ಚಾಮರಾಜನಗರ: ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಅವರದ್ದು, ಬರೀ ಹಿಟ್ ಅಂಡ್ ರನ್ ಕೇಸ್. ಎಲ್ಲ ತಮಗೇ ಗೊತ್ತಿದೆ ಅನ್ಕೊಂಡಿದ್ದಾರೆ ನನ್ನತ್ರ ಸಿಡಿ ಇದೆ, ಕ್ಯಾಸೆಟ್ ಇದೆ ಅಂತಾರೆ. ಇದ್ದರೆ ಬಿಡುಗಡೆ ಮಾಡಲಿ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಸವಾಲು ಹಾಕಿದ್ದಾರೆ.
ಚಾಮರಾಜನಗರದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಲೋಕಲ್ ರಾಜಕೀಯ ಮಾಡುತ್ತಾ ಮೈಲೇಜ್ ತೆಗೆದುಕೊಳ್ಳಲು ಹೊರಟಿದ್ದಾರೆ. ಇವರಿಗೆ ರಾಷ್ಟ್ರ ಹಾಗೂ ರಾಜ್ಯದ ಸಮಸ್ಯೆಗಳು ಬೇಕಿಲ್ಲ ಎಂದು ಆರೋಪಿಸಿದರು.
ಜವಾಬ್ದಾರಿ ಸ್ಥಾನದಲ್ಲಿರುವ ಕುಮಾರಸ್ವಾಮಿ ಸುಮಲತಾ ಕೆಸರೆರಚಾಟ ಸರಿಯಲ್ಲ. ತಮ್ಮ ವೈಫಲ್ಯತೆಗಳನ್ನು ಮುಚ್ಚಿಕೊಳ್ಳಲು ಇಬ್ಬರೂ ಬೀದಿಜಗಳ ಆಡುತ್ತಿದ್ದಾರೆ. ಜನರು ಸಂಕಷ್ಟದಲ್ಲಿರುವಾಗ ಇವರು ಜಗಳ ಆಡುವ ಅವಶ್ಯಕತೆ ಇದೆಯಾ..? ಕೋವಿಡ್ ಸಂಕಷ್ಟದಲ್ಲಿ ಇವರು ಯಾರ ಮನೆ ಬಳಿ ಹೋಗಿದ್ದಾರೆ, ಯಾರ ಕಷ್ಟ ಆಲಿಸಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅಂಬರೀಶ್‍ಗೆ ನಾನೇನು ಗುಲಾಮನಾಗಿದ್ನಾ: ಫೋಟೋ ವೈರಲ್‍ಗೆ ಹೆಚ್‍ಡಿಕೆ ಪ್ರಶ್ನೆ
ಹೀಗೆ ಪರಸ್ಪರ ಜಗಳ ಆಡುವುದು ಇಬ್ಬರಿಗು ಗೌರವ ಅಲ್ಲ. ಜನರ ಹಿತಾಸಕ್ತಿ ದೃಷ್ಟಿಯಿಂದ ಕೆಲಸ ಮಾಡುವುದು ಬಿಟ್ಟು ಹೀಗೆ ಜಗಳವಾಡುತ್ತಿದ್ದರೆ ಜನ ನಗಲ್ಲವೇ ಎಂದ ಅವರು, ಮನ್ಮುಲ್ ಹಗರಣ ಇದೆ. ಸಕ್ಕರೆ ಕಾರ್ಖಾನೆ ವಿಚಾರ ಇದೆ. ಕೆ.ಅರ್.ಎಸ್ ವಿಚಾರ ಇದೆ. ಇದೆಲ್ಲವನ್ನು ಬಿಟ್ಟು ಬೀದಿ ಜಗಳ ಆಡುವುದು ಎಷ್ಟು ಸರಿ ಎಂದು ಚಲುವರಾಯಸ್ವಾಮಿ ಪ್ರಶ್ನಿಸಿದರು. ಇದನ್ನೂ ಓದಿ: ಸುಮಲತಾರಿಗೆ ರಾಜಕಾರಣದಲ್ಲಿ ಅನುಭವದ ಕೊರತೆ ಇದೆ: ನಿಖಿಲ್
ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ಸತ್ಯ ಎಂದ ಅವರು, ಕೆ.ಆರ್.ಎಸ್ ಗೆ ಹಾನಿಯುಂಟು ಮಾಡುವ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಲ್ಲಿಸಬೇಕು. ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯ ಕೊನೆಯಲ್ಲಿ ಅಕ್ರಮಗಣಿಗಾರಿಕೆ ಬಯಲಿಗೆ ಬಂತು. ಅವರು ಕೂಡ ತನಿಖೆಗೆ ಆದೇಶ ಕೊಟ್ಟಿದ್ದರು. ಆ ಬಳಿಕ ಕುಮಾರಸ್ವಾಮಿ ನಂತರ ಯಡಿಯೂರಪ್ಪ ಸಿಎಂ ಆದರು. ಅದು ಅಲ್ಲಿಗೆ ನಿಂತು ಹೋಯಿತು. ಸರ್ಕಾರ ಹೀಗೆ ಉದಾಸೀನ ಮಾಡಿದರೆ ಈ ರೀತಿ ಕೆಸರೆರೆಚಾಟ ನಡೆಯುತ್ತಾ ಇರುತ್ತದೆ ಎಂದು ಚಲುವರಾಯಸ್ವಾಮಿ ಹೇಳಿದರು. ಇದನ್ನೂ ಓದಿ: ಅಂಬರೀಶ್ ಪಾರ್ಥಿವ ಶವ ತಂದಿದ್ದೇ ಹೆಚ್‍ಡಿಕೆ, ಆ ಫೋಟೋವನ್ನೂ ವೈರಲ್ ಮಾಡ್ಲಿ: ಕೆಟಿಎಸ್ ಆಗ್ರಹ