ಯಾದಗಿರಿ: ಹುಂಜ ಪಂದ್ಯದ ಮೂಲಕ ಜೂಜಾಟ ನಡೆಯುತ್ತಿದ್ದ ಅಡ್ಡೆ ಮೇಲೆ ರೈಡ್ ಮಾಡಿರುವ ಪೊಲೀಸರು, ಪಂದ್ಯಾಟದಲ್ಲಿ ಬಳಸಿಕೊಂಡ ಹುಂಜಗಳ ಜೊತೆಗೆ ಜೂಜುಕೋರರನ್ನು ವಶಕ್ಕೆ ಪಡೆದಿದ್ದಾರೆ.
Advertisement
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಹಲವಾರು ತಿಂಗಳುಗಳಿಂದ ಜೂಜು ನಡೆಯುತ್ತಿರುವ ಬಗ್ಗೆ ಸುರಪುರ ಠಾಣೆಗೆ ದೂರುಗಳು ಕೇಳಿ ಬಂದಿದ್ದವು. ಇಂದು ಸುರಪುರ ತಾಲೂಕಿನ ಕರ್ನಾಳ ಗ್ರಾಮದ ಹೊರ ವಲಯದಲ್ಲಿ ಜೂಜಾಟ ನಡೆಯುತ್ತಿರುವ ಖಚಿತ ಮಾಹಿತಿ ಪಡೆದ ಸುರಪುರ ಪೊಲೀಸರು, ಅಡ್ಡೆ ಮೇಲೆ ದಾಳಿ ಮಾಡಿ ಹುಂಜಗಳ ಜೊತೆಗೆ ಹತ್ತು ಜನ ಜೂಜುಕೋರರನ್ನು ಮತ್ತು ಅವರೊಂದಿಗಿದ್ದ ನಗದನ್ನು ವಶಕ್ಕೆ ಪಡೆದಿದ್ದಾರೆ.
Advertisement
Advertisement
ಸುರಪುರ ಡಿವೈಎಸ್ಪಿ ವೆಂಕಟೇಶ್ ಹುಗಿಬಂಡಿ ಮಾರ್ಗದರ್ಶನದಲ್ಲಿ ಸುರಪುರ ಪಿಐ ಎಸ್.ಎಂ.ಪಾಟೀಲ್ ನೇತೃತ್ವದ ತಂಡ ಈ ದಾಳಿ ನಡೆಸಿ ಜೂಜುಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: 25 ದಿನದಿಂದ ಜೈಲಿನಲ್ಲಿ ಬಂಧಿಯಾಗಿರೋ ಹುಂಜಗಳು
Advertisement