹೇಳಿಲ್ಲ. ಅಂತ ಮೂರ್ಖ ಕೆಲಸ ನಾನು ಮಾಡೊಲ್ಲ ಎಂದು ವಾಗ್ದಾಳಿ ನಡೆಸಿದರು.
Advertisement
ಮಹಿಳೆ ಬಗ್ಗೆ ಪರ್ಸನಲ್ ಟೀಕೆ ಎಷ್ಟು ಸರಿ..? ಮಾಜಿ ಸಿಎಂ ಆದವರು ಹೀಗೆ ಮಾತಾಡೋದು ಸರಿನಾ..? ಇಂತಹ ಮಾತುಗಳಿಗೆ ನಾನು ಐ ಡೋಂಟ್ ಕೇರ್. ಚುನಾವಣೆ ಸಮಯದಲ್ಲಿ ನಾನು ಇಂತಹ ಪದ ಬಳಿಕೆ ಮಾಡಿಲ್ಲ. ಕೆಅರ್.ಎಸ್ ಬಿರುಕು ವಿಚಾರದಲ್ಲಿ ನಾನು ಯಾರ ಬಗ್ಗೆಯೂ ಮಾತನಾಡಿಲ್ಲ. ನಾನು ಗಣಿ ಸಚಿವರನ್ನ ಕರೆದುಕೊಂಡು ಹೋಗಿ ತೋರಿಸಿದ್ದೇನೆ. ಆಗ 100 ಕೋಟಿ ದಂಡ ಹಾಕಿದ್ದಾರೆ. ಯಾಕೆ ಕುಮಾರಸ್ವಾಮಿ ಹೀಗೆ ಮಾತಾಡ್ತಿದ್ದಾರೆ ಗೊತ್ತಿಲ್ಲ ಎಂದು ಹೇಳಿದರು.
ಅಕ್ರಮ ಗಣಿಗಾರಿಕೆ ತನಿಖೆಗೆ ನಾನು ಒತ್ತಾಯ ಮಾಡ್ತೀನಿ. ಕುಮಾರಸ್ವಾಮಿ ಅವರಿಗೆ ಯಾಕೆ ಈ ಆತಂಕ ಗೊತ್ತಿಲ್ಲ. ಕುಮಾರಸ್ವಾಮಿ ಮಾತಿನಿಂದ ಅವರ ಸಂಸ್ಕಾರ, ಅವರ ವ್ಯಕ್ತಿತ್ವ ಏನು ಅಂತ ತೋರಿಸುತ್ತಿದ್ದಾರೆ. ಮಾತಾಡಲಿ ಬಿಡಿ ಎಂದು ಸಂಸದೆ ತಿಳಿಸಿದರು. ಇದನ್ನೂ ಓದಿ: ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಿಎಸ್‍ವೈ ಭೇಟಿಯಾದ ಹೆಚ್‍ಡಿಕೆ
ಮಂಡ್ಯ ಹಾಲು ಉತ್ಪಾದಕ ಮಂಡಳಿ ಅಕ್ರಮ ವಿಚಾರಕ್ಕೆ ಪ್ರತಿಕ್ರಿಯಿಸಿ, ಗೊತ್ತಿದ್ರು ಕುಮಾರಸ್ವಾಮಿ ಯಾಕೆ ಸುಮ್ಮನೆ ಇದ್ದಾರೆ. ಇದಕ್ಕೆ ಯಾವುದೇ ಉತ್ತರ ಇಲ್ಲ. ಸ್ಕ್ಯಾಮ್ ಮಾಡೋವಾಗ ಕುಮಾರಸ್ವಾಮಿ ಸುಮ್ಮನೆ ಇದ್ದರು. ನಾನು ಕೆ.ಆರ್.ಎಸ್ ಬಗ್ಗೆ ಮಾತಾಡಿದಾಗ ಯಾಕೆ ಕುಮಾರಸ್ವಾಮಿ ಮಾತಾಡಬೇಕು. ಮೈಮೂಲ್ ಅಕ್ರಮದ ಬಗ್ಗೆ ಕುಮಾರಸ್ವಾಮಿ ಯಾಕೆ ಮಾತಾಡಿಲ್ಲ. ಮಂಡ್ಯದಲ್ಲಿ ಏನ್ ನಡೆಯುತ್ತಿದೆ ಎಲ್ಲರಿಗೂ ಗೊತ್ತಿದೆ. ಸಿಐಡಿ ತನಿಖೆ ಆಗ್ತಿದೆ. ಸತ್ಯ ಹೊರ ಬರುತ್ತೆ ಎಮದು ಕುಮಾರಸ್ವಾಮಿ ವಿರುದ್ದ ಸುಮಲತಾ ವಾಗ್ದಾಳಿ ನಡೆಸಿದರು.