Crime
25 ದಿನದಿಂದ ಜೈಲಿನಲ್ಲಿ ಬಂಧಿಯಾಗಿರೋ ಹುಂಜಗಳು

ಹೈದರಾಬಾದ್: ಎರಡು ಹುಂಜಗಳ ಕಳೆದ 25 ದಿನದಿಂದ ಜೈಲಿನಲ್ಲಿ ಬಂಧಿಯಾಗಿರುವ ವಿಚಿತ್ರ ಘಟನೆಯೊಂದು ತೆಲಂಗಾಣದ ಖಮ್ಮಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಮೊದಿಗೊಂಡ ಠಾಣೆಯ ಪೊಲೀಸರು ಜನವರಿ 10ರಂದು ಹುಂಜ ಪಂದ್ಯಗಳ ನಡೆಯುತ್ತಿದ್ದ ಸ್ಥಳದ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಎರಡು ಹುಂಜ, ಒಂದು ಬೈಕ್ ವಶಕ್ಕೆ ಪಡೆದು 10 ಜನರನ್ನು ಬಂಧಿಸಿದ್ದರು. ಬಂಧನಕ್ಕೊಳಗಾಗಿದ್ದ 10 ಜನ ಜಾಮೀನು ಪಡೆದು ಹೊರ ಬಂದಿದ್ದಾರೆ. ಹುಂಜಗಳಿಗೆ ಬಿಡುಗಡೆ ಭಾಗ್ಯ ಸಿಗದ ಹಿನ್ನೆಲೆ ಠಾಣೆಯ ಜೈಲಿನಲ್ಲಿ ಲಾಕ್ ಆಗಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, ದಾಳಿ ವೇಳೆ ವಶಕ್ಕೆ ಪಡೆಯಲಾದ ಹುಂಜಗಳನ್ನ ಪಡೆಯಲು ಯಾರು ಮುಂದಾಗಿಲ್ಲ. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಬಳಿಕವೇ ಹುಂಜಗಳನ್ನ ರಿಲೀಸ್ ಮಾಡಲಾಗುತ್ತೆ. ನ್ಯಾಯಾಲಯದ ಆದೇಶ ನೀಡಿದ ಬಳಿಕ ಹುಂಜಗಳನ್ನ ಹರಾಜು ಹಾಕಲಾಗುವುದು. ಹೆಚ್ಚು ಬಿಡ್ ಮಾಡಿದವರು ಹುಂಜಗಳನ್ನ ಖರೀದಿಸಬಹುದು ಎಂದು ಹೇಳಿದ್ದಾರೆ.
