ಮುಂಬೈ: ಕೇಂದ್ರ ಸರ್ಕಾರದ ಬಜೆಟ್ ಅಂಶಗಳು ಹೂಡಿಕೆದಾರರಿಗೆ ಇಷ್ಟವಾಗಿದ್ದು ಒಂದೇ ದಿನದಲ್ಲಿ ಭಾರೀ ಏರಿಕೆ ಕಂಡಿದೆ. ಬಾಂಬೆ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 2,315 ಅಂಕ ಏರಿಕೆಯಾಗಿದ್ದರೆ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ 646 ಅಂಕ ಏರಿಕೆಯಾಗಿದೆ.
ಹಲವು ಮಾನದಂಡಗಳಿಂದ ಸರ್ಕಾರ ಮಂಡಿಸಿದ ಬಜೆಟ್ ಚೆನ್ನಾಗಿದೆಯೋ ಇಲ್ಲವೋ ಎಂಬುದನ್ನು ವಿಶ್ಲೇಷಿಸಲಾಗುತ್ತದೆ. ಈ ಮಾನದಂಡಗಳ ಪೈಕಿ ಷೇರು ಮಾರುಕಟ್ಟೆಯೂ ಒಂದು ಮಾನದಂಡವಾಗಿ ಪರಿಗಣಿಸಲಾಗುತ್ತದೆ.
Sensex’s rise after Budget 2021 highest in 10 years!
Congratulations to @nsitharaman ???????? #Budget2021 #AtmaNirbharBharatKaBudget #Budget2021 pic.twitter.com/V5emK5Mtn6
— ???????????????????? ???????????????????? (@Rahulk123d) February 1, 2021
50 ಸಾವಿರದ ಗಡಿ ದಾಟಿದ್ದ ಸೆನ್ಸೆಕ್ಸ್ ಕೆಲ ದಿನಗಳಿಂದ ಕುಸಿತ ಕಾಣುತ್ತಿತ್ತು. ಆದರೆ ಇಂದು ನಿರ್ಮಲಾ ಸೀತರಾಮನ್ ಮಂಡಿಸಿದ್ದ ಬಜೆಟ್ ಹೂಡಿಕೆದಾರರಿಗೆ ಇಷ್ಟವಾಗಿದೆ ಎಂದು ವಿಶ್ಲೇಷಿಸಲಾಗುತ್ತದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲು ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಸೆನ್ಸೆಕ್ಸ್ 400 ಅಂಕ ಏರಿಕೆ ಕಂಡಿತು. ಬಳಿಕ ಮಧ್ಯಾಹ್ನದ ಹೊತ್ತಿಗೆ 1,500 ಅಂಕಕ್ಕೆ ಜಿಗಿಯಿತು. ಹೀಗೆ ನಾಗಾಲೋಟವನ್ನು ಮುಂದುವರಿಸಿದ್ದ ಸೆನ್ಸೆಕ್ಸ್ ಒಟ್ಟು 2,315 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿತು.
ಈ ಮೂಲಕ ಕಳೆದ 10 ವರ್ಷಗಳ ಬಜೆಟ್ ದಿನಗಳಿಗೆ ಹೋಲಿಸಿದರೆ ಅತೀ ಹೆಚ್ಚು ಅಂಕ ಏರಿಕೆಯಾಗುವ ಮೂಲಕ ದಾಖಲೆ ಬರೆದಿದೆ. ಕಳೆದ ವರ್ಷ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ ಬಳಿಕ ಸೆನ್ಸೆಕ್ಸ್ 700 ಅಂಕ ಕುಸಿದಿತ್ತು. ನಿಫ್ಟಿ 647 ಅಂಕಗಳಷ್ಟು ಅಂದರೆ ಶೇ.4.74ರಷ್ಟು ಏರಿಕೆ ಕಂಡು 14,281ಕ್ಕೆ ತಲುಪುವ ಮೂಲಕ ಬಜೆಟ್ ದಿನದ ದಾಖಲೆ ಬರೆದಿದೆ.
ಪ್ರಮುಖವಾಗಿ ಬ್ಯಾಂಕಿಂಗ್ ಸೆಕ್ಟರ್‍ನ ಶೇರುಗಳಲ್ಲಿ ಏರಿಕೆ ಕಂಡಿದ್ದು, ಬಜಾಜ್ ಫಿನ್‍ಸರ್ವ್, ಇಂಡಸ್‍ಲ್ಯಾಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಸ್‍ಬಿಐ, ಎಲ್ ಆ್ಯಂಡ್ ಟಿ ಹಾಗೂ ಎಚ್‍ಡಿಎಫ್‍ಸಿ ಶೇರುಗಳಲ್ಲಿ ಶೇ.15.16ರಷ್ಟು ಭಾರೀ ಪ್ರಮಾಣದ ಬೆಳವಣಿಗೆ ಕಂಡಿದೆ.
ಕಳೆದ 10 ವರ್ಷಗಳಲ್ಲಿ ಬಜೆಟ್ ಸಂದರ್ಭದಲ್ಲಿ ಶೇರು ಮಾರುಕಟ್ಟೆಯಲ್ಲಿ ಏರಿಕೆ ಕಾಣುತ್ತಿರುವುದು ಇದು ನಾಲ್ಕನೇ ಬಾರಿಯಾಗಿದೆ. ಅದರಲ್ಲೂ ಈ ಬಾರಿ ಬಾನೆತ್ತರಕ್ಕೆ ಜಿಗಿದಿದ್ದು, ಬಜೆಟ್ ದಿನ ಹಿಂದೆಂದಿಗಿಂತಲೂ ಅತೀ ಹೆಚ್ಚು ಏರಿಕೆ ಕಂಡಿದೆ. ಈ ಮೂಲಕ ಹೂಡಿಕೆದಾರರಲ್ಲಿ ಸಂತಸ ಮೂಡಿಸಿ ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ.