ಶಿಮ್ಲಾ: ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ವೀರಭದ್ರ ಸಿಂಗ್ ಇಂದು ಬೆಳಗಿನ ಜಾವ 3.40 ನಿಮಿಷಕ್ಕೆ ವಿಧಿವಶರಾಗಿದ್ದಾರೆ. ಇಂದಿರಾ ಗಾಂಧಿ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ವೀರಭದ್ರ ಸಿಂಗ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.
ಎರಡು ಬಾರಿ ಕೊರೊನಾ ಸೋಂಕಿಗೆ ವೀರಭದ್ರ ಸಿಂಗ್ ತುತ್ತಾಗಿದ್ದರು. ಚಿಕಿತ್ಸೆ ಪಡೆದು ಎರಡೂ ಬಾರಿ ಮಹಾಮಾರಿಯನ್ನು ಸೋಲಿಸಿದ್ದರು. ಕಳೆದು ಎರಡು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೀರಭದ್ರ ಸಿಂಗ್ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ವೆಂಟಿಲೇಟರ್ ನಲ್ಲಿರಿಸಲಾಗಿತ್ತು.
Advertisement
Himachal Pradesh | Former Himachal Pradesh Chief Minister & Congress leader Virbhadra Singh passes away at 87 after battling with prolonged illness in early hours of the day: Medical Superintendent Dr Janak Raj, Indira Gandhi Medical College and Hospital, Shimla
(File pic) pic.twitter.com/xPnGrpYfSI
— ANI (@ANI) July 7, 2021
Advertisement
ಹಿಮಾಚಲಪ್ರದೇಶದ ಪ್ರಮುಖ ನಾಯಕರಾಗಿದ್ದ, ವೀರಭದ್ರ ಸಿಂಗ್ ಒಟ್ಟು ಆರು ಬಾರಿ ಮುಖ್ಯಮಂತ್ರಿಯಾಗಿದ್ದರು. 9 ಬಾರಿ ಶಾಸಕ ಮತ್ತು 5 ಬಾರಿ ಸಂಸದರಾಗಿ ವೀರಭದ್ರ ಸಿಂಗ್ ಆಯ್ಕೆಯಾಗಿದ್ದರು. ವೀರಭದ್ರ ಸಿಂಗ್ ಅವರಿಗೆ 87 ವರ್ಷ ವಯಸ್ಸಾಗಿತ್ತು.