ಧಾರವಾಡ: ಖಾಲಿ ಬಂಡಿ ಓಡಿಸುವ ಸ್ಪರ್ಧೆಯಲ್ಲಿ ಸೋಲನ್ನೇ ಕಾಣದ ಎತ್ತು ತನ್ನ ಹುಟ್ಟುಹಬ್ಬ ಆಚರಿಸಿಕೊಂಡಿದೆ.
ಧಾರವಾಡ ತಾಲೂಕಿನ ಬೆಳ್ಳಿಗಟ್ಟಿ ಗ್ರಾಮದ ಕಲ್ಲಪ್ಪ ತೇಗೂರು ಎಂಬುವವರಿಗೆ ಸೇರಿದ ಈ ಎತ್ತು, ಖಾಲಿ ಬಂಡಿ ಓಡಿಸುವ ಸ್ಪರ್ಧೆಯಲ್ಲಿ ಸೋಲನ್ನೇ ಕಂಡಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ನಡೆದ ರಾಜ್ಯಮಟ್ಟದ ಖಾಲಿ ಬಂಡಿ ಓಡಿಸುವ ಸ್ಪರ್ಧೆಯಲ್ಲಿ ಪ್ರಥಮ, ಹಾನಗಲ್ ತಾಲೂಕಿನಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ, ಕಲಘಟಗಿ ತಾಲೂಕಿನ ದಾಸ್ತಿಕೊಪ್ಪದಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ, ಹುಲಿಕಟ್ಟಿ ಗ್ರಾಮದಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಈ ಎತ್ತು ಗಿಟ್ಟಿಸಿಕೊಂಡು ತನ್ನ ಮಾಲೀಕನಿಗೆ ನಗದು ಹಾಗೂ ಚಿನ್ನದ ಬಹುಮಾನ ತಂದುಕೊಟ್ಟಿದೆ. ಇದನ್ನೂ ಓದಿ: ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಬೈಕ್- ಓರ್ವ ಸಾವು, ಮತ್ತೋರ್ವ ಬಚಾವ್
ಈ ಎತ್ತಿಗೆ ಸೋಲಿಲ್ಲದ ಸರದಾರ ಎಂದು ಹೆಸರಿಡಲಾಗಿದ್ದು, ಬೆಳ್ಳಿಗಟ್ಟಿ ಗ್ರಾಮದ ಜನರೆಲ್ಲ ಸೇರಿಕೊಂಡು ಆ ಎತ್ತನ್ನು ಸಿಂಗರಿಸಿ, ಕೇಕ್ ಕಟ್ ಮಾಡುವ ಮೂಲಕ ಜನ್ಮ ದಿನವನ್ನು ಆಚರಿಸಿದ್ದಾರೆ. ಈ ವೇಳೆ ಇಡಿ ಗ್ರಾಮವನ್ನೇ ಕರೆದು ಕೆಕ್ ಹಂಚಿದ ಮಾಲಿಕ ಕಲ್ಲಪ್ಪ, ಈ ಎತ್ತಿನ ಜನ್ಮದಿನ ಪ್ರತಿ ವರ್ಷ ಆಚರಣೆ ಮಾಡುತ್ತ ಬಂದಿದ್ದೆನೆ ಎಂದು ಹೇಳಿದರು.