ಹಾಸನ: ಜಿಲ್ಲೆಯ ಅರಕಲಗೂಡಿನಲ್ಲಿರುವ ಬಟ್ಟೆ ಅಂಗಡಿ ಮತ್ತು ಮೊಬೈಲ್ ಅಂಗಡಿಗೆ ಕೊರೊನಾ ಸೋಂಕಿತ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಅಂಗಡಿಗಳನ್ನು ಸೀಲ್‍ಡೌನ್ ಮಾಡಲಾಗಿದೆ.
ಕೊಡಗಿನಲ್ಲಿ ಪಾಸಿಟಿವ್ ಬಂದ ಕೊರೊನಾ ಸೋಂಕಿತರೊಬ್ಬರು ಎರಡು ಬಾರಿ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕೊಣನೂರು ಪಟ್ಟಣದಲ್ಲಿರುವ ಬಟ್ಟೆ ಅಂಗಡಿ ಮತ್ತು ಮೊಬೈಲ್ ಶಾಪ್‍ಗೆ ಭೇಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈ ಎರಡು ಅಂಗಡಿಗಳನ್ನು ಜಿಲ್ಲಾಡಳಿತ ಸೀಲ್‍ಡೌನ್ ಮಾಡಿದೆ.
ಸೋಂಕಿತನ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿರುವ ನಿಟ್ಟಿನಲ್ಲಿ ಬಟ್ಟೆ ಅಂಗಡಿಯವರನ್ನು ಮತ್ತು ಮೊಬೈಲ್ ಶಾಪ್‍ನವರನ್ನು ಸೇರಿದಂತೆ ಒಟ್ಟು 12 ಜನರನ್ನು ಕೋವಿಡ್ ಟೆಸ್ಟ್ ಮಾಡಿಸಲು ಅರಕಲಗೂಡು ಪಟ್ಟಣದ ಆಸ್ಪತ್ರೆಗೆ ಕಳುಹಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ವೈದ್ಯಾಧಿಕಾರಿಗಳು ಸೋಂಕಿತನ ಜೊತೆ ಇನ್ನು ಎಷ್ಟು ಜನ ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.