– ಕುಮಾರಿಯಾಗಿ ಬಂದಾಕೆ ಶ್ರೀಮತಿ ಆಗಿ ಹೋದ ಯುವತಿ
ರಾಯ್ಪುರ: ಪ್ರೀತಿಸಿದ ಜೋಡಿ ಠಾಣೆಯ ಆವರಣದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಠಾಣೆಗೆ ಬಂದ ಯುವತಿಗೆ ಪ್ರೀತಿಸಿದವನ ಜೊತೆ ಪೊಲೀಸರು ಮದುವೆ ಮಾಡಿಸಿದ್ದಾರೆ. ಛತ್ತೀಸಗಢ ರಾಜ್ಯದ ಬುಂದೇಲಿ ಪೊಲೀಸ್ ಠಾಣೆಯಲ್ಲಿ ಪೊಲೀಸರ ಸಮ್ಮುಖದಲ್ಲಿ ಮದುವೆ ನಡೆದಿದೆ.
29 ವರ್ಷ ಟುಮನ್ ಪಟೇಲ್ ಬುಂದೇಲಿ ಠಾಣೆಗೆ ಆಗಮಿಸಿ ಪ್ರೀತಿಸಿದವನ ಜೊತೆ ಮದುವೆಗೆ ವಿರೋಧ ವ್ಯಕ್ತವಾಗುತ್ತಿದ್ದು, ರಕ್ಷಣೆ ನೀಡಿ ಎಂದು ಬಂದಿದ್ದಳು. ಟುಮನ್ ಛಿಂಧೌಲಿ ಗ್ರಾಮದ ನಿವಾಸಿಯಾಗಿದ್ದು, ಕಳೆದ ಎರಡು ವರ್ಷದಿಂದ ಬರ್ಕೆಲ್ ಗ್ರಾಮದ ರಾಮಕುಮಾರ್ ಪ್ರೀತಿಸುತ್ತಿದ್ದಳು. ಮನೆಯಲ್ಲಿ ವಿರೋಧ ವ್ಯಕ್ತವಾಗುತ್ತಲೇ ರಾಮ್ ಸಹ ಮದುವೆಯಿಂದ ಹಿಂದೆ ಸರಿದಿದ್ದನು. ಆದ್ರೆ ಯುವತಿ ಮಾತ್ರ ಪ್ರಿಯಕರನನ್ನು ಮದುವೆಯಾಗೋದಾಗಿ ಠಾಣೆ ಮೆಟ್ಟಿಲು ಏರಿದ್ದಳು.
ಪೊಲೀಸರು ಮೊದಲಿಗೆ ರಾಮ್ಕುಮಾರ್ ನನ್ನು ಕರೆಸಿ ಮಾತನಾಡಿದ್ದಾರೆ. ರಕ್ಷಣೆ ನೀಡಿದ್ರೆ ಮದುವೆ ಆಗೋದಾಗಿ ಹೇಳಿದ್ದಾನೆ. ನಂತರ ಪೊಲೀಸರು ಎರಡು ಕುಟುಂಬಸ್ಥರು ಕರೆಸಿ ತಿಳಿ ಹೇಳಿ ಮದುವೆಗೆ ಒಪ್ಪಿಸಿದ್ದಾರೆ. ಪೊಲೀಸ್ ಠಾಣೆಯ ಆವರಣದಲ್ಲಿಯೇ ಇಬ್ಬರ ಮದುವೆಯನ್ನ ನೆರೆವೇರಿಸಿದ್ದಾರೆ.