ಹುಬ್ಬಳ್ಳಿ: ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ ಜ್ಞಾನ ದೀವಿಗೆ ಅಭಿಯಾನ ನಿರಂತರವಾಗಿ ಸಾಗಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಇಂದು ಸಹ ನಗರದ ಹೊಸೂರು ಸರ್ಕಾರಿ ಶಾಲೆ ನಂ-16ರ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ದಾನಿಗಳು ಟ್ಯಾಬ್ ವಿತರಿಸಿದರು.
ಹುಬ್ಬಳ್ಳಿಯ ಉದ್ಯಮಿ ಹಾಗೂ ಮಜೇಥೀಯಾ ಫೌಂಡೇಶನ್ ಸಂಸ್ಥಾಪಕ ಜಿತೇಂದ್ರ ಮಜೇಥೀಯಾ ಹಾಗೂ ಪಬ್ಲಿಕ್ ಟಿವಿ ನೀಡಿದ ಟ್ಯಾಬ್ ಗಳನ್ನ ಹೂಸೂರು ಸರ್ಕಾರಿ ಶಾಲೆಯ 39 ಮಕ್ಕಳಿಗೆ ವಿತರಿಸಲಾಯಿತು.
Advertisement
Advertisement
ಹುಬ್ಬಳ್ಳಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ, ಮಜೇಥೀಯಾ ಫೌಂಡೇಶನ್ ಸಂಸ್ಥಾಪಕ ಜಿತೇಂದ್ರ ಮಜೇಥೀಯಾ, ಮಜೇಥೀಯಾ ಫೌಂಡೇಶನ್ ಕಾರ್ಯದರ್ಶಿ ಅಮರೇಶ ಹಿಪ್ಪರಗಿ, ಶಾಲಾ ಮುಖ್ಯೋಪಾಧ್ಯಾಯರು ಮಕ್ಕಳಿಗೆ 19 ಟ್ಯಾಬ್ ಗಳನ್ನ ವಿತರಿಸಿದರು.
Advertisement
ಟ್ಯಾಬ್ ವಿತರಿಸಿ ಮಾತನಾಡಿದ ದಾನಿಗಳಾದ ಜೀತೇಂದ್ರ ಮಂಜೇಂಥಿಯಾ, ಪಬ್ಲಿಕ್ ಟಿವಿಯ ಮುಖ್ಯಸ್ಥ ಎಚ್.ಆರ್.ರಂಗನಾಥರು ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಟ್ಯಾಬ್ ವಿತರಿಸುವ ಮೂಲಕ ಮಕ್ಕಳ ಜ್ಞಾನಾರ್ಜನೆ ಅಭಿಯಾನ ಆರಂಭಿಸಿರುವುದು ಉತ್ತಮ ಕಾರ್ಯವಾಗಿದೆ. ಹೀಗಾಗಿ ಪಬ್ಲಿಕ್ ಟಿವಿಯ ಅಭಿಯಾನಕ್ಕೆ ನಮ್ಮಿಂದ ದೇಣಿಗೆ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಟ್ಯಾಬ್ ಕೊಡಿಸಲು ಕೈ ಜೋಡಿಸಿದ್ದೇವೆ ಎಂದರು.
Advertisement
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ ಮಾತನಾಡಿ, ಸರ್ಕಾರ ಮಾಡಬೇಕಾದ ಕಾರ್ಯವನ್ನು ಇಂದು ಸಮಾಜಿಕ ಕಳಕಳಿ ಹೊಂದಿರುವ ಪಬ್ಲಿಕ್ ಟಿವಿ ಮಾಡುತ್ತಿದೆ. ಪಬ್ಲಿಕ್ ಟಿವಿಯ ಈ ಅಭಿಯಾನದಿಂದ ಮಕ್ಕಳ ಫಲಿತಾಂಶ ಮತ್ತಷ್ಟು ಸುಧಾರಿಸಲಿದೆ. ಪಬ್ಲಿಕ್ ಟಿವಿ ಅಭಿಯಾನದಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ಸಾಕಷ್ಟು ನೆರವು ದೊರೆತಿದೆ ಎಂದರು.
ಟ್ಯಾಬ್ ವಿತರಣೆ ಸಮಾರಂಭದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಹೂಸೂರು ಸರ್ಕಾರಿ ಶಾಲೆಯ ಎಸ್‍ಡಿಎಂಸಿ ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಮಜೇಥೀಯಾ ಫೌಂಡೇಶನ್ ಪದಾಧಿಕಾರಿಗಳು ಭಾಗವಹಿಸಿದ್ದರು.