– ಹಿಂದಿ ಮಾತ್ರ ಬರೋದು, ಲೋನ್ ಕೊಡಲ್ಲ ಎಂದ ಬ್ಯಾಂಕ್ ವ್ಯವಸ್ಥಾಪಕ
ಚೆನ್ನೈ: ಹಿಂದಿ ಭಾಷೆ ಬಾರದ್ದಕ್ಕೆ ಸರ್ಕಾರಿ ನಿವೃತ್ತ ವೈದ್ಯರೊಬ್ಬರ ಸಾಲದ ಅರ್ಜಿಯನ್ನು ಬ್ಯಾಂಕ್ ವಜಾಗೊಳಿಸಿರುವ ಆಘಾತಕಾರಿ ಘಟನೆ ನಡೆದಿದೆ.
ತಮಿಳುನಾಡಿನ ಅರಿಯಾಲೂರು ಜಿಲ್ಲೆಯ ಜಯಂಕೊಂಡನ್‍ನಲ್ಲಿ ಘಟನೆ ನಡೆದಿದ್ದು, ವೈದ್ಯ ಬಾಲಸುಬ್ರಹ್ಮಣಿಯನ್ ಅವರ ಸಾಲದ ಅರ್ಜಿಯನ್ನು ವಜಾಗೊಳಿಸಲಾಗಿದೆ. ಇಂಡಿಯನ್ ಓವರ್‍ಸೀಸ್ ಬ್ಯಾಂಕ್‍ನ ಗಂಗಾಯಿಕೊಂಡ ಚೋಝಾಪುರಂ ಶಾಖೆಯ ಅಧಿಕಾರಿಗಳು ಈ ರೀತಿ ವರ್ತಿಸಿದ್ದಾರೆ. ವೈದ್ಯರು ಕಳೆದ 15 ವರ್ಷಗಳಿಂದ ಈ ಶಾಖೆಯಲ್ಲಿ ಬ್ಯಾಂಕ್ ಖಾತೆ ಹೊಂದಿದ್ದು, ಕೇವಲ ಹಿಂದಿ ಬಾರದ ಒಂದೇ ಕಾರಣಕ್ಕೆ ಸಾಲದ ಅರ್ಜಿಯನ್ನು ವಜಾಗೊಳಿಸಲಾಗಿದೆ.
ಸಾಲಕ್ಕಾಗಿ ವೈದ್ಯರು ಎಲ್ಲ ದಾಖಲೆಗಳನ್ನು ಒದಗಿಸಿದ್ದು, ಬ್ಯಾಂಕ್ ವ್ಯವಸ್ಥಾಪಕ ನನಗೆ ಹಿಂದಾ ಮಾತ್ರ ತಿಳಿದಿದೆ. ಸಾಲದ ಅರ್ಜಿಯನ್ನು ಎಂದು ಸಾಲದ ಅರ್ಜಿಯನ್ನು ಪುರಸ್ಕರಿಸಿಲ್ಲ. ಡಾ.ಬಾಲಸುಬ್ರಹ್ಮಣಿಯನ್ ಅವರು ಇದೀಗ ಬ್ಯಾಂಕ್‍ಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಅಲ್ಲದೆ ಮಾನಸಿಕ ಕಿರುಕುಳ ನೀಡಿದ್ದಕ್ಕೆ ಒಂದು ಲಕ್ಷ ರೂ. ಪರಿಹಾರದ ಬೇಡಿಕೆ ಇಟ್ಟಿದ್ದಾರೆ.
ಈ ಕುರಿತು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಆಕ್ರೋಶ ವ್ಯಕ್ತಪಡಿಸಿದ್ದು, ಬ್ಯಾಂಕ್ ವ್ಯವಸ್ಥಾಪಕರ ನಡೆಯನ್ನು ಖಂಡಿಸಿದ್ದು, ತಮಿಳರ ಭಾವನೆಗಳೊಂದಿಗೆ ಆಟವಾಡಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.