ಮಡಿಕೇರಿ: ಈ ಚಿತ್ರವನ್ನು ನೋಡಿ ಇದಾವುದೋ ಆಮೆ ಮರಿ ಅಥವಾ ಮೊಲದ ಮರಿ ಇರಬಹುದೆಂದು ನೀವು ಊಹಿಸಿದ್ದರೆ ಅದು ತಪ್ಪು. ಮೊಟ್ಟೆ ಮೊದಲೋ ಅಥವಾ ಕೋಳಿ ಮೊದಲೋ ಎಂಬ ಪ್ರಶ್ನೆಗೆ ಇನ್ನೂ ಉತ್ತರಕ್ಕೆ ತಡಕಾಟ ನಡೆಯುತ್ತಲೇ ಇದೆ. ಆದರೆ ಇಲ್ಲೊಂದು ಮನೆಯಲ್ಲಿ ಸಾಕಿದ ಕೋಳಿಯು ವಿಚಿತ್ರ ಆಕಾರದ ಮೊಟ್ಟೆಯನ್ನಿಟ್ಟು ಮನೆಯವರಿಗೆ ಅಚ್ಚರಿ ಉಂಟು ಮಾಡಿದೆ.
Advertisement
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕಡಂಗ ಗ್ರಾಮದ ಕೋಲೆಯಂಡ ರೇಖಾ ಪ್ರಸನ್ನ ಅವರ ಕೋಳಿಯೊಂದು ವಿಚಿತ್ರ ಮೊಟ್ಟಿಯನ್ನು ಇಟ್ಟಿದೆ. ಪ್ರತಿನಿತ್ಯ ಕೋಳಿ ಎಂದಿನಂತೆ ಮೊಟ್ಟೆ ಇಡುತ್ತಿತ್ತು. ಆದರೆ ಇಂದು ಕೋಳಿ ಇಟ್ಟ ಮೊಟ್ಟೆಯನ್ನು ನೋಡಿದ ಮನೆಯವರು ಆಶ್ಚರ್ಯಚಕಿತಕ್ಕೊಳಗಾಗಿದ್ದಾರೆ. ಇದನ್ನೂ ಓದಿ: ಕೇರಳ ಸಂಪರ್ಕ – ಕೊಡಗಿನ ಗ್ರಾಮದಲ್ಲಿ 72 ಮಂದಿಗೆ ಸೋಂಕು
Advertisement
Advertisement
ಮೊಟ್ಟೆಯು ಎಂದಿನಂತೆ ಇರದೇ ಅದು ವಿಚಿತ್ರ ಆಕೃತಿಯಲ್ಲಿ ಕಂಡುಬಂದಿದೆ. ಇದೀಗ ಈ ವಿಚಿತ್ರ ಕೋಳಿ ಮೊಟ್ಟೆ ಅಚ್ಚರಿಗೆ ಕಾರಣವಾಗಿದೆ. ಕೆಲವೊಮ್ಮೆ ಕೋಳಿಗೆ ಕ್ಯಾಲ್ಸಿಯಂ ಕೊರತೆಯಾದಾಗ ಈ ರೀತಿಯ ಮೊಟ್ಟೆ ಸೃಷ್ಟಿಯಾಗುತ್ತದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಅಪ್ಪಚ್ಚು ರಂಜನ್‍ಗೆ ಸಚಿವ ಸ್ಥಾನ ನೀಡಿ – ಬಿಜೆಪಿ ಕಾರ್ಯಕರ್ತರಿಂದ ಬೆಂಗಳೂರು ಚಲೋ