ಹುಡುಗಿಯ ಕೈ ಹಿಡಿದ ಬಿಗ್‍ಬಾಸ್ ವಿನ್ನರ್ – ಶೀಘ್ರದಲ್ಲಿ ಶೈನ್ ಶೆಟ್ಟಿಯಿಂದ ಸರ್ಪ್ರೈಸ್

Public TV
2 Min Read
shine 1

ಬೆಂಗಳೂರು: ಕಿರುತೆರೆ ನಟ, ಬಿಗ್‍ಬಾಸ್ ವಿನ್ನರ್ ಶೈನ್ ಶೆಟ್ಟಿ ಬಿಗ್‍ಬಾಸ್ ಮನೆಗೆ ಹೋಗಿ ಬಂದ ನಂತರ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಶೈನ್ ಸದಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಆಗಾಗ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಶೈನ್ ಶೆಟ್ಟಿ ಶೇರ್ ಮಾಡಿರುವ ವಿಡಿಯೋ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಹೊಸ ರೂಪದಲ್ಲಿ ಫುಡ್ ಟ್ರಕ್ ಆರಂಭಿಸಿದ ಬಿಗ್‍ಬಾಸ್ ವಿನ್ನರ್

shine a

ಹೌದು, ಬಿಗ್‍ಬಾಸ್ ವಿನ್ನರ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಒಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಶೈನ್ ಒಂದು ಕಾಫಿ ಶಾಪ್‍ನಲ್ಲಿ ಕುಳಿತಿದ್ದು, ಟೇಬಲ್ ಮೇಲೆ ಒಂದು ಕಪ್ ಕಾಫಿ ಮತ್ತು ಒಂದು ಪುಸ್ತಕ ಇರುವುದನ್ನು ಕಾಣಬಹುದಾಗಿದೆ. ಜೊತೆಗೆ ಶೈನ್ ಎದುರು ಯಾವುದೋ ಹುಡುಗಿ ಕುಳಿತಿದ್ದಾರೆ. ಆದರೆ ವಿಡಿಯೋದಲ್ಲಿ ಹುಡುಗಿ ಯಾರೆಂಬುದು ಕಾಣಿಸುವುದಿಲ್ಲ.

shine shetty cinema

ಅಲ್ಲದೇ ಶೈನ್ ತಮ್ಮ ಎದುರು ಕುಳಿತಿರುವ ಹುಡುಗಿಯ ಮುಂದೆ ಕೈ ಚಾಚಿದ್ದಾರೆ. ಆಗ ಆ ಹುಡುಗಿಯ ಶೈನ್ ಶೆಟ್ಟಿಗೆ ತಮ್ಮ ಕೈಯನ್ನು ಕೊಟ್ಟಿದ್ದಾರೆ. ನಂತರ ಶೈನ್ ಹುಡುಗಿಯ ಕೈ ಹಿಡಿದು ಆಕೆಯನ್ನೇ ನೋಡುತ್ತಿರುವುದನ್ನು ಕಾಣಬಹುದು. ರೊಮ್ಯಾಂಟಿಕ್ ವಿಡಿಯೋವನ್ನು ಪೋಸ್ಟ್ ಮಾಡಿ, “ಹಳೆ ಪುಸ್ತಕ, ಹೊಸ ನವಿಲುಗರಿ” ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಇದರ ಬಗ್ಗೆ ಒಂದು ವಿಶೇಷತೆ ಇದೆ. ಇದಕ್ಕಾಗಿ ಕಾಯಿರಿ ಎಂದು ಹೇಳಿದ್ದಾರೆ.

vlcsnap 2020 09 23 19h32m58s142 e1600870518968

ಶೈನ್ ವಿಡಿಯೋ ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ಆ ಹುಡುಗಿ ಶೈನ್ ಶೆಟ್ಟಿ ಮದುವೆಯಾಗುತ್ತಿರುವ ಯುವತಿ ಇರಬೇಕು ಎಂದು ಕಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಶೈನ್ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದ್ದು, ತಮಗೆ ಪರಿಚಯ ಇರುವ ಹುಡುಗಿಯನ್ನೇ ವಿವಾಹವಾಗುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಶೈನ್ ಅಧಿಕೃತವಾಗಿ ತಮ್ಮ ಮದುವೆ ಮತ್ತು ಆ ಹುಡುಗಿಯ ಬಗ್ಗೆ ರಿವೀಲ್ ಮಾಡಿಲ್ಲ.

Shine Shetty 770x400 1

ಅಭಿಮಾನಿಗಳು ಶೈನ್ ಶೆಟ್ಟಿ ಯಾವಾಗ ಹುಡುಗಿಯನ್ನು ಪರಿಚಯಿಸುತ್ತಾರೆ, ಆ ಹುಡುಗಿ ಯಾರು ಎಂದು ಕಾತುರದಿಂದ ಕಾಯುತ್ತಿದ್ದಾರೆ. ಕೆಲವರು ದೀಪಿಕಾ ದಾಸ್ ಎಂತಲೂ ಕಮೆಂಟ್ ಮಾಡಿದ್ದಾರೆ. ಯಾಕೆಂದರೆ ಬಿಗ್‍ಬಾಸ್ ಮನೆಯಲ್ಲಿದ್ದಾಗ ಶೈನ್ ಶೆಟ್ಟಿ ಮತ್ತು ದೀಪಿಕಾ ದಾಸ್ ಇಬ್ಬರ ಮಧ್ಯೆ ಪ್ರೇಮವಿದೆ ಎಂಬ ಚರ್ಚೆ ಆಗಿತ್ತು.

shine shetty copy

ಇತ್ತೀಚೆಗಷ್ಟೆ ಶೈನ್ ಶೆಟ್ಟಿ ತಮ್ಮ ಫುಡ್ ಟ್ರಕ್‍ಗೆ ಹೊಸ ರೂಪ ನೀಡಿ ಮತ್ತೆ ಪ್ರಾರಂಭಿಸಿದ್ದಾರೆ. ಶೈನ್ ಶೆಟ್ಟಿ ಸಿನಿಮಾದಲ್ಲಿ ನಟಿಸಬೇಕು ಎಂಬ ಕನಸು ಕಂಡಿದ್ದರು. ಆದರೆ ಅವಕಾಶಗಳು ಸಿಗದಿದ್ದಾಗ ಟ್ರಕ್ ಫುಡ್ ಮೂಲಕ ಶೈನ್ ಜೀವನ ಸಾಗಿಸುತ್ತಿದ್ದರು. ನಂತರ ರಿಯಾಲಿಟಿ ಶೋ ಬಿಗ್‍ಬಾಸ್‍ಗೆ ಹೋಗಲು ಆಫರ್ ಬಂದಿತ್ತು. ಶೈನ್ ಬಿಗ್‍ಬಾಸ್ ಮನೆಗೆ ಹೋಗಿದ್ದಾಗ ಅವರ ತಾಯಿ ಈ ಫುಡ್ ಟ್ರಕ್ ನಿಭಾಯಿಸಿಕೊಂಡು ಹೋಗುತ್ತಿದ್ದರು.

https://www.instagram.com/p/CFaR2oEjdZV/?utm_source=ig_web_copy_link

ಮತ್ತೆ ಕೊರೊನಾ ಲಾಕ್‍ಡೌನ್‍ನಿಂದ ಗಲ್ಲಿ ಕಿಚನ್ ಅನ್ನು ಕ್ಲೋಸ್ ಮಾಡಲಾಗಿತ್ತು. ಲಾಕ್‍ಡೌನ್ ಸಡಿಲಿಕೆ ಆದ ಮೇಲೂ ಜನರ ಆರೋಗ್ಯ ದೃಷ್ಟಿಯಿಂದ ಇನ್ನೂ ಕೆಲವು ದಿನ ಫುಡ್ ಟ್ರಕ್ ಓಪನ್ ಮಾಡುವುದಿಲ್ಲ ಎಂದು ಶೈನ್ ಶೆಟ್ಟಿ ತಿಳಿಸಿದ್ದರು. ಇದೀಗ ಮತ್ತೆ ‘ಗಲ್ಲಿ ಕಿಚನ್’ ಫುಡ್ ಟ್ರಕ್ ಆರಂಭಿಸಿದ್ದಾರೆ. ಸದ್ಯಕ್ಕೆ ಶೈನ್ ಶೆಟ್ಟಿ ನಿರ್ದೇಶಕ ರಿಷಬ್ ಶೆಟ್ಟಿ ಅವರ ಬಹುನಿರೀಕ್ಷೆಯ ‘ರುದ್ರ ಪ್ರಯಾಗ’ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *